For Quick Alerts
ALLOW NOTIFICATIONS  
For Daily Alerts
 

Champions Trophy 2025: ಹೇಗಿದೆ ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ ಸಮೀಕರಣ: ಭಾರತ ಯಾವ ತಂಡವನ್ನು ಎದುರಿಸಲಿದೆ?

ಎಂಟು ವರ್ಷಗಳ ಬಳಿಕ ಚಾಂಪಿಯನ್ಸ್‌ ಟ್ರೋಫಿ ನಡೆಯುತ್ತಿದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಎಂಟು ತಂಡಗಳು ಭಾಗವಹಿಸುತ್ತಿವೆ. ಈಗಾಗಲೇ "ಎ" ಗುಂಪಿನಿಂದ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ ಪ್ರವೇಶಿಸಿವೆ. ಸದ್ಯ ಚಾಂಪಿಯನ್ಸ್‌ ಟ್ರೋಫಿಯಿಂದ ಇಂಗ್ಲೆಂಡ್‌, ಆತಿಥೇಯ ಪಾಕಿಸ್ತಾನ, ಬಾಂಗ್ಲಾದೇಶ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿವೆ.

"ಎ" ಗುಂಪಿನ ಸೆಮಿಫೈನಲ್‌ ಸಮೀಕರಣ ಸ್ಪಷ್ಟವಾಗಿದೆ. ಆದರೆ ಯಾವ ತಂಡ ಯಾವ ಸ್ಥಾನದೊಂದಿಗೆ ಸೆಮಿಫೈನಲ್‌ ಪ್ರವೇಶಿಸುತ್ತದೆ ಎಂಬುದೇ ಕುತೂಹಲ ಮೂಡಿಸಿದೆ. ಇನ್ನು ಲೀಗ್‌ ಹಂತದ ಪಂದ್ಯಗಳು ನಡೆಯುತ್ತಿದ್ದು ರೋಚಕತೆ ಮನೆ ಮಾಡಿದೆ. ಈ ಪಂದ್ಯಗಳು ಸಂಪೂರ್ಣ ಮುಗಿದ ಬಳಿಕವೇ ಸೆಮಿಫೈನಲ್‌ನಲ್ಲಿ ಭಾರತ ಯಾವ ತಂಡವನ್ನು ಎದುರಿಸಲಿದೆ ಎಂಬುದು ತಿಳಿಯಲಿದೆ.

Champions Trophy 2025 Semi-Final Race Heats Up as Group B Battle Goes Down to the Wire

ಇನ್ನು ಬಿ ಗುಂಪಿನಲ್ಲಿ ಯಾವ ತಂಡ ಉಪಾಂತ್ಯ ಪ್ರವೇಶಿಸಲಿದೆ ಎಂಬುದು ಇನ್ನು ಕುತೂಹಲ ಮೂಡಿಸಿದೆ. ಇನ್ನು ಈ ಗುಂಪಿನಲ್ಲಿದ್ದ ಇಂಗ್ಲೆಂಡ್ ಆಡಿರುವ ಎರಡೂ ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರ ಬಿದ್ದಿದೆ. ಇನ್ನು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಆಫ್ಘಾನಿಸ್ತಾನ ತಂಡಗಳು ಸೆಮಿಫೈನಲ್‌ ಮೇಲೆ ಕಣ್ಣು ನೆಟ್ಟಿವೆ. ಈ ಮೂರು ತಂಡಗಳಿಗೆ ಇನ್ನು ತಲಾ ಒಂದೊಂದು ಪಂದ್ಯ ಸಿಗಲಿದೆ. ಇನ್ನು ಆಫ್ಘಾನಿಸ್ತಾನ 2 ಅಂಕ ಕಲೆ ಹಾಕಿದರೆ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ತಲಾ ಮೂರು ಅಂಕ ತನ್ನದಾಗಿಸಿಕೊಂಡಿವೆ.

ಶುಕ್ರವಾರ ಬಿಗ್ ಫೈಟ್‌

ಅಫ್ಘಾನಿಸ್ತಾನದ ಕೊನೆಯ ಲೀಗ್ ಪಂದ್ಯ ಶುಕ್ರವಾರ ಲಾಹೋರ್‌ನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ವಿರುದ್ಧ ಕಾದಾಟ ನಡೆಸಲಿದೆ. ದಕ್ಷಿಣ ಆಫ್ರಿಕಾ ತಂಡವು ಶನಿವಾರ ಇಂಗ್ಲೆಂಡ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದ್ದು, ಈ ಪಂದ್ಯವು ಕರಾಚಿಯಲ್ಲಿ ನಡೆಯಲಿದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದರೆ, ಸುಲಭವಾಗಿ ಸೆಮೀಸ್‌ ಹಂತ ಪ್ರವೇಶಿಸುತ್ತದೆ. ಇನ್ನು ಆಫ್ಘಾನ್ ಸಹ ಈ ಪಂದ್ಯದಲ್ಲಿ ಗೆದ್ದು ಮೊದಲ ಬಾರಿಗೆ ಉಪಾಂತ್ಯವನ್ನು ಪ್ರವೇಶಿಸುವ ಕನಸು ಹೊಂದಿದೆ.

Champions Trophy 2025 Semi-Final Race Heats Up as Group B Battle Goes Down to the Wire

ದಕ್ಷಿಣ ಆಫ್ರಿಕಾ ತನ್ನ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಗೆಲ್ಲುವಲ್ಲಿ ಸಫಲರಾದರೆ, ನೇರವಾಗಿ ಸೆಮೀಸ್‌ಗೆ ಪ್ರವೇಶ ಪಡೆಯಲಿದೆ. ಇಲ್ಲವಾದಲ್ಲಿ ಮತ್ತೆ ಪಿಶ್ಚರ್‌ನಲ್ಲಿ ಪಾಯಿಂಟ್ಸ್‌ ಟೇನಲ್‌ನ ನೆಟ್‌ ರನ್‌ ರೇಟ್‌, ಪಾಯಿಂಟ್ಸ್‌ಗಳ ಲೆಕ್ಕಾಚಾರ ಆರಂಭವಾಗಲಿದೆ.

Take a Poll

ಭಾನುವಾರ ಲೀಗ್‌ ಹಂತದ ಜಿದ್ದಾಜಿದ್ದಿನ ಕಾದಾಟ

ಭಾನುವಾರ ನಡೆಯುವ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸುತ್ತದೋ, ಆ ಪಂದ್ಯ "ಎ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಪಡೆಯಲಿದೆ. ಭಾರತ vs ನ್ಯೂಜಿಲೆಂಡ್ ಪಂದ್ಯದ ನಂತರವೇ, ಎದುರಾಳಿ ಗುಂಪಿನಿಂದ ಭಾರತ ಯಾವ ತಂಡವನ್ನು ಎದುರಿಸಲಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ಪಂದ್ಯ ಮಾರ್ಚ್ 2 ರಂದು ದುಬೈನಲ್ಲಿ ನಡೆಯಲಿದೆ. ಇನ್ನು ಆಫ್ಘಾನಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡದಲ್ಲಿ ಯಾವೋದೋ ಒಂದು ತಂಡವನ್ನು ಎದುರಿಸಲಿದೆ. ಇದಕ್ಕೆಲ್ಲಾ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆ.

Story first published: Thursday, February 27, 2025, 13:34 [IST]
Other articles published on Feb 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+