Champions Trophy: ಬಾಂಗ್ಲಾದೇಶ ವಿರುದ್ಧ ಭಾರತದ ಪ್ಲೇಯಿಂಗ್-11 ರಿಂದ ಈ ನಾಲ್ವರು ಹೊರಗೆ
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 2:30 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಬಾಂಗ್ಲಾದೇಶ ತಂಡದ ನಾಯಕತ್ವನ್ನು ನಜ್ಮುಲ್ ಹಸನ್ ಶಾಂತೋ ವಹಿಸಲಿದ್ದಾರೆ. ಈ ರೋಚಕ ಪಂದ್ಯಕ್ಕೂ ಮೊದಲು, ಭಾರತದ ಸಂಭಾವ್ಯ ಪ್ಲೇಯಿಂಗ್-11 ಹೇಗಿರಲಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.
ಭಾರತ ತಂಡದ ಟಾಪ್ ಆರ್ಡರ್ ಸಂಪೂರ್ಣವಾಗಿ ಸಿದ್ಧವಾಗಿದೆ. ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಈ ಇಬ್ಬರ ನಂತರ, ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಜವಾಬ್ದಾರಿ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಅಕ್ಸರ್ ಪಟೇಲ್ ಅವರ ಕೈಯಲ್ಲಿದೆ. ಅಯ್ಯರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಅಕ್ಸರ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಕಾಣಬಹುದು. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಎಡ-ಬಲಗೈ ಸಂಯೋಜನೆಯನ್ನು ರಚಿಸಲು ಕೆಎಲ್ ರಾಹುಲ್ ಬದಲಿಗೆ ಅವರನ್ನು ಕಣಕ್ಕಿಳಿಸಬಹುದು. ಇದಾದ ನಂತರ, ಕೆಎಲ್ ರಾಹುಲ್ 6ನೇ ಸ್ಥಾನದಲ್ಲಿ ಆಡಬಹುದು.
ಭಾರತ ಇಬ್ಬರು ಅಪಾಯಕಾರಿ ಆಲ್‌ರೌಂಡರ್‌ಗಳಿಂದ ಫಿನಿಶಿಂಗ್ ನಿರೀಕ್ಷಿಸುತ್ತಿದೆ. ವೇಗದ ಬೌಲಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮ್ಯಾಚ್ ಫಿನಿಶರ್ ಆಗಿದ್ದಾರೆ. ಅವರಿಗೆ ಅನುಭವಿ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ ಬೆಂಬಲ ನೀಡಲಿದ್ದಾರೆ. ಇಬ್ಬರೂ ಭಾರತ ಪರ 7 ಮತ್ತು 8ನೇ ಸ್ಥಾನದಲ್ಲಿ ಆಡಬಹುದು. ಭಾರತ ಒಬ್ಬನೇ ಒಬ್ಬ ಪ್ರಮುಖ ಸ್ಪಿನ್ ಬೌಲರ್ ಜೊತೆ ಫೀಲ್ಡಿಂಗ್ ಮಾಡಬಹುದು. ಅವರು ಬೇರೆ ಯಾರೂ ಅಲ್ಲ, ಕುಲದೀಪ್ ಯಾದವ್. ಕುಲದೀಪ್ ತಂಡದ ಪ್ರಮುಖ ಸ್ಪಿನ್ ಬೌಲರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್ ಬೆಂಬಲ ನೀಡಲಿದ್ದಾರೆ. ಕುಲದೀಪ್ ಯಾದವ್ ಭಾರತ ಪರ 9ನೇ ಸ್ಥಾನದಲ್ಲಿ ಆಡಬಹುದು.
ಬಾಂಗ್ಲಾದೇಶ ವಿರುದ್ದ ಟೀಮ್ ಇಂಡಿಯಾದ ಇಬ್ಬರು ವೇಗಿಗಳು ಕಣಕ್ಕಿಳಿಬಹುದು. ಏಕೆಂದರೆ ಟೀಮ್ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ರೂಪದಲ್ಲಿ ಮತ್ತೊಂದು ವೇಗದ ಬೌಲಿಂಗ್ ಆಯ್ಕೆ ಇರಲಿದೆ. ಇಂತಹ ಪರಿಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾ ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇಬ್ಬರೂ ಭಾರತ ಪರ 10 ಮತ್ತು 11 ನೇ ಸ್ಥಾನದಲ್ಲಿ ಆಡಲಿದ್ದಾರೆ.
ಈ 11 ಆಟಗಾರರಿಗೆ ಬಾಂಗ್ಲಾದೇಶ ವಿರುದ್ಧದ ಭಾರತದ ಪ್ಲೇಯಿಂಗ್-11 ರಲ್ಲಿ ಅವಕಾಶ ನೀಡಿದರೆ, ನ್ವಾಲರು ಹೊರಗುಳಿಬೇಕಾಗುತ್ತದೆ. ಅವರುನ ಬೇರೆ ಯಾರು ಅಲ್ಲ, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ ಮತ್ತು ವರುಣ್ ಚಕ್ರವರ್. ಈ 4 ಆಟಗಾರರು ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಚೊಚ್ಚಲ ಪಂದ್ಯ ಆಡುವುದನ್ನು ಮಿಸ್ ಮಾಡಿಕೊಳ್ಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications