Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's Aisa Cup 2024: ಮಹಿಳಾ ಟಿ20 ಏಷ್ಯಾ ಕಪ್‌ನಲ್ಲಿ ದಾಖಲೆ ನಿರ್ಮಿಸಿದ ಚಾಮರಿ ಅಥಾಪತ್ತು

ಮಹಿಳಾ ಏಷ್ಯಾ ಕಪ್ ಇತಿಹಾಸದಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶ್ರೀಲಂಕಾದ ಚಾಮರಿ ಅಥಾಪತ್ತು ಇತಿಹಾಸ ನಿರ್ಮಿಸಿದರು.

ಸೋಮವಾರ, ಜುಲೈ 22ರಂದು ರಂಗೇರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮಲೇಷ್ಯಾ ಮಹಿಳಾ ತಂಡದ ವಿರುದ್ಧದ 2024ರ ಮಹಿಳಾ ಏಷ್ಯಾ ಕಪ್ 7ನೇ ಪಂದ್ಯದಲ್ಲಿ ಶ್ರೀಲಂಕಾ ಮಹಿಳಾ ತಂಡದ ನಾಯಕಿ ಚೊಚ್ಚಲ ಶತಕದ ಸಾಧನೆ ಮಾಡಿದರು.

Chamari Athapaththu Became the First Player to Hits a Century in the Women s T20 Asia Cup

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡದ ಜವಾಬ್ದಾರಿ ಹೊತ್ತುಕೊಂಡ ಆರಂಭಿಕ ಬ್ಯಾಟರ್ ಚಾಮರಿ ಅಥಾಪತ್ತು, 69 ಎಸೆತಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ ಅಜೇಯ 119 ರನ್ ಗಳಿಸಿದರು. ಅಂತಿಮವಾಗಿ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 184 ರನ್ ಕಲೆಹಾಕಿತು.

2018ರ ಏಷ್ಯಾ ಕಪ್‌ನಲ್ಲಿ ಮಲೇಷ್ಯಾ ವಿರುದ್ಧ ಅಜೇಯ 97 ರನ್ ಗಳಿಸಿದ್ದ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್‌ನ ದಾಖಲೆಯನ್ನು ಚಾಮರಿ ಅಥಾಪತ್ತು ಹಿಂದಿಕ್ಕಿದ್ದಾರೆ.

Chamari Athapaththu Became the First Player to Hits a Century in the Women s T20 Asia Cup

ಶ್ರೀಲಂಕಾ ನಾಯಕಿ ಚಾಮರಿ ಅಥಾಪತ್ತು ಮಲೇಷ್ಯಾ ವಿರುದ್ಧ ಇತ್ತೀಚಿನ ಶತಕದೊಂದಿಗೆ ತನ್ನ ಮೂರನೇ ಶತಕವನ್ನು ಬಾರಿಸಿದ ಕಾರಣ, ಕ್ಯಾಲೆಂಡರ್ ವರ್ಷದಲ್ಲಿ ಬಹು ಶತಕಗಳನ್ನು ಗಳಿಸಿದ ಪೂರ್ಣ-ಸದಸ್ಯ ರಾಷ್ಟ್ರದ ಮೊದಲ ಆಟಗಾರ್ತಿ ಎನಿಸಿದರು.

ಚಾಮರಿ ಅಥಾಪತ್ತು ಅವರು 136 ಪಂದ್ಯಗಳಿಂದ 24.44ರ ಸರಾಸರಿಯಲ್ಲಿ 3153 ರನ್ ಗಳಿಸಿ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಮೂರನೇ ಶತಕ ಸಿಡಿಸಿದರು. ಅವರ ಇತರ ಎರಡು ಶತಕಗಳು ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಬಂದಿವೆ.

ಶ್ರೀಲಂಕಾ ಮಹಿಳಾ ತಂಡದ ನಾಯಕು ಚಾಮರಿ ಅಥಾಪತ್ತು ಪ್ರಸ್ತುತ ಮಹಿಳಾ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸುಜಿ ಬೇಟ್ಸ್, ಹರ್ಮನ್‌ಪ್ರೀತ್ ಕೌರ್, ಮೆಗ್ ಲ್ಯಾನಿಂಗ್, ಸ್ಮೃತಿ ಮಂಧಾನ, ಸ್ಟೇಫಾನಿ ಟೇಲರ್ ಮತ್ತು ಸೋಫಿ ಡಿವೈನ್ ನಂತರ ಏಳನೇ ಸ್ಥಾನದಲ್ಲಿದ್ದಾರೆ.

ಮಲೇಷ್ಯಾ ವಿರುದ್ಧ ಶ್ರೀಲಂಕಾ ತಂಡಕ್ಕೆ ಭರ್ಜರಿ ಗೆಲುವು

ಶ್ರೀಲಂಕಾ ಪರ ಹರ್ಷಿತಾ ಮಾದವಿ ಮತ್ತು ಅನುಷ್ಕಾ ಸಂಜೀವನಿ ಕ್ರಮವಾಗಿ 26 ಮತ್ತು 31 ರನ್ ಗಳಿಸಿದರು. ವಿಶ್ಮಿ ಗುಣರತ್ನೆ ಮತ್ತು ಕವಿಶಾ ದಿಲ್ಹಾರಿ ಕ್ರಮವಾಗಿ ಒಂದು ಮತ್ತು ಶೂನ್ಯ ರನ್‌ಗಳೊಂದಿಗೆ ದೊಡ್ಡ ಕೊಡುಗೆ ನೀಡಲು ವಿಫಲರಾದರು.

185 ರನ್‌ಗಳ ಚೇಸಿಂಗ್ ಮಾಡುವಾಗ, ಮಲೇಷ್ಯಾ ವನಿತೆಯರು ಶ್ರೀಲಂಕಾದ ಮಾರಕ ಬೌಲಿಂಗ್‌ನ ಎದುರು ಮಂಡಿಯೂರಿದರು. 19.5 ಓವರ್‌ಗಳಲ್ಲಿ ಕೇವಲ 40 ರನ್‌ಗಳಿಗೆ ಆಲೌಟ್ ಆಗಿ 144 ರನ್‌ಗಳ ಸೋಲು ಅನುಭವಿಸಿತು.

Story first published: Monday, July 22, 2024, 18:18 [IST]
Other articles published on Jul 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+