For Quick Alerts
ALLOW NOTIFICATIONS  
For Daily Alerts
 

ಈ ಬಾರಿ ಚಿನ್ನದ ಬೌಲ್‌ ಯಾರಿಗೆ? ಇಬ್ಬರು ಭಾರತೀಯರ ಮೇಲೆ ಕಣ್ಣು

ಚಾಂಪಿಯನ್ಸ್ ಟ್ರೋಫಿ ಫೈನಲ್‌ ಹಂತಕ್ಕೆ ಬಂದು ನಿಂತಿದೆ. ಭಾನುವಾರ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್‌ ಫೈಟ್ ನಡೆಯಲಿದೆ. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಲಿದ್ದು, ಎಲ್ಲರ ಚಿತ್ತ ಕದ್ದಿದೆ. ಬ್ಯಾಟರ್‌ಗಳ ಆರ್ಭಟಕ್ಕೆ ಬ್ರೇಕ್‌ ಹಾಕುವ ಬೌಲರ್‌ಗಳು ಟೂರ್ನಿಯಲ್ಲಿ ಮಿಂಚಿದ್ದಾರೆ. ದುಬೈ ಅಂಗಳದಲ್ಲಿ ಉಭಯ ತಂಡಗಳ ಬೌಲರ್‌ಗಳು ಇತಿಹಾಸ ನಿರ್ಮಿಸುವ ಕನಸಿನಲ್ಲಿದ್ದಾರೆ. ಹಾಗಿದ್ದರೆ ಯಾವ ಬೌಲರ್‌ ಗೋಲ್ಡನ್‌ ಬೌಲ್‌ ಮೇಲೆ ಮೂರು ಆಟಗಾರರು ಕಣ್ಣು ನೆಟ್ಟಿದ್ದಾರೆ.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಏಕದಿನ ಫಾರ್ಮೆಟ್‌ನಲ್ಲಿ ನಡೆಯುತ್ತಿದೆ. ಈ ವೇಳೆ ಟೀಮ್ ಇಂಡಿಯಾ ಸೇರಿದಂತೆ ಒಟ್ಟು 8 ತಂಡಗಳು ಭಾಗವಗಿಸಿದ್ದವು. ಈ ಟೂರ್ನಿಯಲ್ಲಿ ಭಾರತ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಅರ್ಹತೆ ಪಡೆದಿವೆ. ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಆಟಗಾರನಿಗೆ ಚಿನ್ನದ ಬೌಲ್‌ ನೀಡುತ್ತಾರೆ. ಈ ಚೆಂಡಿನ ಮೇಲೆ ಮೂವರು ಆಟಗಾರರು ಕಣ್ಣು ನೆಟ್ಟಿದ್ದಾರೆ. ಇದರಲ್ಲಿ ಇಬ್ಬರು ಭಾರತೀಯ ಆಟಗಾರರು ಸೇರಿದ್ದಾರೆ.

Champions Trophy Final Battle for the Golden Bowl Between Matt Henry Mohammed Shami and Varun

ಮ್ಯಾಟ್‌ ಹೆನ್ರಿ

ನ್ಯೂಜಿಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದಾರೆ. ಇವರು ಆಡಿದ 4 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಆದರೆ ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಇವರು ಮೈದಾನಕ್ಕೆ ಇಳಿಯುವ ಬಗ್ಗೆ ಯಾವುದೇ ಅಪ್‌ಡೇಟ್‌ ಸಿಕ್ಕಿಲ್ಲ.

Take a Poll

ಮೊಹಮ್ಮದ್‌ ಶಮಿಗೂ ಸ್ಥಾನ

ಗಾಯದಿಂದ ಚೇತರಿಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ ಭರ್ಜರಿ ಕಂ ಬ್ಯಾಕ್ ಮಾಡಿರುವ ಮೊಹಮ್ಮದ್ ಶಮಿ ಸಹ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಆಡಿರುವ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಬ್ಬರಿಸಿದ್ದರು. ಈ ವೇಳೆ ಐದು ವಿಕೆಟ್‌ ಸಾಧನೆ ಮಾಡಿದ್ದರು. ಇವರು ಟೂರ್ನಿಯಲ್ಲಿ ಒಟ್ಟಾರೆ 8 ವಿಕೆಟ್‌ ಕಬಳಿಸಿದ್ದಾರೆ. ಇವರು ನ್ಯೂಜಿಲೆಂಡ್‌ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದರೆ, ಗೋಲ್ಡನ್‌ ಬೌಲ್‌ಗೆ ಇವರು ಅಧಿಪತಿ ಆಗಬಹುದು.

Champions Trophy Final Battle for the Golden Bowl Between Matt Henry Mohammed Shami and Varun

ವರುಣ್‌ ಕಮಾಲ್‌

ಇಂಗ್ಲೆಂಡ್‌ ವಿರುದ್ದದ ಟಿ20 ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆಯನ್ನು ಮಾಡಿರುವ ವರುಣ್‌ ಚಕ್ರವರ್ತಿ ಅವರಿಗೆ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯಲ್ಲಿ ಅವಕಾಸ ಸಿಕ್ಕಿತ್ತು. ಇವರು ಈ ವೇಳೆ ಸ್ಥಿರ ಪ್ರದರ್ಶನ ನೀಡಿದ್ದರಿಂದ ಇವರಿಗೆ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ಇವರು ಆಡಿರುವ 2 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿರುವ ವರುಣ್‌ ಗೋಲ್ಡನ್‌ ಬೌಲ್‌ ಮೇಲೆ ಕಣ್ಣು ನೆಟ್ಟಿದ್ದಾರೆ.

1
7-2025

ಅತಿ ಹೆಚ್ಚು ವಿಕೆಟ್‌ ಸಾಧನೆ ಮಾಡಿರುವ ಅಗ್ರ 5 ಬೌಲರ್ಸ್‌

ಮ್ಯಾಟ್ ಹೆನ್ರಿ, ನ್ಯೂಜಿಲೆಂಡ್‌, 10 ವಿಕೆಟ್‌
ಮೊಹಮ್ಮದ್ ಶಮಿ, ಭಾರತ, 8 ವಿಕೆಟ್‌
ವರುಣ್‌ ಚಕ್ರವರ್ತಿ, ಭಾರತ, 7 ವಿಕೆಟ್‌
ಅಜ್ಮತುಲ್ಲಾ ಓಮರ್ಜಾಯಿ, ಅಫ್ಘಾನಿಸ್ತಾನ, 7 ವಿಕೆಟ್
ಬೆನ್ ದ್ವಾರ್ಶುಯಿಸ್, ಆಸ್ಟ್ರೇಲಿಯಾ, 7 ವಿಕೆಟ್‌

Story first published: Saturday, March 8, 2025, 13:11 [IST]
Other articles published on Mar 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+