ಚಾಂಪಿಯನ್ ಟ್ರೋಫಿ ಅಭ್ಯಾಸ ಪಂದ್ಯಗಳು ಮೇ 26ರಿಂದ ಆರಂಭ
ಬೆಂಗಳೂರು, ಮೇ 22 : ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಟೂರ್ನಿ ಜೂನ್ 1 ರಿಂದ 18ರ ತನಕ ವಿಶ್ವದ 8 ತಂಡಗಳ ನಡುವೆ ನಡೆಯಲಿದೆ. ಜೂನ್ 1ರಂದು ಟೂರ್ನಿ ಆರಂಭಗೊಂಡರೆ ಜೂನ್ 04ರಂದು ಬಿ ಗುಂಪಿನ ಮಹಾನ್ ಕದನ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ.
ಈ ನಡುವೆ ಅಧಿಕೃತವಾಗಿ ಟೂರ್ನಮೆಂಟ್ ಆರಂಭಕ್ಕೂ ಮುನ್ನ ಭಾರತ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದ್ದು,ಅಭ್ಯಾಸ ಪಂದ್ಯಗಳು ಮೇ 26ರಿಂದ ಆರಂಭವಾಗಲಿದ್ದು, ಮೇ 30ರ ತನಕ ನಡೆಯಲಿದೆ.

ಭಾರತೀಯ ಕಾಲಮಾನ ಪ್ರಕಾರ ಕ್ರಮವಾಗಿ ಹಗಲು ಪಂದ್ಯ ಮಧ್ಯಾಹ್ನ 3 ಗಂಟೆ ಹಾಗೂ ಹಗಲು /ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ.
ಮೇ 28(ಭಾನುವಾರ)ರಂದು ಹಾಗೂ ಮೇ 30(ಮಂಗಳವಾರ) ರಂದು ಕ್ರಮವಾಗಿ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳ ವಿರುದ್ಧ ಭಾರತ ಅಭ್ಯಾಸ ಪಂದ್ಯವನ್ನಾಡಲಿದೆ. ಎರಡು ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ನಲ್ಲಿ ಪ್ರಸಾರವಾಗಲಿದೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: CT 17: India to play 2 practice games
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications