For Quick Alerts
ALLOW NOTIFICATIONS  
For Daily Alerts
 

2027ರ ವಿಶ್ವಕಪ್‌ಗೆ ಈ ಮೂವರು ಆಟಗಾರರಿಗೆ ಸ್ಥಾನವಿಲ್ಲ

ಚಾಂಪಿಯನ್ಸ್‌ ಟ್ರೋಫಿ ಏಕದಿನ ಟೂರ್ನಿ ಮುಕ್ತಾಯವಾಗಿದೆ. ಸ್ಥಿರ ಪ್ರದರ್ಶನವನ್ನು ನೀಡಿರುವ ಟೀಮ್ ಇಂಡಿಯಾ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಈ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಬ್ಲ್ಯೂ ಬಾಯ್ಸ್‌ ಮೂರನೇ ಬಾರಿಗೆ ಚಾಂಪಿಯನ್ಸ್‌ ಟ್ರೋಫಿ ಎತ್ತಿ ಸಂಭ್ರಮಿಸಿದ್ದಾರೆ. ಇನ್ನು ಟೀಮ್ ಇಂಡಿಯಾದ ಮುಂದಿನ ದೃಷ್ಟಿ 2027 ಏಕದಿನ ವಿಶ್ವಕಪ್ ಆಗಿರಲಿದೆ. ಈ ಹಿನ್ನೆಲೆ ಯಾವೆಲ್ಲಾ ಆಟಗಾರರು ಮುಂದಿನ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ವಂಚಿತರಾಗಬಹುದು ಎಂಬುದಕ್ಕೆ ಇಲ್ಲಿದೆ ವರದಿ.

ಒಂದು ಟೂರ್ನಿ ಮುಗಿದ ತಕ್ಷಣ ನಿಶ್ಚಿತವಾಗಿ ಒಂದೆರಡು ದಿನ ಸೆಲಬ್ರೇಷನ್‌ ಇದ್ದೇ ಇರುತ್ತದೆ. ಸೆಲಬ್ರೇಷನ್‌ ಎಲ್ಲಾ ಮುಗಿದ ಬಳಿಕ ಮತ್ತೆ ತಂಡಗಳು ಮುಂದಿನ ಗುರಿಯತ್ತ ಚಿತ್ತವನ್ನು ನೆಡುತ್ತವೆ. ಟೀಮ್ ಇಂಡಿಯಾ ಸಹ 2027ರ ವಿಶ್ವಕಪ್‌ ಮೇಲೆ ಕಣ್ಣು ನೆಟ್ಟಿದ್ದು, ಭರ್ಜರಿ ತಯಾರಿ ನಡೆಸಲಿದೆ. ಈ ಬಾರಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿದ ಆ ಮೂರು ಆಟಗಾರರು ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಅನುಮಾನವಾಗಿದೆ.

Champions Trophy Triumph 3 Indian Players Who May Miss the 2027 ODI World Cup

ಸ್ಟಾರ್ ವೇಗಿ

ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್‌ ಮೊಹಮ್ಮದ್‌ ಶಮಿ.. ಇದೇ ಮೊದಲ ಬಾರಿಗೆ ತಮ್ಮ ಶೋಕೆಸ್‌ನಲ್ಲಿ ಒಂದು ವಿಶ್ವ ಪ್ರಶಸ್ತಿಯನ್ನು ಇಡಲಿದ್ದಾರೆ. ಇವರು ಪ್ರಸಕ್ತ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಕೊಂಚ ಹಿಂದೆ ಬಿದ್ದರು. ಇವರು ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧ ಅಬ್ಬರಿಸಿದ್ರೂ ಸಹ, ಉಳಿದ ಪಂದ್ಯಗಳಲ್ಲಿ ಮೊನಚಾದ ದಾಳಿ ಸಂಘಟಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಈಗ ಇವರಿಗೆ 37 ವರ್ಷ. ಇವರ ವಯಸ್ಸು ಹಾಗೂ ಗಾಯ ಇವರನ್ನು ಮುಂದಿನ ವಿಶ್ವಕಪ್‌ಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ತೊಂದರೆ ನೀಡಬಹುದಾಗಿದೆ.

Take a Poll

ಜಡೇಜಾ

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ಗಳ ಪಟ್ಟಿಯನ್ನು ನೋಡಿದಾಗ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರರ ರವೀಂದ್ರ ಜಡೇಜಾ. ಇವರ ಫಿಟ್ನೆಸ್‌, ಬೌಲಿಂಗ್‌, ಬ್ಯಾಟಿಂಗ್‌, ಫೀಲ್ಡಿಂಗ್‌ ಕಮಾಲ್‌. ಇವರ ಅನುಭವ ತಂಡಕ್ಕೆ ನೆರವಾಗುತ್ತಿದೆ. 2027ರ ವಿಶ್ವಕಪ್‌ ವೇಳೆಗೆ ಇವರಿಗೆ ಸುಮಾರು 38 ವರ್ಷ ಆಗು ಬಹುದು. ಆಗ ಟೀಮ್ ಮ್ಯಾನೇಜ್ಮೆಂಟ್‌ ಯುವ ಆಲ್‌ರೌಂಡರ್‌ಗಳಾದ ಅಕ್ಷರ್‌ ಪಟೇಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರಿಗೆ ಆದ್ಯತೆ ನೀಡಬಹುದು. ಭವಿಷ್ಯದ ದೃಷ್ಟಿಯಿಂದ ಜಡ್ಡು ತಂಡದಿಂದ ದೂರ ಸರಿಯಬಹುದಾಗಿದೆ.

Champions Trophy Triumph 3 Indian Players Who May Miss the 2027 ODI World Cup

ರಿಷಭ್ ಪಂತ್

ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದು ಒಂದೇ ಒಂದು ಪಂದ್ಯವನ್ನು ಆಡದೇ, ತವರಿನತ್ತ ಮುಖ ಮಾಡಿರುವ ರಿಷಭ್‌ ಪಂತ್‌ ಅವರಿಗೆ ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವುದು ದುಸ್ತರ. ಇವರು ಆಡಿದ 31 ಏಕದಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಆಕ್ರಮಣಕಾರಿ ಆಟದ ಶೈಲಿಯ ಆಟಗಾರ ಇವರಿಗೆ ಕೆಎಲ್‌ ರಾಹುಲ್‌ ಪೈಪೋಟಿ ನೀಡುತ್ತಿದ್ದಾರೆ. ಇನ್ನು ಎಡಗೈ ಮಧ್ಯಮ ಕ್ರಮಾಂಕದ ಎಂಬ ಯೋಚನೆ ಬಂದಾಗಾಲೂ ಅಕ್ಷರ್‌ ಪಟೇಲ್‌ ಎದ್ದು ಕಾಣುತ್ತಾರೆ. ಹೀಗಾಗಿ ಇವರ ಭವಿಷ್ಯದ ಬಗ್ಗೆಯೂ ಅನಿಶ್ಚಿತತೆ ಕಾಡುತ್ತಿದೆ.

Story first published: Monday, March 10, 2025, 18:19 [IST]
Other articles published on Mar 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+