IND vs AUS: ಭಾರತ, ಆಸ್ಟ್ರೇಲಿಯಾ ನಡುವಣ ಹೇಗಿದೆ ಜಿದ್ದು? ಇಲ್ಲಿದೆ ಹೆಡ್ ಟು ಹೆಡ್ ರೆಕಾರ್ಡ್
ದುಬೈನಲ್ಲಿ ಭಾನುವಾರ ಅಮೋಘ ಸಂಘಟಿತ ಆಟದ ಪ್ರದರ್ಶನ ನಿಡಿದ ಭಾರತ 44 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿಯ "ಎ" ಗುಂಪಿನಲ್ಲಿ ಅಗ್ರ ಸ್ಥಾನೀಯವಾಗಿದೆ. ಈ ಮೂಲಕ ಭಾರತ ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರೆಸಿದೆ. ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸಲಿದೆ. ಆಸ್ಟ್ರೇಲಿಯಾ "ಬಿ" ಗುಂಪಿನಲ್ಲಿ ಎರಡನೇ ಸ್ಥಾನೀಯವಾಗಿ ಸೆಮೀಸ್ ಹಂತವನ್ನು ಪ್ರವೇಶಿಸಿದೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾ ಬಲಾಢ್ಯವಾಗಿದೆ. ಆದರೆ ಸದ್ಯದ ಭಾರತದ ಪ್ರದರ್ಶನ ಎದುರಾಳಿಗಳಿಗೆ ನಡುಕ ಹುಟ್ಟಿಸುವಂತಿದೆ. ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಕ್ರಿಕೆಟ್ ಅಂಗಳದಲ್ಲಿ 151 ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ವೇಳೆ ಭಾರತ 57 ಪಂದ್ಯಗಳಲ್ಲಿ ಜಯ ದಾಖಲಿಸಿದರೆ, ಆಸ್ಟ್ರೇಲಿಯಾ 84 ಪಂದ್ಯಗಳನ್ನು ಗೆದ್ದು ಬೀಗಿದೆ. 10 ಪಂದ್ಯಗಳು ಫಲಿತಾಂಶ ಹೀನವಾಗಿವೆ. ತಟಸ್ಥ ಸ್ಥಳದಲ್ಲಿ ಭಾರತ 10 ಪಂದ್ಯಗಳನ್ನು ಗೆದ್ದರೆ, ಆಸೀಸ್ 12ರಲ್ಲಿ ಜಯ ದಾಖಲಿಸಿದೆ.

ಐಸಿಸಿ ಟೂರ್ನಿಯಲ್ಲಿ ಹೇಗಿದೆ ಪ್ರದರ್ಶನ?
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಐಸಿಸಿ ಟೂರ್ನಿಗಳ ನಾಕೌಟ್ ಹಂತದಲ್ಲಿ ಒಟ್ಟು 7 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಭಾರತ 3 ಪಂದ್ಯಗಳಲ್ಲಿ ಜಯ ದಾಖಲಿಸಿದರೆ, ಆಸೀಸ್ 4 ಪಂದ್ಯಗಳನ್ನು ತನ್ನದಾಗಿಸಿಕೊಂಡಿದೆ. ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳು 4 ಬಾರಿ ಮುಖಾಮುಖಿ ಆಗಿದ್ದು, ಭಾರತ 1, ಆಸೀಸ್ 3 ಪಂದ್ಯಗಳಲ್ಲಿ ಜಯ ದಾಖಲಿಸಿದೆ. ಇನ್ನು ಟಿ20 ವಿಶ್ವಕಪ್‌ನಲ್ಲಿ ಆಡಿದ ಒಂದು ಪಂದ್ಯವನ್ನು ಭಾರತ ಗೆದ್ದಿದೆ. 2023ರಲ್ಲಿ ನಡೆದಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಸ್‌ಶಿಪ್ ಫೈನಲ್‌ನಲ್ಲಿ ಆಸೀಸ್ ಗೆದ್ದು ಕೊಂಡು ಬೀಗಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಹೇಗಿದೆ ಜಿದ್ದು?
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 4 ಬಾರಿ ಮುಖಾಮುಖಿಯಾಗಿದ್ದು, ಭಾರತ 2ರಲ್ಲಿ ಗೆಲುವು, 1 ಸೋಲು, 1 ಫಲಿತಾಂಶ ಹೀನವಾಗಿದೆ.
ಈ ಬಾರಿಯೂ ಉಭಯ ತಂಡಗಳ ನಡುವಿನ ಜಿದ್ದಾಜಿದ್ದು ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಮಾರ್ಡನ್ ಡೇ ಕ್ರಿಕೆಟ್‌ನಲ್ಲಿ ಈ ಪಂದ್ಯವನ್ನು ನೋಡಲೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಈ ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಈ ಸ್ಟಾರ್ ಆಟಗಾರರು ತಮ್ಮ ಅಬ್ಬರದ ಆಟದ ಮೂಲಕ ಗೆಲುವಿನಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಈ ಬಾರಿಯೂ ಉಭಯ ತಂಡಗಳು ಬಲಿಷ್ಠವಾಗಿವೆ. ಎರಡೂ ತಂಡಗಳನ್ನು ತುಲನೆ ಮಾಡಿದಾಗ ಭಾರತ ತಂಡ ಕೊಂಚ ಬ್ಯಾಲೆನ್ಸ್ ರೀತಿ ಕಾಣುತ್ತದೆ. ಆಸ್ಟ್ರೇಲಿಯಾ ತಂಡದಲ್ಲಿ ಅನುಭವಿ ವೇಗದ ಬೌಲರ್‌ಗಳ ಕೊರತೆ ಎದ್ದು ಕಾಣುತ್ತಿದೆ. ಇದನ್ನೇ ಟೀಮ್ ಇಂಡಿಯಾ ಬಳಸಿಕೊಂಡು ಸ್ಥಿರ ಪ್ರದರ್ಶನ ನೀಡಿ ಗೆಲುವು ದಾಖಲಿಸುತ್ತದಾ. 2023ರ ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಸೇಡು ತೀರಿಸಿಕೊಳ್ಳುತ್ತದಾ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications