ಲಂಕನ್ನರ ಮೇಲೆ ಸವಾರಿ ಮಾಡಿದ ಹರಿಣಗಳು
ಲಂಡನ್, ಜೂನ್ 3: ಸ್ಪಿನ್ನರ್ ಇಮ್ರಾನ್ ತಾಹಿರ್ ಅವರ ನಾಲ್ಕು ವಿಕೆಟ್ ಗೊಂಚಲಿನ ಸಹಾಯದಿಂದಾಗಿ, ದಕ್ಷಿಣ ಆಫ್ರಿಕಾ ತಂಡ, ಶನಿವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 'ಬಿ' ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 96 ರನ್ ಗಳ ಜಯ ಸಾಧಿಸಿತು.
ಇಲ್ಲಿನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಪಡೆ, ಮೊದಲಿಗೆ ಹರಿಣಗಳನ್ನು ಕಣಕ್ಕಿಳಿಸಿತು.

ಅದರಂತೆ, ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ, ಆರಂಭಿಕ ಹಾಶೀಂ ಆಮ್ಲಾ ಅವರ ಜವಾಬ್ದಾರಿಯುತ ಶತಕ (103 ರನ್, 115 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಫಫ್ ಡು ಪ್ಲೆಸಿಸ್ ಅವರ ಆಕರ್ಷಕ ಅರ್ಧಶತಕದ (75 ರನ್, 70 ಎಸೆತ, 6 ಬೌಂಡರಿ) ಸಹಾಯದಿಂದ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿತು.
ಈ ಮೊತ್ತವನ್ನು ಹಿಂದಿಕ್ಕಲು ಬ್ಯಾಟಿಂಗ್ ಗೆ ಇಳಿದ ಶ್ರೀಲಂಕಾ, 41.3 ಓವರ್ ಗಳಲ್ಲಿ 203 ರನ್ ಮೊತ್ತಕ್ಕೆ ಆಲೌಟ್ ಆಯಿತು.
ಆರಂಭಿಕ ವುಪುಲ್ ತರಂಗಾ (57 ರನ್, 69 ಎಸೆತ, 6 ಬೌಂಡರಿ), ಮತ್ತೊಬ್ಬ ಆರಂಭಿಕ ಡಿಕ್ವೆಲ್ಲಾ (41 ರನ್, 33 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಕುಸಲ್ ಪೆರೇರಾ (44 ರನ್, 66 ಎಸೆತ, 5 ಬೌಂಡರಿ) ಬಿಟ್ಟರೆ ಮಿಕ್ಕವರಾರೂ ಹೆಚ್ಚು ಆಡಲಿಲ್ಲ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 299ಕ್ಕೆ 6 (ಹಾಶೀಂ ಆಮ್ಲಾ 103, ಫಫು ಡು ಪ್ಲೆಸಿಸ್ 75; ನುವಾನ್ ಪ್ರದೀಪ್ 54ಕ್ಕೆ 2, ಲಕ್ಮಲ್ 51ಕ್ಕೆ 1).
ಶ್ರೀಲಂಕಾ 41.3 ಓವರ್ ಗಳಲ್ಲಿ 203 (ವುಪುಲ್ ತರಂಗಾ 57, ಕುಸಲ್ ಪೆರೇರಾ ಅಜೇಯ 44; ಇಮ್ರಾನ್ ತಾಹೀರ್ 27ಕ್ಕೆ 4, ಕ್ರಿಸ್ ಮೋರಿಸ್ 32ಕ್ಕೆ 2).
ಪಂದ್ಯ ಶ್ರೇಷ್ಠ: ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ)
ಅಂಕ ಹಂಚಿಕೆ: ದಕ್ಷಿಣ ಆಫ್ರಿಕಾ - 2, ಶ್ರೀಲಂಕಾ - 0.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications