For Quick Alerts
ALLOW NOTIFICATIONS  
For Daily Alerts
 

4 ಎಸೆತ, 4 ವಿಕೆಟ್‌: ಸೋಲುವ ಪಂದ್ಯವನ್ನು ಗೆದ್ದ ಶ್ರೀಲಂಕಾ ವನಿತೆಯರು

ಶ್ರೀಲಂಕಾ ತಂಡದ ಮಾಜಿ ವೇಗದ ಬೌಲರ್‌ ಲಸಿತ್ ಮಲಿಂಗ್ ಅವರ ಬಿಗುವಿನ ದಾಳಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಇವರು ಸೋಲುವ ಪಂದ್ಯದಲ್ಲೂ ಗೆಲುವಿನ ಆಸೆಯನ್ನು ಮೂಡಿಸಬಲ್ಲ ಪ್ಲೇಯರ್‌. ಇವರು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಸತತ ನಾಲ್ಕು ವಿಕೆಟ್‌ಗಳನ್ನು ಎರಡು ಬಾರಿ ಪಡೆ ಪಂದ್ಯದ ಚಿತ್ರಣವನ್ನೇ ಬದಲಿಸಿದ ಬೌಲರ್‌. ಇವರ ನೆನನಪನ್ನೇ ಮರುಕಳಿಸಿದ ಆಟಗಾರ್ತಿ ವಿಶ್ವದ ಗಮನ ಸೆಳೆದಿದ್ದರೆ. ಬಾಂಗ್ಲಾದೇಶ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಚಾಮರಿ ಅಟ್ಟುಪಟ್ಟು ಬಾಂಗ್ಲಾ ಗೆಲುವಿನ ಆಸೆಗೆ ಪೆಟ್ಟು ನೀಡಿದ್ದಾರೆ.

ಸೋಮವಾರ ಮುಂಬೈನ ಡಿವೈ ಪಾಟೀಲ್‌ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟ್ ಮಾಡಿತು. ಈ ವೇಳೆ 48.4 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲೌಟ್ ಆಯಿತು. ಲಂಕಾ ತಂಡದ ಪರ ಆರಂಭಿಕ ಆಟಗಾರ್ತಿ ಚಾಮಿರ ಅಟ್ಟಪಟ್ಟು 46 ರನ್‌ ಬಾರಿಸಿ ಔಟ್ ಆದರು. ಹಾಸಿನಿ ಪೆರೇರಾ 13 ಬೌಂಡರಿ, 1 ಸಿಕ್ಸರ್ ಸಹಾಯದಿಂದ 85 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಮಧ್ಯಮ ಕ್ರಮಾಂಕದಲ್ಲಿ ನೀಲಕ್ಷಿಕಾ ಸಿಲ್ವ 1 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 37 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನೆರವಾದರು. ಬಾಂಗ್ಲಾ ತಂಡದ ಪರ ಶೋರ್ನಾ ಅಕ್ತರ್ 27 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದರು.

Chamari Athapaththu s Stunning Last-Over Hat-Trick Seals Thrilling Win for Sri Lanka against Bangladesh

ಒಂದು ಹಂತದಲ್ಲಿ ಬಾಂಗ್ಲಾದೇಶ 48 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 191 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಇನ್ನು ಕೊನೆಯ ಎರಡನೇ ಓವರ್‌ನಲ್ಲಿ ಬಾಂಗ್ಲಾ ಕೇವಲ 3 ರನ್‌ ಸೇರಿಸಿ 1 ವಿಕೆಟ್‌ ಪಡೆಯಿತು. ಬಾಂಗ್ಲಾ ತಂಡ ಕೊನೆಯ ಓವರ್‌ನಲ್ಲಿ ಬಾಂಗ್ಲಾದೇಶ 6 ಎಸೆತದಲ್ಲಿ 9 ರನ್‌ ಕಲೆ ಹಾಕಬೇಕಿತ್ತು. ಈ ವೇಳೆ ಬಾಂಗ್ಲಾ 5 ವಿಕೆಟ್‌ಗೆ 194 ರನ್‌ ಕಲೆ ಹಾಕಿ ಸುಸ್ಥಿತಿಯಲ್ಲಿತ್ತು. ಆದರೆ ಕೊನೆಯ ಓವರ್‌ನಲ್ಲಿ ಶ್ರೀಲಂಕಾ ತಂಡ ಅಬ್ಬರಿಸಿತು.

ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಟಪಟ್ಟು ಇನ್ನಿಂಗ್ಸ್‌ನ ಕೊನೆಯ ಓವರ್ ಎಸೆದರು. ಆ ಓವರ್‌ನ ಮೊದಲ ಎಸೆತದಲ್ಲೇ ರಬೇಯಾ ಖಾನ್ ಅವರನ್ನು, 2ನೇ ಎಸೆತದಲ್ಲೇ ನಹಿದಾ ಅಕ್ತರ್ ರನೌಟ್ ಆದರು. 3ನೇ ಎಸೆತದಲ್ಲಿ ನೀಲಾಕ್ಷಿ ಡಿ ಸಿಲ್ವಾ, 4ನೇ ಎಸೆತದಲ್ಲಿ ಅವರು ಮರೂಫಾ ಅಕ್ತರ್ ಅವರಿಗೆ ಖೆಡ್ಡಾ ತೋಡಿದರು. ಈ ಮೂಲಕ ಬಾಂಗ್ಲಾ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಕೈ ಚೆಲ್ಲಿತು.

ಟೂರ್ನಿಯಿಂದ ಔಟ್

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ 2ನೇ ಗೆಲುವು ದಾಖಲಿಸುವಲ್ಲಿ ವಿಫಲವಾಗಿ, ಟೂರ್ನಿಯಿಂದ ಔಟ್ ಆಯಿತು. ಶ್ರೀಲಂಕಾ ತಂಡ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿತು. ಈ ಮೂಲಕ ಬಾಂಗ್ಲಾ ಟೂರ್ನಿಯ ಸೆಮಿಫೈನಲ್‌ ತಲುಪುವ ಆಸೆಯನ್ನು ಕೈ ಬಿಟ್ಟಿದೆ. ಪಾಕಿಸ್ತಾನ ಆಡಿರುವ ಎಲ್ಲ ಪಂದ್ಯಗಳನ್ನು ಸೋತು ಈಗಾಗಲೇ ಟೂರ್ನಿಯಿಂದ ಹೊರ ನಡೆದಿದೆ.

Story first published: Tuesday, October 21, 2025, 9:45 [IST]
Other articles published on Oct 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+