For Quick Alerts
ALLOW NOTIFICATIONS  
For Daily Alerts
 

Champions Trophy 2025: ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟರ್ಸ್

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ 20 ದಿನಗಳು ಅಂದರೆ ಫೆಬ್ರವರಿ 19 ರಂದು ಐಸಿಸಿಯ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಉದ್ದೇಶದಿಂದ ವಿಶ್ವದ ಅಗ್ರ 8 ಏಕದಿನ ತಂಡಗಳು ಮೈದಾನಕ್ಕಿಳಿಯಲಿವೆ. ಈ ಟೂರ್ನಿಯನ್ನು ಪಾಕಿಸ್ತಾನ ಮತ್ತು ಯುಎಇಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಆಡಿಸಲಾಗುತ್ತಿದೆ. ಭದ್ರತಾ ಕಾರಣಗಳಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು, ಹೀಗಾಗಿ ದುಬೈನಲ್ಲಿ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಆಡಲಿದೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ವಿಶ್ವದ ಅಗ್ರ ಬ್ಯಾಟರ್‌ಗಳು ಮತ್ತು ಬೌಲರ್‌ಗಳ ನಡುವೆ ಕಠಿಣ ಹೋರಾಟ ಕಂಡುಬರಲಿದೆ. ಈ ಟೂರ್ನಿ ಆರಂಭಕ್ಕೂ ಮುನ್ನ ಪ್ರಸ್ತುತ ಅತಿ ಹೆಚ್ಚು ಏಕದಿನ ರನ್‌ಗಳನ್ನು ಹೊಂದಿರುವ ಟಾಪ್-5 ಬ್ಯಾಟರ್‌ಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಟಾಪ್ ಐದು ಬ್ಯಾಟರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

Champions Trophy 2025 Top 5 active batsmen with the most runs in ODI cricket

ವಿರಾಟ್ ಕೊಹ್ಲಿ (ಭಾರತ)

ಮುಂಬರುವ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಪ್ರಕಟಿಸಿರುವ ಭಾರತ ತಂಡದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇದ್ದಾರೆ. ಪ್ರಸ್ತುತ, ಅವರು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಸಕ್ರಿಯ ಆಟಗಾರರಾಗಿದ್ದಾರೆ. ಕೊಹ್ಲಿ 295 ಪಂದ್ಯಗಳಲ್ಲಿ 58.18 ರ ಅತ್ಯುತ್ತಮ ಸರಾಸರಿಯಲ್ಲಿ ಒಟ್ಟು 13906 ರನ್ ಗಳಿಸಿದ್ದಾರೆ. ಇದರಲ್ಲಿ 50 ಶತಕಗಳು ಮತ್ತು 72 ಅರ್ಧ ಶತಕಗಳು ಸೇರಿವೆ. ಏಕದಿನದಲ್ಲಿ ಅವರ ಅತ್ಯುತ್ತಮ ಸ್ಕೋರ್ 183 ರನ್. ಇವರಿಂದ ಚಾಂಪಿಯನ್ ಟ್ರೋಫಿಯಲ್ಲಿಯೂ ರನ್ ಮಳೆ ಸುರಿಸುವ ನಿರೀಕ್ಷೆಯಿದೆ.

ಮುಶ್ಫಿಕರ್ ರಹೀಮ್ (ಬಾಂಗ್ಲಾದೇಶ)

ಚಾಂಪಿಯನ್ಸ್ ಟ್ರೋಫಿ 2025ರ ಬಾಂಗ್ಲಾದೇಶ ತಂಡದಲ್ಲಿರುವ ಮುಶ್ಫಿಕರ್ ರಹೀಮ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಆಡುತ್ತಿರುವ ಬ್ಯಾಟರ್‌ಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ರಹೀಮ್ 272 ಪಂದ್ಯಗಳಲ್ಲಿ 7793 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 49 ಅರ್ಧ ಶತಕ ಮತ್ತು 9 ಶತಕಗಳನ್ನು ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರ ಗರಿಷ್ಠ ಸ್ಕೋರ್ 144 ರನ್.

ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

ನ್ಯೂಜಿಲೆಂಡ್‌ನ ಬಲಗೈ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿರುವ ಸಕ್ರಿಯೆ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನದಲ್ಲಿದ್ದಾರೆ. ಫೆಬ್ರವರಿ 19 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಅವರು ಮತ್ತಷ್ಟು ರನ್ ಕಲೆ ಹಾಕುವ ನಿರೀಕ್ಷೆಯಿದೆ. ವಿಲಿಯಮ್ಸನ್ 165 ಏಕದಿನ ಪಂದ್ಯಗಳಲ್ಲಿ 48.64 ಸರಾಸರಿಯಲ್ಲಿ ಒಟ್ಟು 6810 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 45 ಅರ್ಧಶತಕಗಳು ಮತ್ತು 15 ಶತಕಗಳಿವೆ. ಏಕದಿನ ಕ್ರಿಕೆಟ್‌ನಲ್ಲಿ ಅವರ ಅತ್ಯುತ್ತಮ ಸ್ಕೋರ್ 148 ರನ್.

ಜೋ ರೂಟ್ (ಇಂಗ್ಲೆಂಡ್)

ಸ್ಟಾರ್ ಬ್ಯಾಟರ್ ಜೋ ರೂಟ್ 2025ರ ಚಾಂಪಿಯನ್ಸ್ ಟ್ರೋಫಿಯ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಕ್ರಿಯ ಬ್ಯಾಟರ್‌ಗಳಲ್ಲಿ ಜೋ ರೂಟ್ ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. ರೂಟ್ 171 ಪಂದ್ಯಗಳಲ್ಲಿ 47.60 ಸರಾಸರಿಯಲ್ಲಿ ಒಟ್ಟು 6522 ರನ್ ಗಳಿಸಿದ್ದಾರೆ. ಇದರಲ್ಲಿ 39 ಅರ್ಧಶತಕಗಳು ಮತ್ತು 16 ಶತಕಗಳು ಸೇರಿವೆ. ಈ ಸ್ವರೂಪದಲ್ಲಿ ಅವರ ಗರಿಷ್ಠ ಸ್ಕೋರ್ ಅಜೇಯ 133 ರನ್ ಆಗಿದೆ.

ಬಾಬರ್ ಆಜಮ್ (ಪಾಕಿಸ್ತಾನ)

ಪಾಕಿಸ್ತಾನ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಈ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನದ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಆದರೂ ಅವರನ್ನು ತಂಡಕ್ಕೆ ಸೇರಿಸಿಕೊಳ್ಳದೆ ಬೇರೆ ದಾರಿಯಿಲ್ಲ. ಬಾಬರ್ 123 ಏಕದಿನ ಪಂದ್ಯಗಳಲ್ಲಿ 56.73 ರ ಅತ್ಯುತ್ತಮ ಸರಾಸರಿಯೊಂದಿಗೆ ಒಟ್ಟು 5957 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 158 ರನ್. ಅವರು 19 ಶತಕ ಮತ್ತು 34 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

Story first published: Wednesday, January 29, 2025, 22:29 [IST]
Other articles published on Jan 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+