Kuldeep Yadav: ಒಬ್ಬ ಪ್ಲೇಯರ್‌ಗೆ ಗಾಯ: ಮೂವರು ಆ ಸ್ಲಾಟ್ ಮೇಲೆ ಕಣ್ಣು
ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ಮೈದಾನದಲ್ಲಿ ನಡೆಯಲಿದೆ. ಈ ಟ್ರೋಫಿಗೆ ತಂಡ ಸೇರಲು ಹಲವು ಸ್ಟಾರ್ ಆಟಗಾರರು ಕಾಯುತ್ತಿದ್ದಾರೆ. ಆದರೆ ಇಲ್ಲೊಬ್ಬ ಭರವಸೆಯ ಪ್ಲೇಯರ್ ಗಾಯಕ್ಕೆ ತುತ್ತಾಗಿದ್ದರಿಂದ ಚಾಂಪಿಯನ್ಸ್ ಟ್ರೋಫಿಯ ಸ್ಕ್ವಾಡ್ ಸೇರುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆ ಪ್ಲೇಯರ್ ಯಾರು? ಎಂಬ ಬಗ್ಗೆ ವರದಿ ಇಲ್ಲಿದೆ.
ಟೀಮ್ ಇಂಡಿಯಾದ ಪರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಸ್ಟಾರ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರು ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧ ಸರಣಿಯಿಂದ ಹೊರಗುಳಿಯಬಹುದು. ಅಲ್ಲದೆ ಇವರು ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಸ್ಥಾನ ಪಡೆಯುವುದು ಡೌಟ್ ಎನ್ನಲಾಗುತ್ತಿದೆ. ಒಂದು ವೇಳೆ ಸ್ಟಾರ್ ಸ್ಪಿನ್ ಬೌಲರ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ನಡೆದರೆ ತಂಡಕ್ಕೆ ಪೆಟ್ಟು ಬೀಳಲಿದೆ.

ಕುಲ್‌ದೀಪ್ ಯಾದವ್ ಸ್ಪಿನ್ ಬೌಲಿಂಗ್ ನಡೆಸಿ ಕಾಟ ನೀಡುವ ಬೌಲರ್ ಇವರ ಸ್ಥಾನವನ್ನು ತುಂಬ ಬಲ್ಲ ಬೌಲರ್‌ಗಳು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಉತ್ತರ ಇಲ್ಲಿದೆ.
ಲೆಗ್ ಸ್ಪಿನ್ನರ್‌ಗೆ ಅವಕಾಶ
ಒಂದು ವೇಳೆ ಕುಲದೀಪ್ ಯಾದವ್ ಗಾಯದಿಂದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾನ್ಸ್ ಪಡೆಯದೇ ಇದಲ್ಲಿ ಇವರ ಸ್ನೇಹಿತ ಯುಜುವೇಂದ್ರ ಚಹಾಲ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಚಹಾಲ್ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅಲ್ಲದೆ ಇವರು ತಮ್ಮ ಬಿಗುವಿನ ದಾಳಿಯ ಮೂಲಕ ಡೆತ್ ಓವರ್‌ಗಳಲ್ಲೂ ಎದುರಾಳಿಗಳನ್ನು ಕಾಡಬಹುದು. ಚಹಾಲ್ 69 ಏಕದಿನ ಇನ್ನಿಂಗ್ಸ್‌ಗಳಲ್ಲಿ 121 ವಿಕೆಟ್ ಪಡೆದಿದ್ದಾರೆ.

ವರುಣ್ ಚಕ್ರವರ್ತಿ
ಈಗಾಗಲೇ ಟೀಮ್ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದ ಬೌಲರ್ ವರುಣ್ ಚಕ್ರವರ್ತಿ. ಇವರು ತಮ್ಮ ಮಿಸ್ಟರಿ ಸ್ಪಿನ್ ದಾಳಿಯಿಂದಲೇ ಎದುರಾಳಿಗಳನ್ನು ಕಾಡಬಲ್ಲರು. ಟಿ20 ಕ್ರಿಕೆಟ್‌ನಲ್ಲಿ ಮಿಂಚು ಹರಿಸಿರುವ ವರುಣ್, ಏಕದಿನ ಕ್ರಿಕೆಟ್‌ನಲ್ಲೂ ಅಬ್ಬರಿಸಲು ಸಜ್ಜಾಗಿದ್ದಾರೆ. ವರುಣ್ ಚಕ್ರವರ್ತಿ 7 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ. ಇ
ರವಿ ಬಿಷ್ಣೋಯ್
ಕುಲದೀಪ್ ಯಾದವ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದರೆ, ಇವರ ಸ್ಥಾನವನ್ನು ತುಂಬಲು, ರವಿ ಬಿಷ್ಣೋಯ್ ರೆಡಿಯಾಗಿದ್ದಾರೆ. ಇವರು ಸಹ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ತಂಡ ಗೆಲುವಿನಲ್ಲಿ ಮಿಂಚ ಬೌಲರ್. ಇವರ ಲೆಗ್ ಸ್ಪಿನ್‌ಗೆ ಟೀಮ್ ಮ್ಯಾನೇಜ್ಮೆಂಟ್ ಅವಕಾಶ ನೀಡುವ ಚಾನ್ಸ್ ಇದೆ.
ಚಾಂಪಿಯನ್ಸ್ ಟ್ರೋಫಿಗೆ ಪ್ರಕಟವಾಗುವ ತಂಡದಲ್ಲಿ ಯಾರಿಗೆ ಅವಕಾಶ ಸಿಗುತ್ತದೆ. ದುಬೈನಲ್ಲಿ ಯಾರು ಮಿಂಚಬಲ್ಲರು ಎಂಬುದಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications