ಚಾಲೆಂಜರ್ಸ್ ಟ್ರೋಫಿ: ವಿಮೆನ್ ಬ್ಲೂ ತಂಡ ಚಾಂಪಿಯನ್ಸ್

ಆಲೂರು, ಆಗಸ್ಟ್ 21: ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಇಂಡಿಯಾ ವಿಮೆನ್ ರೆಡ್ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ವಿಮೆನ್ ಬ್ಲೂ ತಂಡ ಮೊದಲ ಮಹಿಳಾ ಟಿ20 ಚಾಲೆಂಜರ್ಸ್ ಟ್ರೋಫಿಯ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.
ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬ್ಲೂ ತಂಡ ನಾಲ್ಕು ರನ್‌ಗಳ ರೋಚಕ ಜಯ ಪಡೆಯಿತು.
ಟಾಸ್ ಗೆದ್ದ ರೆಡ್ ತಂಡ ಬ್ಲೂ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮಿಥಾಲಿ ರಾಜ್ ಅನುಪಸ್ಥಿತಿಯಲ್ಲಿ ಅನುಜಾ ಪಾಟೀಲ್ ನಾಯಕತ್ವದಲ್ಲಿ ಆಡಿದ ಬ್ಲೂ ತಂಡ ಆರಂಭದಲ್ಲಿ ಆರರ ಸರಾಸರಿಯಲ್ಲಿ ರನ್ ಕಲೆಹಾಕಿತು.
ದಯಾಳನ್ ಹೇಮಲತಾ ಅರ್ಧಶತಕದ ಅಂಚಿನಲ್ಲಿ ಎಡವಿದರು. ವಿ. ವನಿತಾ ಮತ್ತು ವಿಕೆಟ್ ಕೀಪರ್ ತಾನಿಯಾ ಭಾಟಿಯಾ ಉತ್ತಮ ಕೊಡುಗೆ ನೀಡಿದರು.
132 ರನ್ ಗುರಿಯನ್ನು ಬೆನ್ನತ್ತಿದ ರೆಡ್ ತಂಡಕ್ಕೆ ಪೂನಂ ರಾವತ್ ಮತ್ತು ನಾಯಕಿ ದೀಪ್ತಿ ಶರ್ಮಾ ಉತ್ತಮ ಆರಂಭ ಒದಗಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 14.3 ಓವರ್‌ಗಳಲ್ಲಿ 87 ರನ್ ಸೇರಿಸಿದರು. ಇದರಿಂದ ರೆಡ್ ತಂಡ ಸುಲಭ ಗೆಲುವು ದಾಖಲಿಸಲಿದೆ ಎಂದು ಭಾವಿಸಲಾಗಿತ್ತು.
ದೀಪ್ತಿ ಔಟಾದ ನಂತರ ಅರ್ಧಶತಕ ಗಳಿಸಿದ ಪೂನಂ ಕೂಡ ವಿಕೆಟ್ ಒಪ್ಪಿಸಿದರು. ಬಳಿಕ ರೆಡ್ ತಂಡದ ಆಟಗಾರ್ತಿಯರು ಪೆವಿಲಿಯನ್ ಪೆರೇಡ್ ನಡೆಸಿದರು. ಇದರಿಂದ ಗೆಲುವು ಬ್ಲೂ ಪಡೆಯ ಪಾಲಾಯಿತು.
ಸಂಕ್ಷಿಪ್ತ ಸ್ಕೋರ್
ಇಂಡಿಯಾ ವಿಮೆನ್ ಬ್ಲೂ: 131/7 (20) ದಯಾಳನ್ ಹೇಮಲತಾ 48, ವಿ. ವನಿತಾ 28, ತಾನಿಯ ಭಾಟಿಯಾ 28, ಶಿಖಾ ಪಾಂಡೆ 16/2, ಏಕ್ತಾ ಬಿಷ್ಟ್ 15/1
ಇಂಡಿಯಾ ವಿಮೆನ್ ರೆಡ್: 127/7 (20) ಪೂನಂ ರಾವತ್ 52, ದೀಪ್ತಿ ಶರ್ಮಾ 45, ಪೂನಂ ಯಾದವ್ 25/3, ರಾಧಾ ಯಾದವ್ 20/2.
ಫಲಿತಾಂಶ: ಇಂಡಿಯಾ ವಿಮೆನ್ ಬ್ಲೂ ತಂಡಕ್ಕೆ ನಾಲ್ಕು ರನ್ ಜಯ ಮತ್ತು ಚಾಲೆಂಜರ್ಸ್ ಟಿ20 ಟ್ರೋಫಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications