Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸೀಸ್, ನ್ಯೂಜಿಲೆಂಡ್ ಪಂದ್ಯದ ರೋಚಕತೆ ಕಸಿದ ಮಳೆರಾಯ

ಬರ್ಮಿಂಗ್ ಹ್ಯಾಮ್, ಜೂನ್ 2: ರೋಚಕ ಪಂದ್ಯವೊಂದಕ್ಕೆ ಅಕ್ಷರಶಃ ತಣ್ಣೀರೆರೆಚಿದ ಮಳೆರಾಯ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಸೆಣಸನ್ನು ಮಗುಮ್ಮಾಗಿಸಿದೆ.

ಇಲ್ಲಿನ ಎಡ್ಗ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ಆರಂಭದಿಂದಲೂ ಮಳೆಯ ಕಾಟ. ಹಾಗಾಗಿ, ತಲಾ 50 ಓವರ್ ಗಳ ಪಂದ್ಯವನ್ನು ತಲಾ 46 ಓವರ್ ಗಳಿಗೆ ಇಳಿಸಲಾಗಿತ್ತು.

Hazlewood

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ 45 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 291 ರನ್ ಗಳಿಸಿತು.

ಆನಂತರ ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾ ತಂಡಕ್ಕೂ ಮಳೆ ಕಾಡಿದ ಹಿನ್ನೆಲೆಯಲ್ಲಿ, ಡಕ್ವರ್ತ್ ಲೂಯಿಸ್ ನಿಯಮದಡಿ ಗುರಿ ಪರಿಷ್ಕೃತಗೊಂಡು ಗೆಲುವಿಗಾಗಿ 33 ಓವರ್ ಗಳಲ್ಲಿ 235 ರನ್ ಗಳಿಸುವಂತೆ ಆಸೀಸ್ ಗೆ ಸೂಚಿಸಲಾಯಿತು.

ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಪಿಚ್ ನಗ ಗುಣ ಬದಲಾಗಿ, ಅದು ಆಸೀಸ್ ತಂಡವನ್ನು ಕಾಡಿತು. ಆರಂಭಿಕರಾದ ಡೇವಿಡ್ ವಾರ್ನರ್ 18 ರನ್ ಗಳಿಸಿ ಔಟಾದರೆ, ಆರೋನ್ ಫಿಂಚ್ ಕೇವಲ 8 ರನ್ ಗಳಿಸಿ ಕ್ರೀಸ್ ಗೆ ಮರಳಿದರು.

ಇನ್ನು, ನಾಲ್ಕನೇ ಕ್ರಮಾಂಕದ ಹೆನ್ರಿಕ್ಸ್ ಕೂಡಾ 18 ರನ್ ಗಳಿಸಿ ಔಟಾದರು. ಆದರೆ, ಡ್ವೈನ್ ಸ್ಮಿತ್ ಅವರು ಕೇವಲ 8 ರನ್ ಗಳಿಸಿ ಔಟಾಗದೇ ಆಡುತ್ತಿದ್ದಾಗ ಮತ್ತೆ ಮಳೆ ಆವರಿಸಿತು.

ಅಷ್ಟರಲ್ಲಿ, ಆಸೀಸ್ 9 ಓವರ್ ಗಳಲ್ಲಿ 53 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು.

ಸಾಕಷ್ಟು ಸಮಯ ಕಳೆದರೂ ಮಳೆ ನಿಲ್ಲದ ಕಾರಣ ಪಂದ್ಯವನ್ನು ಫಲಿತಾಂಶ ರಹಿತವೆಂದು ಘೋಷಿಸಲಾಯಿತು. ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಯಿತು.

ನ್ಯೂಜಿಲೆಂಡ್ ಪರವಾಗಿ, ಕೇನ್ ವಿಲಿಯಮ್ಸನ್ ಆಕರ್ಷಕ ಶತಕ (100 ರನ್, 97 ಎಸೆತ, 8 ಬೌಂಡರಿ, 3 ಸಿಕ್ಸರ್) ಪಂದ್ಯದ ಹೈಲೈಟ್.

ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 45 ಓವರ್ ಗಳಲ್ಲಿ 291 (ಕೇನ್ ವಿಲಿಯಮ್ಸನ್ 100, ರೊಂಚಿ 65; ಹ್ಯಾಜೆಲ್ ವುಡ್ 52ಕ್ಕೆ 6, ಹೇಸ್ಟಿಂಗ್ಸ್ 69ಕ್ಕೆ 2);

ಆಸ್ಟ್ರೇಲಿಯಾ 9 ಓವರ್ ಗಳಲ್ಲಿ 3 ವಿಕೆಟ್ ಗೆ 53 (ಮಳೆಯಿಂದಾಗಿ ಇನಿಂಗ್ಸ್ ಅಪೂರ್ಣ) (ಡೇವಿಡ್ ವಾರ್ನರ್ 18, ಹೆನ್ರಿಕ್ಸ್ 18; ಮಿಲ್ನೆ 9ಕ್ಕೆ 2, ಟ್ರೆಂಟ್ ಬೌಲ್ಟ್ 28ಕ್ಕೆ 1).

ಫಲಿತಾಂಶ: ಮಳೆಯಿಂದಾಗಿ ಪಂದ್ಯ ಅರ್ಧಕ್ಕೇ ರದ್ದು. ಇತ್ತಂಡಗಳಿಗೆ ತಲಾ 1 ಅಂಕ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+