Champions Trophy 2025: ದುಬೈನಲ್ಲಿ ಭಾರತದ ಸಮರಾಭ್ಯಾಸ ಶುರು
ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ದುಬೈ ತಲುಪಿದೆ. ಈ ಟೂರ್ನಿಯನ್ನು ಮೂರನೇ ಬಾರಿಗೆ ಎತ್ತುವ ಕನಸಿನಲ್ಲಿ ಟೀಮ್ ಇಂಡಿಯಾ, ಸೋಮವಾರ ಭರ್ಜರಿ ತಾಲೀಮು ನಡೆಸಿದೆ. ತನ್ನ ಎಲ್ಲ ಪಂದ್ಯಗಳನ್ನು ಭಾರತ ಇದೇ ಅಂಗಳದಲ್ಲಿ ಆಡುತ್ತಿದ್ದು ಕುತೂಹಲ ಮನೆ ಮಾಡಿದೆ. ಗೌತಮ್ ಗಂಭೀರ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಆಟಗಾರರ ಸಮರಭ್ಯಾಸ ನಡೆಸಿದರು.
ಟೀಮ್ ಇಂಡಿಯಾ ಈ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಫೆಬ್ರವರಿ 20 ರಂದು ಎದುರಿಸಲಿದೆ. ಈ ಟೂರ್ನಿಗಾಗಿ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸವನ್ನು ನಡೆಸಿತು. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಬೆವರು ಹರಿಸಿದರು. ಇದೇ ವೇಳೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಹಾಗೂ ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಬತ್ತಳಿಕೆಯಲ್ಲಿನ ಹಲವು ಶಾಟ್‌ಗಳನ್ನು ಪ್ರಯೋಗಿಸಿದರು.

ಗಿಲ್‌ಗೆ ಟಿಪ್ಸ್
ದುಬೈನಲ್ಲಿ ಅಭ್ಯಾಸವನ್ನು ಆರಂಭಿಸಿದ ಟೀಮ್ ಇಂಡಿಯಾ ಆಟಗಾರರು ಅಬ್ಬರದ ಪ್ರದರ್ಶನ ನೀಡುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ತಾವು ಮಾಡಿರವು ತಪ್ಪನ್ನು ಮೆಟ್ಟಿನಿಂತು ರನ್ ಕಲೆ ಹಾಕಲು ವಿರಾಟ್ ಕೊಹ್ಲಿ ಯೋಜನೆ ರೂಪಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ದುಬೈನಲ್ಲಿ ವಿರಾಟ್ ಬ್ಯಾಟ್ ಮಾಡುವಾಗ ಫುಟ್ ವರ್ಕ್ ಮೇಲೆ ಹೆಚ್ಚಿನ ಒತ್ತನ್ನು ನೀಡಿದರು.
ಟೀಮ್ ಇಂಡಿಯಾ ಆಟಗಾರರು ದುಬೈನಲ್ಲಿ ಅಭ್ಯಾಸವನ್ನು ಆರಂಭಿಸಿದ ವಿಡಿಯೋ ಹಾಗೂ ಫೋಟೋವನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೇಳೆ ಆಟಗಾರರು ಮಸ್ತ್ ಮಜಾ ಮಾಡುತ್ತಿರುವುದು ಸಹ ಕಂಡು ಬಂದಿದೆ. ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ಹಲವು ಬೌಲರ್‌ಗಳನ್ನು ಎದುರಿಸಿ ಸಮರಾಭ್ಯಾಸಕ್ಕೆ ಚಾಲನೆ ನೀಡಿದರು.

ಹಾರ್ದಿಕ್ ಬಿಗ್ ಹಿಟ್
ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರ ನೆಟ್ ಸೆಷನ್ ಭರ್ಜರಿಯಾಗಿ ನಡೆಸಿದರು. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರು ಶುಭಮನ್ ಗಿಲ್ ಅವರಿಗೆ ಹಲವು ಸಲಹೆ ನೀಡಿದರು. ಇದೇ ವೇಳೆ ಭರವಸೆಯ ಬ್ಯಾಟರ್ ಶ್ರೇಯಸ್ ಅಯ್ಯರ್ ಸಹ ನೆಟ್ಸ್‌ನಲ್ಲಿ ಬೆವರು ಹರಿಸಿದರು. ಇದೇ ವೇಳೆ ಹಾರ್ದಿಕ್ ಪಾಂಡ್ಯ ಸಹ ಮೈದಾನದಲ್ಲಿ ಮಿಂಚು ಹರಿಸಿದರು. ಬಿಗ್ ಶಾಟ್‌ಗಳನ್ನು ಪ್ರಯೋಗಿಸಿದ ಹಾರ್ದಿಕ್ ನವ ಉತ್ಸಾಹ ಮೂಡಿಸಿದರು. ಬರೀ ಬ್ಯಾಟಿಂಗ್, ಬೌಲಿಂಗ್ ಅಭ್ಯಾಸ ನಡೆಸದ ಭಾರತ ಆಟಗಾರರು ಮೈದಾನದಲ್ಲಿ ಫೀಲ್ಡಿಂಗ್ ಅಭ್ಯಾಸ ನಡೆಸಿದರು.
ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ "ಎ" ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ತಂಡಗಳು ಸ್ಥಾನ ಪಡೆದಿವೆ "ಬಿ" ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಇಂಗ್ಲೆಂಡ್ ತಂಡಗಳು ಇವೆ. ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications