Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy 2025: ಭಾರತ ತಂಡದ ಪಂದ್ಯಗಳ ಟಿಕೆಟ್ ಮಾರಾಟ ಆರಂಭ

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಮೆಗಾ ಟೂರ್ನಿ ಆರಂಭಕ್ಕೆ ಕೇವಲ 2 ವಾರಗಳು ಮಾತ್ರ ಬಾಕಿ ಉಳಿದಿವೆ. ದುಬೈಗೆ ಹೋಗಿ ಟೀಮ್ ಇಂಡಿಯಾದ ಪಂದ್ಯಗಳನ್ನು ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕ್ರಿಕೆಟ್
ಅಭಿಮಾನಿಗಳ ಕಾಯುವಿಕೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕೊನೆಗೊಳಿಸಿದೆ. ಭಾರತ ತಂಡದ ಪಂದ್ಯಗಳ ಟಿಕೆಟ್ ಮಾರಾಟ ಆರಂಭವಾಗಿದೆ.

ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದ್ದು, ಟೀಮ್ ಇಂಡಿಯಾ ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಮ್ ಇಂಡಿಯಾದ ಹೈ-ವೋಲ್ಟೇಜ್ ಪಂದ್ಯಗಳಿಗೆ ಕ್ರಿಕೆಟ್ ಅಭಿಮಾನಿಗಳು ಟಿಕೆಟ್‌ಗಳನ್ನು ಹೇಗೆ ಖರೀದಿಸಬಹುದು? ಮತ್ತು ಅದರ ಬೆಲೆ ಎಷ್ಟು? ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯಿರಿ.

Champions Trophy 2025 Ticket sales for Team India matches begin

ಚಾಂಪಿಯನ್ಸ್ ಟ್ರೋಫಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುವುದು. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಉಳಿದ ತಂಡಗಳು ಪಾಕಿಸ್ತಾನದಲ್ಲಿ ಆಡಲಿವೆ. ಕಳೆದ ವಾರವಷ್ಟೇ ಪಾಕಿಸ್ತಾನದಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್‌ ಮಾರಾಟ ಆರಂಭವಾಗಿತ್ತು. ಇದಕ್ಕಾಗಿ ಆಫ್‌ಲೈನ್ ಸೌಲಭ್ಯವನ್ನೂ ಅಪ್ಡೇಟ್ ಮಾಡಲಾಗಿದೆ. ಫೆಬ್ರವರಿ 3 ರಂದು ಪಾಕಿಸ್ತಾನದ ಕಾಲಮಾನ ಸಂಜೆ 4 ಗಂಟೆಯಿಂದ ಪಾಕಿಸ್ತಾನದಲ್ಲಿ ಪಂದ್ಯಗಳಿಗೆ ಅಭಿಮಾನಿಗಳು ಆಫ್‌ಲೈನ್ ಟಿಕೆಟ್‌ಗಳನ್ನು ಖರೀದಿಸಬಹುದು. 26 ನಗರಗಳ ಟಿಸಿಎಸ್ ಕೇಂದ್ರಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ.

ಐಸಿಸಿಯ ಅಪ್ಡೇಟ್ ಏನು?

ದುಬೈನಲ್ಲಿ ನಡೆಯಲಿರುವ ಭಾರತ ತಂಡದ ಪಂದ್ಯಗಳ ಟಿಕೆಟ್‌ಗಳು ಫೆಬ್ರವರಿ 3 ರಂದು ಭಾರತೀಯ ಕಾಲಮಾನ ಸಂಜೆ 5:30 ರಿಂದ ಮಾರಾಟಕ್ಕೆ ಲಭ್ಯವಿರಲಿವೆ. ಈ ಬಗ್ಗೆ ಐಸಿಸಿ ಸೋಮವಾರ ತನ್ನ ಅಧಿಕೃತ ಪ್ರಕಟಣೆ ತಿಳಿಸಿದೆ. ಮೊದಲ ಸೆಮಿಫೈನಲ್ ಪಂದ್ಯ ಕೂಡ ದುಬೈನಲ್ಲಿ ನಡೆಯಲಿದೆ, ಇದಕ್ಕಾಗಿ ಐಸಿಸಿ ಅಪ್ಡೇಟ್‌ನಲ್ಲಿ ಮೊದಲ ಸೆಮಿಫೈನಲ್ ಮುಕ್ತಾಯದ ನಂತರ ಫೈನಲ್ ಪಂದ್ಯದ ಟಿಕೆಟ್ ಬೆಲೆ ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ತಿಳಿಸಿದೆ.

ಬೆಲೆ ಎಷ್ಟು?

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಉಭಯ ತಂಡಗಳು ಫೆಬ್ರವರಿ 23 ರಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಮೈದಾನ ತುಂಬಿ ತುಳುಕುವುದರಲ್ಲಿ ಸಂಶಯವಿಲ್ಲ. ಐಸಿಸಿ ಅಪ್ಡೇಟ್ ಪ್ರಕಾರ, ಸೌದಿ ಅರೇಬಿಯಾದ ಕರೆನ್ಸಿಯಲ್ಲಿ ಟಿಕೆಟ್ ಬೆಲೆ 125 ದಿರ್ಹಮ್ ಆಗಿದೆ. ಅಂದರೆ ಭಾರತದ ರೂಪಾಯಿನಲ್ಲಿ ಸುಮಾರು 3 ಸಾವಿರ ರೂ. ಆಗಿದೆ.

Story first published: Monday, February 3, 2025, 15:36 [IST]
Other articles published on Feb 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+