ವಿಶ್ವಕಪ್ ಕ್ಯಾಪ್ಟನ್ ಗೆ ದೂಸ್ರಾ ಎಸೆಯಲು ಫ್ಯಾನ್ಸಿಗೆ ಅವಕಾಶ
ಬೆಂಗಳೂರು, ಫೆ.12: ವಿಶ್ವಕಪ್ 2015 ಟೂರ್ನಿಗೆ ಅಧಿಕೃತವಾಗಿ ಚಾಲನೆ ಸಿಕ್ಕಿರುವ ಬೆನ್ನಲ್ಲೇ ಅಭಿಮಾನಿಗಳು ಹೆಚ್ಚೆಚ್ಚು ಕ್ರಿಕೆಟ್ ತಾರೆಗಳ ಜೊತೆ ಬೆರೆಯಲು ಐಸಿಸಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಬಳಸುತ್ತಿದೆ. ವಿಶ್ವಕಪ್ ಉದ್ಘಾಟನಾ ಸಮಾರಂಭದ ಚಿತ್ರಗಳನ್ನು ಟ್ವೀಟ್ ಮಾಡುವ ಮೂಲಕ ಜನಕ್ಕೆ ಹತ್ತಿರವಾದ ಐಸಿಸಿ ಈಗ ಟೀಂ ಕ್ಯಾಪ್ಟನ್ ಗಳನ್ನು ಫ್ಯಾನ್ಸ್ ಹತ್ತಿರಕ್ಕೆ ಕರೆದೊಯ್ಯಲು ಯೋಜನೆ ಹಾಕಿಕೊಂಡಿದೆ.
ಪ್ರತಿ ಪಂದ್ಯದ ನಂತರ ಉಭಯ ತಂಡದ ನಾಯಕರು ಒಟ್ಟುಗೂಡಿ ಸುದ್ದಿಗೋಷ್ಠಿ ನಡೆಸುವುದು ಎಲ್ಲರಿಗೂ ಗೊತ್ತೇ ಇದೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಕೂಡಾ ತಂಡದ ನಾಯಕರಿಗ ಪ್ರಶ್ನೆಗಳ ಬಾಣ ಎಸೆಯಬಹುದಾಗಿದೆ. ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಟೀಂ ನಾಯಕರು ಅಭಿಮಾನಿಗಳ ದೂಸ್ರಾವನ್ನು ಎದುರಿಸಬೇಕಾಗುತ್ತದೆ.
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ಫೆ.14 ರಿಂದ ಮಾ.29ರ ತನಕ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಮೊದಲ ಪಂದ್ಯದಿಂದ ಕೊನೆ ಪಂದ್ಯದ ತನಕ ಅಭಿಮಾನಿಗಳಿಗೆ ಈ ಸೌಲಭ್ಯ ಸಿಗಲಿದೆ.

ಪ್ರಶ್ನೆ ಕೇಳುವುದು ಹೇಗೆ?: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ @iCC ಐಡಿ ಫಾಲೋ ಮಾಡಿ ನಂತರ ಪಂದ್ಯದ ದಿನ #AskTheCaptain ಎಂದು ಹ್ಯಾಶ್ ಟ್ಯಾಗ್ ಹಾಕಿ ನಿಮ್ಮ ಪ್ರಶ್ನೆಯನ್ನು ಕೇಳಬಹುದು.
ನಿಮ್ಮ ಪ್ರಶ್ನೆ ಆಯ್ಕೆಯಾದರೆ ಅದನ್ನು ಪಂದ್ಯದ ನಂತರ ನಡೆಯುವ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗುತ್ತದೆ. ಜೊತೆಗೆ ಪಂದ್ಯದ ವೇಳೆ ಕೂಡಾ ವಿಶ್ವದೆಲ್ಲೆಡೆ ಸ್ಟಾರ್ ಸ್ಪೋರ್ಟ್ ಚಾನೆಲ್ ನಲ್ಲಿ ನೀವು ಕೇಳಿದ ಪ್ರಶ್ನೆಯನ್ನು ಕಾಮೆಂಟೆಂಟರ್ಸ್ ಉಲ್ಲೇಖಿಸುತ್ತಾರೆ. ವಿಶ್ವಕಪ್ ನ 49 ಪಂದ್ಯಗಳಿಗೂ ಈ ಸೌಲಭ್ಯ ಲಭ್ಯವಿರುತ್ತದೆ ಎಂದು ಐಸಿಸಿ ಪ್ರಕಟಿಸಿದೆ.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications