IND vs NZ: ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಹೇಗಿರಲಿದೆ ಪಿಚ್? ಯಾರಿಗೆ ಇಲ್ಲಿ ನೆರವು?
ಸದ್ಯ ವಿಶ್ವದ ಕ್ರೀಡಾಭಿಮಾನಿಗಳ ಚಿತ್ತ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ಮೇಲೆ ನೆಟ್ಟಿರಲಿದೆ. ಈ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ತನ್ನೊಂದಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಹೊತ್ತು ತರಲಿದೆ. ಉಭಯ ತಂಡಗಳು ಬಲಿಷ್ಠವಾಗಿದ್ದು, ಯಾರು ಈ ಕಪ್ ಗೆಲ್ಲಬಹುದು ಎಂದು ಹೇಳುವುದು ಕೊಂಚ ಕಷ್ಟ. ಆದರೆ ಇಲ್ಲಿನ ಪರಿಸ್ಥಿತಿಗಳ ಪರಿಚಯ ಭಾರತೀಯ ಆಟಗಾರರಿಗೆ ಹೆಚ್ಚಿದೆ. ಹೀಗಾಗಿ ಇದರ ಲಾಭವನ್ನು ಅವರು ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಹೈ ವೋಲ್ಟೇಜ್ ಪಂದ್ಯಕ್ಕೆ ಪಿಚ್ ಯಾವ ರೀತಿ ಇರಲಿದೆ ಎಂಬ ಬಗ್ಗೆ ಈಗಗಾಲೇ ಒಂದು ಮಾಹಿತಿ ಸಿಕ್ಕಿದೆ. ಈ ಪಿಚ್‌ನಲ್ಲಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಪಂದ್ಯಗಳನ್ನು ಆಡಿಸಲಾಗಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಆದರೆ ಈ ಪಂದ್ಯವನ್ನು ಟೀಮ್ ಇಂಡಿಯಾ ಹಗುರವಾಗಿ ಪರಿಗಣಿಸುವಂತೆ ಇಲ್ಲ. ನ್ಯೂಜಿಲೆಂಡ್ ತಂಡದಲ್ಲೂ ವಿಶ್ವ ವಿಖ್ಯಾತ ಆಟಗಾರರು ಇದ್ದಾರೆ.

ಭಾರತ ಚಾಂಪಿಯನ್ಸ್ ಟ್ರೋಫಿಯ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಈ ವೇಳೆ ಫೈನಲ್ ಪಂದ್ಯಕ್ಕೆ ಬಳಸಲಾಗುವ ಪಿಚ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಲೀಗ್ ಹಂತದ ಪಂದ್ಯಗಳು ನಡೆದಿದ್ದವು. ಈ ಪಿಚ್ ಸ್ಪಿನ್ ಬೌಲರ್‌ಗಳಿಗೆ ಸಹಾಯ ನೀಡುತ್ತದೆ. ಹೀಗಾಗಿ ಟೀಮ್ ಇಂಡಿಯಾ ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಇಲ್ಲವೇ ಇಲ್ಲ. ಕಾರಣ ನ್ಯೂಜಿಲೆಂಡ್ ತಂಡದಲ್ಲೂ ಅನುಭವಿ ಸ್ಪಿನ್ ಬೌಲರ್‌ಗಳ ದಂಡೇ ಇದೆ. ಹೀಗಾಗಿ ಈ ಪಂದ್ಯ ರೋಚಕತೆಯಿಂದ ಕೂಡಿರುತ್ತದೆ.
ಹೇಗಿದೆ ಪಿಚ್?
ಫೆಬ್ರವರಿ 23 ರಂದು ಭಾರತ ಇದೇ ಪಿಚ್‌ನ ಮೇಲೆ ಪಾಕಿಸ್ತಾನ ತಂಡವನ್ನು ಮಣಿಸಿತ್ತು. ಈ ಪಿಚ್‌ನ್ನು ಸುಲಭವಾಗಿ ಲೆಕ್ಕಾ ಹಾಕುವಂತಿಲ್ಲ. ಈ ಪಿಚ್‌ನ ಮೇಲೆ ದೊಡ್ಡ ಸ್ಕೋರ್ ಗಳಿಸುವುದು ಕಷ್ಟ. ಈ ಪಿಚ್ ಕಾಲ ಕಳೆದಂತೆ ನಿಧಾನವಾಗುತ್ತದೆ. ಇದು ಭಾರತಕ್ಕೆ ಒಳ್ಳೆಯ ವಿಚಾರವೇ ಆಗಿದೆ. ಆದರೆ ಭಾರತದಷ್ಟೇ ನುರಿತ ಸ್ಪಿನ್ ಬೌಲರ್‌ಗಳು ನ್ಯೂಜಿಲೆಂಡ್ ತಂಡದಲ್ಲಿದ್ದು, ರೋಹಿತ್ ಶರ್ಮಾ ಪಡೆಯನ್ನು ಕಟ್ಟಿ ಹಾಕಬಲ್ಲರು.

ಈ ಪಿಚ್‌ನಲ್ಲಿ ಈಗಾಗಲೇ ಟೀಮ್ ಇಂಡಿಯಾದ ಬೌಲರ್‌ಗಳು ಮೆರೆದಾಟ ನಡೆಸಿದ್ದಾರೆ. ಚೈನಾ ಮೆನ್ ಬೌಲರ್ ಕುಲ್ದೀಪ್ ಯಾದವ್ ಈ ಪಂದ್ಯದಲ್ಲಿ ಮೂರು ಪಡೆದಿದ್ದಾರೆ. ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳ ಆರ್ಭಟ ಜೋರಾಗಿದೆ. ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ವರುಣ್ ಚಕ್ರವರ್ತಿ ಸ್ಥಾನ ಪಡೆದಿರಲಿಲ್ಲ. ಆದರೆ ಈಗ ಅವರು ತಂಡದ ಭಾಗವಾಗಿದ್ದಾರೆ. ಇವರ ಸ್ಪಿನ್ ದಾಳವನ್ನು ಎದುರಿಸುವಲ್ಲಿ ಕಿವೀಸ್ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ರು.
ಇದೇ ಪಿಚ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಲಯ ಕಂಡುಕೊಂಡಿದ್ದರು. ಶ್ರೇಯಸ್ ಅಯ್ಯರ್ ಸಹ ಸ್ಥಿರ ಬ್ಯಾಟಿಂಗ್ ನಡೆಸಿದ್ದಾರೆ. ಈ ಪಿಚ್‌ನಲ್ಲಿ 250 ರನ್ ಉತ್ತಮ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು, ಕಿವೀಸ್ ಬ್ಯಾಟರ್‌ಗಳಿಗೆ ಕಾಡಬಲ್ಲರು. ಫೈನಲ್‌ನಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಕುತೂಹಲ ಮನೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications