Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs NZ: ಭಾರತ ವಿರುದ್ಧ 5 ವಿಕೆಟ್ ಕಬಳಿಸಿ ಮ್ಯಾಟ್ ಹೆನ್ರಿ ದಾಖಲೆ

ಚಾಂಪಿಯನ್ಸ್ ಟ್ರೋಫಿ 2025 ರ ಅಂತಿಮ ಗುಂಪು ಪಂದ್ಯದಲ್ಲಿ ಭಾರತ ವಿರುದ್ಧದ ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ್ದಾರೆ. ಉರಿ ಬೌಲಿಂಗ್ ದಾಳಿ ಮಾಡಿದ ಮ್ಯಾಟ್ ಹೆನ್ರಿ ಟೀಮ್ ಇಂಡಿಯಾವನ್ನು ಕಟ್ಟಿ ಹಾಕಿದ್ದಾರೆ. ಭಾರತ ವಿರುದ್ಧ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಮ್ಯಾಟ್ ಹೆನ್ರಿ ಇತಿಹಾಸ ಸೃಷ್ಟಿಸಿದ್ದಾರೆ. ಪರಿಣಾಮ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 249 ರನ್‌ಗಳಿಗೆ ಸೀಮಿತವಾಯಿತು.

ಚಾಂಪಿಯನ್ಸ್ ಟ್ರೋಫಿಯ 27 ವರ್ಷಗಳ ಇತಿಹಾಸದಲ್ಲಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಮ್ಯಾಟ್ ಹೆನ್ರಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನದ ನವೀದ್-ಉಲ್-ಹಸನ್ ಮತ್ತು ಶೋಯೆಬ್ ಅಖ್ತರ್ 2004ರ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತದ ವಿರುದ್ಧ ತಲಾ ನಾಲ್ಕು ವಿಕೆಟ್ ಕಬಳಿಸಿದ್ದರು. ಶ್ರೀಲಂಕಾದಲ್ಲಿ ನಡೆದ 2002ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಿಂಬಾಬ್ವೆಯ ಡೌಗ್ಲಾಸ್ ಹೊಂಡೊ ಭಾರತದ ವಿರುದ್ಧ ನಾಲ್ಕು ವಿಕೆಟ್‌ಗಳನ್ನು ಪಡೆದಿರುವುದು ದಾಖಲೆ ಆಗಿತ್ತು.

Champions Trophy 2025 Matt Henry sets record with 5 wickets against India

ಆಸ್ಟ್ರೇಲಿಯಾದ ಕೀನ್ ಮೆಕ್‌ಲೀ ಮತ್ತು ಡೇಮಿಯನ್ ಫ್ಲೆಮಿಂಗ್ ನಂತರ ಮ್ಯಾಟ್ ಹೆನ್ರಿ ಐಸಿಸಿ ಏಕದಿನ ಟೂನಿಯಲ್ಲಿ ಭಾರತದ ವಿರುದ್ಧ ಮೂರನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ದಾಖಲಿಸಿದ್ದಾರೆ. 1983ರ ವಿಶ್ವಕಪ್ ನಲ್ಲಿ ಮೆಕ್ಲೇ 6/39 ಬೌಲಿಂಗ್ ಪ್ರದರ್ಶನ ನೀಡಿದ್ದರೆ, 1996ರ ವಿಶ್ವಕಪ್ ನಲ್ಲಿ ಫ್ಲೆಮಿಂಗ್ 5/36 ಬೌಲಿಂಗ್ ಪ್ರದರ್ಶನ ನೀಡಿದ್ದರು.

ಮ್ಯಾಟ್ ಹೆನ್ರಿ ದುಬೈನ ನಿಧಾನಗತಿಯ ಪಿಚ್‌ನಲ್ಲಿ ನ್ಯೂಜಿಲೆಂಡ್ ಬೌಲಿಂಗ್ ದಾಳಿಯನ್ನು ಮುನ್ನಡೆಸಿದರು. ಅವರು ಮೊದಲು ಶುಭಮನ್ ಗಿಲ್ ಅವರನ್ನು ಎರಡು ರನ್‌ಗಳಿಗೆ ಔಟ್ ಮಾಡಿದರು. ನಂತರ ಮ್ಯಾಟ್ ಹೆನ್ರಿ ಎಸೆತದಲ್ಲಿ ವಿರಾಟ್ ಕೊಹ್ಲಿ ಅವರು ಗ್ಲೆನ್ ಫಿಲಿಪ್ಸ್ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಇದಾದ ಬಳಿಕ ಡೆತ್ ಓವರ್‌ಗಳಲ್ಲಿ ದಾಳಿಗಿಳಿದ ಹೆನ್ರಿ ಅವರು ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ವಿಕೆಟ್‌ಗಳನ್ನು ಪಡೆದರು. ಡೆತ್ ಓವರ್‌ಗಳಲ್ಲಿ ಅವರ ಸ್ಪೆಲ್ ಭಾರತವು ದೊಡ್ಡ ಸ್ಕೋರ್ ಗಳಿಸುವುದನ್ನು ತಡೆಯಿತು.

ಚಾಂಪಿಯನ್ಸ್ ಟ್ರೋಫಿಯ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ 44 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 249 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 45.3 ಓವರ್‌ಗಳಲ್ಲಿ ಕೇವಲ 205 ರನ್ ಗಳಿಗೆ ಆಲೌಟ್ ಆಯಿತು. ಇದೊಂದಿಗೆ ಕಿವೀಸ್ ಪಡೆ 44 ರನ್‌ಗಳಿಂದ ಸೋತಿತು.

Story first published: Sunday, March 2, 2025, 23:50 [IST]
Other articles published on Mar 2, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+