ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 2-1 ಅಂತರದಲ್ಲಿ ಸರಣಿ ಗೆದ್ದ ನಂತರ ಶ್ರೀಲಂಕಾ ಮಹಿಳಾ ತಂಡದ ನಾಯಕಿ ಚಾಮರಿ ಅಥಾಪತ್ತು ಅವರು ಐಸಿಸಿ ಮಹಿಳಾ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿಕ್ಕೇರುವ ಶ್ರೀಲಂಕಾದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 2002 ಮತ್ತು ಮೇ 2003ರ ನಡುವೆ 181 ದಿನಗಳ ಕಾಲ ಪುರುಷರ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಶ್ರೀಲಂಕಾದ ಏಕೈಕ ಆಟಗಾರ ಸನತ್ ಜಯಸೂರ್ಯ ಅವರನ್ನು ಎಡಗೈ ಆರಂಭಿಕ ಆಟಗಾರ್ತಿ ಚಾಮರಿ ಅಥಾಪತ್ತು ಅನುಕರಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಚಾಮರಿ ಅಥಾಪತ್ತು ಬಾರಿಸಿದ ಎರಡು ಭರ್ಜರಿ ಶತಕಗಳು ಅವರು ಶ್ರೇಯಾಂಕದಲ್ಲಿ ಆರು ಸ್ಥಾನಗಳ ಏರಿಕೆ ಕಂಡರು.

ಹರ್ಮನ್‌ಪ್ರೀತ್ ಕೌರ್, ಮೆಗ್ ಲ್ಯಾನಿಂಗ್ ಮತ್ತು ಲಾರಾ ವೊಲ್ವಾರ್ಡ್ಟ್ ಅವರಂತಹ ಆಟಗಾರ್ತಿಯರನ್ನು ಹಿಂದಿಕ್ಕಿದ್ದಾರೆ ಮತ್ತು ಮೇ 10ರಿಂದ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಬೆತ್ ಮೂನಿ ಅವರನ್ನೂ ಸಹ ಹಿಂದಿಕ್ಕಿದ್ದಾರೆ.
ಮೊದಲ ಪಂದ್ಯದಲ್ಲಿ 83 ಎಸೆತಗಳಲ್ಲಿ ಅಜೇಯ 108 ರನ್ ಹಾಗೂ ಅಂತಿಮ ಪಂದ್ಯದಲ್ಲಿ 80 ಎಸೆತಗಳಲ್ಲಿ ಅಜೇಯ 140 ರನ್ ಗಳಿಸಿದ ಚಾಮರಿ ಅಥಾಪತ್ತು ಪಂದ್ಯಶ್ರೇಷ್ಠ ಆಟಗಾರ್ತಿ ಹಾಗೂ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನಾರದರು.
ಇದು ಚಾಮರಿ ಅಥಾಪತ್ತು ಅವರನ್ನು ಏಳನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಏರುವಂತೆ ಮಾಡಿತು. ಅಲ್ಲದೆ, ಅವರ ಹಿಂದಿನ ವೃತ್ತಿಜೀವನದ ಉತ್ತಮ ಶ್ರೇಯಾಂಕಗಿಂತ ಅತ್ಯುತ್ತಮವಾಗಿತ್ತು.
ಶ್ರೀಲಂಕಾ ತಂಡದ ಇತರ ಇಬ್ಬರು ಆಟಗಾರ್ತಿಯರು ಮಾತ್ರ 2014ರಲ್ಲಿ ಮಹಿಳಾ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ತಲುಪಿದ್ದಾರೆ. ಅವರೆಂದರೆ, ಎಡಗೈ ವೇಗದ ಬೌಲರ್ ಉದೇಶಿಕಾ ಪ್ರಬೋಧನಿ (ಟಿ20 ಬೌಲಿಂಗ್) ಮತ್ತು ಶಶಿಕಲಾ ಸಿರಿವರ್ಧನೆ (ಟಿ20 ಆಲ್-ರೌಂಡರ್).
ಮಹಿಳಾ ಏಕದಿನ ಪಂದ್ಯಗಳಲ್ಲಿ ತನ್ನ ದೇಶದ ಪರ ಎಲ್ಲಾ ಟಾಪ್ 10 ವೈಯಕ್ತಿಕ ರನ್‌ಗಳನ್ನು ಗಳಿಸಿರುವ ಚಾಮರಿ ಅಥಾಪತ್ತು ಪ್ರಸ್ತುತ 758 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ಮಹಿಳಾ ಆಟಗಾರ್ತಿಯೊಬ್ಬಳು ಗಳಿಸಿದ ಅತ್ಯಧಿಕ ಅಂಕಗಳಾಗಿವೆ.
ಶ್ರೀಲಂಕಾದ ಇತರ ಆಟಗಾರ್ತಿಯರಾದ ಕವಿಶಾ ದಿಲ್ಹಾರಿ ಬ್ಯಾಟರ್‌ಗಳಲ್ಲಿ 19 ಸ್ಥಾನ ಮೇಲಕ್ಕೇರಿ 37ನೇ ಸ್ಥಾನಕ್ಕೆ ತಲುಪಿದ್ದಾರೆ. ಉದೇಶಿಕಾ ಪ್ರಬೋಧನಿ ಬೌಲಿಂಗ್‌ನಲ್ಲಿ 14 ಸ್ಥಾನಗಳ ಏರಿಕೆ ಕಂಡು 32ನೇ ಸ್ಥಾನ ತಲುಪಿದ್ದಾರೆ.
ಇದೇ ವೇಳೆ ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್ ಗಾಲೆಯಲ್ಲಿ ನಡೆದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಪಂದ್ಯ ವಿಜೇತ 137 ರನ್ ಗಳಿಸುವ ಮೂಲಕ ಆರು ಸ್ಥಾನಗಳನ್ನು ಏರಿಕೆ ಕಂಡು 13ನೇ ಸ್ಥಾನ ತಲುಪಿದ್ದಾರೆ.
ಐರ್ಲೆಂಡ್ ಆರಂಭಿಕ ಆಟಗಾರ್ತಿ ಗ್ಯಾಬಿ ಲೆವಿಸ್ ಅವರು ಅಂತಿಮ ಪಂದ್ಯದಲ್ಲಿ ಅಜೇಯ 95 ರ ನಂತರ ಐದು ಸ್ಥಾನಗಳನ್ನು ಪಡೆದು 21ನೇ ಸ್ಥಾನಕ್ಕೆ ತಲುಪಿದ್ದಾರೆ.
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಆರನೇ ಸ್ಥಾನಕ್ಕೆ ಕುಸಿದು 716 ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ. ಉಪನಾಯಕಿ ಸ್ಮೃತಿ ಮಂಧಾನ ಕೂಡ ಒಂದು ಸ್ಥಾನ ಕುಸಿದು 714 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ಕುಸಿದಿದ್ದಾರೆ.
ವೆಸ್ಟ್ ಇಂಡೀಸ್ ಪರ ಶ್ಯಾಮಿಲಿಯಾ ಕಾರ್ನೆಲ್ ನಾಲ್ಕು ಸ್ಥಾನ ಮೇಲೇರಿ ಜಂಟಿ 24ನೇ ಸ್ಥಾನ ಮತ್ತು ಅಫಿ ಫ್ಲೆಚರ್ 14 ಸ್ಥಾನ ಮೇಲೇರಿ 32ನೇ ಸ್ಥಾನಕ್ಕೆ ಬೌಲರ್‌ಗಳ ಪಟ್ಟಿಯಲ್ಲಿ ಮೇಲಕ್ಕೇರಿದ್ದಾರೆ.
ಟಿ20 ಶ್ರೇಯಾಂಕದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ಸರಣಿಯ ಮೊದಲ ಪಂದ್ಯದ ನಂತರ ಸೋಫಿ ಡಂಕ್ಲಿ (ನಾಲ್ಕು ಸ್ಥಾನ ಮೇಲಕ್ಕೆತ್ತಿ 16 ನೇ ಸ್ಥಾನಕ್ಕೆ) ಮತ್ತು ಆಮಿ ಜೋನ್ಸ್ (ಒಂದು ಸ್ಥಾನ ಮೇಲಕ್ಕೆತ್ತಿ 25 ನೇ ಸ್ಥಾನಕ್ಕೆ) ಬ್ಯಾಟಿಂಗ್ ಶ್ರೇಯಾಂಕವನ್ನು ಹೆಚ್ಚಿಸಿದ್ದಾರೆ ಮತ್ತು ಸಾರಾ ಗ್ಲೆನ್ (ಒಂದು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ) ) ಮತ್ತು ಜೆಸ್ ಜೊನಾಸೆನ್ (ನಾಲ್ಕು ಸ್ಥಾನ ಮೇಲಕ್ಕೆದ್ದು 18ನೇ ಸ್ಥಾನಕ್ಕೆ) ಬೌಲಿಂಗ್ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.