Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತಂಡ ಪ್ರಕಟ: ಐವರು ಭಾರತೀಯರಿಗೆ ಸ್ಥಾನ: ಪಾಕ್‌ ತಂಡದ ಆಟಗಾರರಿಗೆ ಇಲ್ಲ ಅವಕಾಶ

ದುಬೈನಲ್ಲಿ ಭಾನುವಾರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಗಿದಿದೆ. ಈ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ 4 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. ಐಸಿಸಿ ಪ್ರತಿಬಾರಿಯೂ ಒಂದು ಟೂರ್ನಿಯಾದಾಗ, ಆ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನಿಡಿದ ಆಟಗಾರರನ್ನು ಒಳಗೊಂಡ ಒಂದು ತಂಡವನ್ನು ಪ್ರಕಟಿಸುತ್ತದೆ.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಿದೆ. 29 ವರ್ಷಗಳ ಬಳಿಕ ಪಾಕ್‌ ಐಸಿಸಿ ಟೂರ್ನಿಯೊಂದನ್ನು ಆಯೋಜಿಸಿದೆ. ಆದರೆ ಈ ಟೂರ್ನಿಯಲ್ಲಿ ಪಾಕ್‌ ಲೀಗ್‌ ಹಂತದಲ್ಲೇ ಗೆಲುವನ್ನು ಕಾಣದೇ ಗುಡ್‌ ಬಾಯ್‌ ಹೇಳಿದೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಆತಿಥೇಯ ತಂಡದ ಒಬ್ಬನೇ ಒಬ್ಬ ಪ್ಲೇಯರ್‌ ಇಲ್ಲದೇ ಇರುವುದು ನಿಜಕ್ಕೂ ಬೇಸರ ತರಿಸಿದೆ.

Champions Trophy 2025 Five Indian Players in Team of the Tournament No Pakistan Players Included

ಭಾರತದ ಐವರು ಆಟಗಾರರು

ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವಿರಾಟ್‌ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಮಿಂಚು ಹರಿಸಿರುವ ಶ್ರೇಯಸ್ ಅಯ್ಯರ್‌, ವಿಕೆಟ್‌ ಕೀಪರ್ ಬ್ಯಾಟರ್‌ ಆಗಿ ಅಬ್ಬರಿಸಿರುವ ಕೆಎಲ್ ರಾಹುಲ್, ವೇಗಿ ಮೊಹಮ್ಮದ್ ಶಮಿ ಹಾಗೂ ಯುವ ಸ್ಪಿನ್ ಬೌಲರ್‌ ವರುಣ್‌ ಚಕ್ರವರ್ತಿ ಅವರಿಗೆ ಪ್ರಕಟಿತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಐವರು ಆಟಗಾರರು ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ್ದರು. ಇನ್ನು ಟೂರ್ನಿಯುದಕ್ಕೂ ತಮ್ಮ ಅಮೋಘ ಆಲ್‌ರೌಂಡರ್‌ ಆಟದ ಮೂಲಕ ಗಮನ ಸೆಳೆದಿದ್ದ ಭಾರತದ ಅಕ್ಷರ್ ಪಟೇಲ್‌ 12ನೇ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.

ಮಿಚೆಲ್‌ ಸ್ಯಾಂಟ್ನರ್ ನಾಯಕ

ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ಹಾಗೂ ನಾಯಕ ಮಿಚೆಲ್ ಸ್ಯಾಂಟ್ನರ್ ಅವರಿಗೆ ನಾಯಕತ್ವದ ಹೊಣೆಯನ್ನು ನೀಡಲಾಗಿದೆ. ಇವರು ತಮ್ಮ ಮೋಡಿಯ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬೌಲರ್‌ಗಳನ್ನು ಕಾಡುವ ಪ್ಲೇಯರ್‌. ಇನ್ನು ಈ ತಂಡದಲ್ಲಿ ಆರಂಭಿಕರಾಗಿ ಕಿವೀಸ್ ತಂಡದ ರಚಿನ್ ರವಿಂದ್ರ, ಗ್ಲೆನ್ ಫಿಲಿಪ್ಸ್, ಮ್ಯಾಟ್‌ ಹೆನ್ರಿ ಸ್ಥಾನ ಪಡೆದಿದ್ದಾರೆ.

"ಬಿ" ಗುಂಪಿನಲ್ಲಿ ಸ್ಥಾನ ಪಡೆದಿದ್ದ ಅಫ್ಘಾನಿಸ್ತಾನ ತಂಡದ ಇಬ್ರಾಹಿಂ ಜದ್ರಾನ್ ಹಾಗೂ ಅಜ್ಮತುಲ್ಲಾ ಒಮರ್ಜೈ ಸಹ ಐಸಿಸಿ ತಂಡದಲ್ಲಿದ್ದಾರೆ.

Champions Trophy 2025 Five Indian Players in Team of the Tournament No Pakistan Players Included

ಟೂರ್ನಿಯ ಲೀಗ್‌ ಹಂತದಲ್ಲಿ ತನ್ನ ಅಭಿಯಾನವನ್ನು ಮುಗಿಸಿದ ಇಂಗ್ಲೆಂಡ್‌, ಬಾಂಗ್ಲಾದೇಶ ತಂಡದ ಆಟಗಾರರು ಸ್ಥಾನ ಪಡೆದಿಲ್ಲ. ಅದರಂತೆ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರೂ ಸಹ ಸ್ಥಾನ ವಂಚಿತರಾಗಿದ್ದಾರೆ.

ಐಸಿಸಿ ಪ್ರಕಟಿತ ತಂಡ: ರಾಚಿನ್ ರವೀಂದ್ರ (ನ್ಯೂಜಿಲೆಂಡ್), ಇಬ್ರಾಹಿಂ ಜದ್ರಾನ್ (ಅಫ್ಘಾನಿಸ್ತಾನ), ವಿರಾಟ್ ಕೊಹ್ಲಿ (ಭಾರತ), ಶ್ರೇಯಸ್ ಅಯ್ಯರ್ (ಭಾರತ), ಕೆಎಲ್ ರಾಹುಲ್ (ಭಾರತ, ವಿಕೆಟ್ ಕೀಪರ್‌), ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್), ಅಜ್ಮತುಲ್ಲಾ ಒಮರ್ಜೈ (ಅಫ್ಘಾನಿಸ್ತಾನ), ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್, ನಾಯಕ), ಮೊಹಮ್ಮದ್ ಶಮಿ (ಭಾರತ), ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್), ವರುಣ್ ಚಕ್ರವರ್ತಿ (ಭಾರತ), ಅಕ್ಷರ್ ಪಟೇಲ್ (ಭಾರತ, 12ನೇ ಆಟಗಾರ)

Story first published: Monday, March 10, 2025, 22:29 [IST]
Other articles published on Mar 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+