ಭಾರತ ವಿರುದ್ಧ ಸತತ ಟಾಸ್ ಗೆದ್ದಿದ್ದಷ್ಟೇ ಪಾಕಿಸ್ತಾನದ ಸಾಧನೆ
ಬರ್ಮಿಂಗ್ ಹ್ಯಾಮ್, ಜೂನ್ 05: ಐಸಿಸಿ ಆಯೋಜನೆಯ 'ಮಿನಿ ವಿಶ್ವಕಪ್' ಚಾಂಪಿಯನ್ಸ್ ಟ್ರೋಫಿ 2017 ಮಾತ್ರ ಭಾರತದ ವಿರುದ್ಧ ಮೇಲುಗೈ ಸಾಧಿಸಿದ್ದ ಪಾಕಿಸ್ತಾನ, ವಿರಾಟ್ ಪಡೆ ಆರ್ಭಟಕ್ಕೆ ಬೆಚ್ಚಿತು. ಪಾಕಿಸ್ತಾನ ತಂಡದ ವಿರುದ್ಧ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿತು. ಪಂದ್ಯದ ಮುಖ್ಯಾಂಶಗಳು ಇಲ್ಲಿವೆ...
ಭಾರತದ ವಿರುದ್ಧ ಪಾಕಿಸ್ತಾನ ತಂಡ ಸತತ ಮೂರು ಬಾರಿ ಟಾಸ್ ಗೆದ್ದಿದ್ದು ಸಾಧನೆ, ವಿರಾಟ್ ಕೊಹ್ಲಿ ಅರ್ಧಶತಕ, ಯುವರಾಜ್ ಚಿನಕುರಳಿ ಆಟ, ರವೀಂದ್ರ ಜಡೇಜ ಬೌಲಿಂಗ್, ಫೀಲ್ಡಿಂಗ್ ಎಲ್ಲವೂ ಮುಖ್ಯಾಂಶದ ಭಾಗವಾಗಿದೆ.[In Pics : ಪಾಕ್ ವಿರುದ್ಧ ಜಯದ ನಗೆ ಬೀರಿದ ಭಾರತ]
ಉಭಯ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದು ನಾಲ್ಕನೇ ಮುಖಾಮುಖಿ. ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾತ್ರ ಭಾರತದ ಮೇಲೆ ಪಾಕಿಸ್ತಾನ ಮೇಲುಗೈ ಸಾಧಿಸಿದೆ. 2-1 ರಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು.
ಈ ಪಂದ್ಯ ಗೆಲ್ಲುವ ಮೂಲಕ ಭಾರತ 2-2 ಸಮಬಲ ಸಾಧಿಸಿದೆ. ವಿರಾಟ್ ಕೊಹ್ಲಿ ಹಾಗೂ ಸರ್ಫರಾಜ್ ಇಬ್ಬರಿಗೂ ನಾಯಕರಾಗಿ ಐಸಿಸಿ ಆಯೋಜನೆಯಲ್ಲಿ ಮೊದಲ ಬಾರಿ ಮುಖಾಮುಖಿಯಾಗಿತ್ತು. ಇಬ್ಬರು ಅಂಡರ್ 19 ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದವರು. ಈಗ ರಾಷ್ಟ್ರೀಯ ತಂಡದ ನಾಯಕರಾಗಿ ಸೆಣಸಾಡಿದರು. ಪಂದ್ಯದ ಮುಖ್ಯಾಂಶ, ಚಿತ್ರಗಳು ಮುಂದಿವೆ ನೋಡಿ...

ಟಾಸ್ ಗೆದ್ದು ಸೋತ ಪಾಕಿಸ್ತಾನ
* ಭಾರತ ವಿರುದ್ಧದ ಕಳೆದ 10 ಪಂದ್ಯಗಳಲ್ಲಿ ಸತತ ಮೂರು ಟಾಸ್ ಗಳನ್ನು ಪಾಕಿಸ್ತಾನ ಗೆದ್ದುಕೊಂಡಿದೆ.
* ಟಾಸ್ ಗೆದ್ದ ಬಳಿಕ ಕಳೆದ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ಪಾಕಿಸ್ತಾನ, ಜೂನ್ 04ರ ಪಂದ್ಯವನ್ನು ಸೋತಿದೆ.
* ಮೊಹಮ್ಮದ್ ಅಮಿರ್ ಅವರನ್ನು ಹಿಂದೊಮ್ಮೆ ಸಾಧಾರಣ ಬೌಲರ್ ಎಂದು ರೋಹಿತ್ ಶರ್ಮ ಕರೆದಿದ್ದರು. ಆದರೆ, ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಎದುರೇ ಅಮೀರ್ ಮೇಡನ್ ಬೌಲರ್ ಎಸೆದರು

ಹೊಸ ತಂತ್ರ ಬಳಸಿತು
* ಎಡಗೈ ಸ್ಪಿನ್ನರ್ ಇಮಾದ್ ವಸೀಂ ಅವರು ಎರಡನೇ ಓವರ್ ಬೌಲಿಂಗ್ ಮಾಡಿದ್ದು ವಿಶೇಷ. ಸಾಮಾನ್ಯವಾಗಿ ಹಫೀಜ್ ಇಲ್ಲವೇ ಬೇರೆ ಆಫ್ ಸ್ಪಿನ್ನರ್ ಗಳನ್ನು ಈ ರೀತಿ ಬಳಸುತ್ತಿದ್ದ ಪಾಕಿಸ್ತಾನ, ಹೊಸ ತಂತ್ರ ಬಳಸಿತು.
*9.5 ಓವರ್ ಆಗಿದ್ದಾಗ ಮಳೆಯಿಂದ ಪಂದ್ಯ ನಿಲ್ಲಿಸಬೇಕಾಯಿತು. ಮಳೆ ನಿರೀಕ್ಷಿತವಾಗಿತ್ತು.
* ಭಾರತದ ಮೊದಲ 50ರನ್ 11ನೇ ಓವರ್ ನಲ್ಲಿ ಬಂದಿತು. ಭಾರತದ ರನ್ ಗತಿ ನೋಡಿ ಅಭಿಮಾನಿಗಳಿಗೆ ಆತಂಕ ಮೂಡಿಸಿತ್ತು. ಮಳೆಯ ಕಾರಣ ಪಂದ್ಯ ನಿಂತರೆ ಪಾಕಿಸ್ತಾನಕ್ಕೆ ಲಾಭವಾಗುವ ನಿರೀಕ್ಷೆ ಮೂಡಿತ್ತು.

ಜೊತೆಯಾಟ
* 2008 ರ ನಂತರ 139ರನ್ ಮೊದಲ ವಿಕೆಟ್ ಜೊತೆಯಾಟವೇ ಅಧಿಕವಾಗಿದೆ. ಇದಕ್ಕೂ ಮುನ್ನ ಗೌತಮ್ ಗಂಭೀರ್ ಹಾಗೂ ಸೆಹ್ವಾಗ್ ಅವರು 118ರನ್ ಜೊತೆಯಾಟ ಸಾಧಿಸಿದ್ದರು.
* 18 ತಿಂಗಳ ನಂತರ ರೋಹಿತ್ ಹಾಗೂ ಶಿಖರ್ ಧವನ್ ಜೊತೆಯಾಟ ಕಂಡುಕೊಂಡಿದ್ದು ವಿಶೇಷ. 2016ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 123ರನ್ ಜೊತೆಯಾಟ ಸಾಧಿಸಿದ್ದರು.

ಮೂರು ಶತಕ ಜೊತೆಯಾಟ
ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಹಾಗೂ ಧವನ್ ಆಲ್ಲದೆ ಈ ಹಿಂದೆ ಇನ್ನೆರಡು ಶತಕದ ಜೊತೆಯಾಟ ಕಂಡು ಬಂದಿದೆ. ವೆಸ್ಟ್ ಇಂಡೀಸ್ ಪರ ಗೇಲ್ -ಚಂದ್ರಪಾಲ್ ಹಾಗೂ ದಕ್ಷಿಣ ಆಫ್ರಿಕಾ ಪರ ಗಿಬ್ಸ್ ಹಾಗೂ ಸ್ಮಿತ್ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ಸಾಧಿಸಿದ್ದರು.

ಪಾಕ್ ವಿರುದ್ಧ ರೋಹಿತ್ ಶರ್ಮ
2012ರ ಏಷ್ಯಾಕಪ್ ನಲ್ಲಿ 68ರನ್ ಗಳಿಸಿದ್ದು ರೋಹಿತ್ ಶರ್ಮ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಈ ಪಂದ್ಯದಲ್ಲಿ 91ರನ್ ಗಳಿಸಿದರು. ಪಾಕಿಸ್ತಾನ ವಿರುದ್ಧ ಒಟ್ಟು 12 ಏಕದಿನ ಅರ್ಧಶತಕ ಬಾರಿಸಿದ್ದಾರೆ.
* ಶಿಖರ್ ಧವನ್ ಅವರು 65 ಎಸೆತಗಳಲ್ಲಿ 68ರನ್ ಗಳಿಸಿ ಮೊದಲಿಗರಾಗಿ ಔಟಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications