Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಚಹಲ್‌ ಹೆಗಲೇರಿದ ಅನಗತ್ಯ ದಾಖಲೆ!

Chahal gives away most runs ever by an Indian bowler in World Cup match

ಬೆಂಗಳೂರು, ಜೂನ್‌ 30: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಯಲ್ಲಿ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಭರ್ಜರಿ ಪ್ರದರ್ಶನವನ್ನೇ ನೀಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಆದರೆ, ಭಾನುವಾರ ನಡೆದ ಇಂಗ್ಲೆಂಡ್‌ ವಿರುದ್ಧದ ಲೀಗ್‌ ಪಂದ್ಯದಲ್ಲಿ ಅನಗತ್ಯ ದಾಖಲೆಯೊಂದು ಚಹಲ್‌ ಅವರ ಹೆಗಲೇರಿದೆ. ಇಂಗ್ಲೆಂಡ್‌ ಎದುರು 10 ಓವರ್‌ ಬೌಲ್‌ ಮಾಡಿ 88 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಚಹಲ್‌ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್‌ ಬಿಟ್ಟುಕೊಟ್ಟ ಭಾರತೀಯ ಬೌಲರ್‌ ಎನಿಸಿದ್ದಾರೆ.

ಇದರೊಂದಿಗೆ 28 ವರ್ಷದ ಲೆಗ್ಗೀ ಯುಜ್ವೇಂದ್ರ ಚಹಲ್‌, 2003ರಲ್ಲಿ ಇದೇ ರೀತಿ ಅನಗತ್ಯದ ದಾಖಲೆ ಬರೆದಿದ್ದ ಮೈಸೂರು ಎಕ್ಸ್‌ಪ್ರೆಸ್‌ ಖ್ಯಾತಿಯ ವೇಗದ ಬೌಲರ್‌ ಕನ್ನಡಿಗ ಜಾವಗಲ್‌ ಶ್ರೀನಾಥ್‌ ಅವರ ದಾಖಲೆಯನ್ನು ಮುರಿದಿದ್ದಾರೆ. 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶ್ರೀನಾಥ್‌ 87 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಪಂದ್ಯವೊಂದರಲ್ಲೂ ಭಾರತದ ಪರ ಅತಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟ ದಾಖಲೆ ಕೂಡ ಚಹಲ್‌ ಅವರ ಹೆಸರಿನಲ್ಲಿದೆ. 2018ರ ಫೆ.21ರಂದು ಸೆಂಚೂರಿಯನ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 4 ಓವರ್‌ಗಳಲ್ಲಿ 64 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ಒಡಿಐ ವಿಶ್ವಕಪ್‌ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್‌ ಬಿಟ್ಟುಕೊಟ್ಟ ಭಾರತೀಯ ಬೌಲರ್‌ಗಳು

ಬೌಲರ್‌ ಎದುರಾಳಿ ವರ್ಷ ಬಿಟ್ಟುಕೊಟ್ಟ ರನ್
1. ಯುಜ್ವೇಂದ್ರ ಚಹಲ್‌ ಇಂಗ್ಲೆಂಡ್‌ 2019 88
2. ಜಾವಗಲ್‌ ಶ್ರೀನಾಥ್‌ ಆಸ್ಟ್ರೇಲಿಯಾ 2003 87
3. ಕರ್ಸನ್‌ ಘಾರ್ವಿ ಇಂಗ್ಲೆಂಡ್‌ 1975 83
4. ಆರ್‌. ಅಶ್ವಿನ್‌ ಜಿಂಬಾಬ್ವೆ 2015 75
5. ಮೋಹಿತ್‌ ಶರ್ಮಾ ಆಸ್ಟ್ರೇಲಿಯಾ 2015 75

Story first published: Sunday, June 30, 2019, 20:19 [IST]
Other articles published on Jun 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+