Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಭಾರತ ಭಾವೈಕ್ಯತೆಯ ನಾಡು ಎಂಬುದಕ್ಕೆ ವಿರಾಟ್‌ನ ಈ ವಿಡಿಯೋ ನೋಡಿ

ಭಾರತ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಭಾನುವಾರ ದುಬೈನ ಅಂತಾರಾಷ್ಟ್ರೀಯ ಅಂಗಳದಲ್ಲಿ ಸ್ಥಿರ ಪ್ರದರ್ಶನ ನೀಡಿದ ಟೀಮ್ ಇಂಡಿಯಾ 4 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಸಾಧನೆ ಮಾಡಿದೆ. ಸತತ ಎರಡು ವರ್ಷಗಳಲ್ಲಿ ಎರಡು ಐಸಿಸಿ ಟೂರ್ನಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಈ ಗೆಲುವಿನ ಸಂಭ್ರಮಾಚರಣೆಯನ್ನು ದುಬೈ ಸೇರಿದಂತೆ ದೇಶದಲ್ಲಿ ಆಚರಿಸಲಾಯಿತು.

ಟೀಮ್ ಇಂಡಿಯಾದ ಪರ ರವೀಂದ್ರ ಜಡೇಜಾ 49ನೇ ಓವರ್‌ನಲ್ಲಿ ನ್ಯೂಜಿಲೆಂಡ್‌ ತಂಡದ ಓರೂಕ್‌ ಎಸೆದ ಕೊನೆಯ ಎಸೆತವನ್ನು ಡೀಪ್‌ ಸ್ಕ್ವೇರ್‌ ಲೆಗ್‌ನಲ್ಲಿ ತಳ್ಳಿ ನಾಲ್ಕು ರನ್‌ ಬಾರಿಸುತ್ತಿದ್ದಂತೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಗಣದಲ್ಲಿ ಸಂಭ್ರಮ ಆರಂಭವಾಯಿತು. ಮರಭೂಮಿಯ ನಾಡಿನಲ್ಲಿ ಒಮ್ಮಿಂದ ಒಮ್ಮಿಲೆ ರಾತ್ರಿಯಲ್ಲಿ ಪಟಾಕಿಗಳ ಚಿತ್ತಾರ ಅಭಿಮಾನಿಗಳನ್ನು ರಂಜಿಸಿತು. ಭಾರತದ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯ ಪ್ರಶಸ್ತಿಯನ್ನು ಮೂರನೇ ಬಾರಿಗೆ ಎತ್ತಿ ಸಂಭ್ರಮಿಸಿತು.

Champions Trophy Final 2025 Virat Kohli Touches Mohammed Shami s Mother s Feet in Viral Video

ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ವಿಐಪಿ ಬಾಕ್ಸ್‌ನಲ್ಲಿದ್ದ ಆಟಗಾರರ ಕುಟುಂಬಸ್ಥರು ಸಹ ತುಂಬ ಎಂಜಾಯ್‌ ಮಾಡಿದರು. ಈ ವೇಳೆ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಅವರ ಕುಟುಂಬಸ್ಥರು ಸಂಭ್ರಮಿಸಿದರು. ಇದೇ ವೇಳೆ ಮೊಹಮ್ಮದ್‌ ಶಮಿ ತಾಯಿ ಸಹ ಮೈದಾನಕ್ಕೆ ಬಂದರು. ಆಗ ಸೆರೆಯಾದ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

ವೈರಲ್‌ ವಿಡಿಯೋ

ಟೀಮ್ ಇಂಡಿಯಾದ ಸೂಪರ್ ಸ್ಟಾರ್‌ ಬೌಲರ್‌ ಮೊಹಮ್ಮದ್ ಶಮಿ ತಮ್ಮ ಕರಾರುವಾಕ್‌ ದಾಳಿಯಿಂದ ಹೆಸರುವಾಸಿ. ಇವರ ಶೋಕೇಸ್‌ನಲ್ಲಿ ವಿಶ್ವ ಮಟ್ಟದ ಯಾವುದೇ ಪ್ರಶಸ್ತಿಗಳು ಇರಲಿಲ್ಲ. ಈ ಬರ ಈಗ ಕೊನೆಗೊಂಡಿದೆ. ಶಮಿ ಐಸಿಸಿ ವಿಶ್ವ ಚಾಂಪಿಯನ್‌ ತಂಡದ ಸದಸ್ಯ. ಈ ಘಳಿಗೆಯನ್ನು ಕಣ್ಣು ತುಂಬಿಕೊಳ್ಳಲು ಅವರ ತಾಯಿ ಸಹ ಮೈದಾನಕ್ಕೆ ಆಗಮಿಸಿದ್ದರು. ಪಂದ್ಯ ಮುಗಿಯುತ್ತಿದ್ದಂತೆ ಮೈದಾನಕ್ಕೆ ಬಂದ ಇವರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು.

Take a Poll

ಮೊಹಮ್ಮದ್ ಶಮಿ ತಾಯಿ ಬಂದಿರುವುದನ್ನು ನೋಡಿದ ವಿರಾಟ್ ಕೊಹ್ಲಿ ಬಂದವರೇ, ಅವರ ಕಾಲುಗಳಿಗೆ ನಮಸ್ಕರಿಸಿದರು. ಬಳಿಕ ಶಮಿ ಕುಟುಂಬ ವಿರಾಟ್‌ ಕೊಹ್ಲಿ ಜೊತೆಗೆ ಫೋಟೋ ತೆಗಿಸಿಕೊಂಡು ಖುಷಿ ಪಟ್ಟಿತು. ಈ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಸಖತ್ ವೈರಲ್ ಆಗುತ್ತಿದೆ.

ಗಾಯದ ಕಾರಣದಿಂದ ಮೊಹಮ್ಮದ್ ಶಮಿ ಹಲವು ತಿಂಗಳುಗಳ ಕಾಲ ಕ್ರಿಕೆಟ್ ಮೈದಾನದಿಂದ ದೂರ ಇದ್ದರು. ಬಳಿಕ ಸತತ ಪರಿಶ್ರಮ ಪಟ್ಟು ದೇಶೀಯ ಸರ್ಕಿಟ್‌ನಲ್ಲಿ ಬೆವರು ಹರಿಸಿದರು. ಆ ನಂತರವೇ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಿದರು. ಕಂ ಬ್ಯಾಕ್ ಮಾಡಿದ ಪಂದ್ಯದಲ್ಲಿ ಶಮಿ ಅಮೋಘ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಿಂಚಿದರು.

Story first published: Monday, March 10, 2025, 12:05 [IST]
Other articles published on Mar 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+