Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸೀಸ್ ಸರಣಿಯಲ್ಲೇ ಎಬಿಡಿ ದಾಖಲೆ ಮುರಿಯುವರೇ ಕೊಹ್ಲಿ?

ಪರ್ತ್, ಜ. 11: ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿ ವಿಲಿಯರ್ಸ್ ಅವರ ದಾಖಲೆಯನ್ನು ಮುರಿಯುವ ಸುವರ್ಣಾವಕಾಶವನ್ನು ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮಂಗಳವಾರದಿಂದ ಆರಂಭಗೊಳ್ಳಲಿರುವ 5 ಏಕದಿನ ಪಂದ್ಯಗಳ ಸರಣಿಯಲ್ಲಿ ಈ ಸಾಧನೆ ಮಾಡಬಹುದಾಗಿದೆ.

[ಆಸ್ಟ್ರೇಲಿಯಾ vs ಟೀಂ ಇಂಡಿಯಾ ಸರಣಿ ವೇಳಾಪಟ್ಟಿ]

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ಮಂಗಳವಾರ (ಜನವರಿ 12) ಪರ್ತ್ ನ ವಾಕಾ ಮೈದಾನದಲ್ಲಿ ನಡೆಯಲಿದೆ. ಕೊಹ್ಲಿ ಅವರು ಈ ಪಂದ್ಯದಲ್ಲಿ ತ್ವರಿತವಾಗಿ 7,000 ಏಕದಿನ ರನ್ ಗಳಿಕೆ ಮಾಡುವ ಮೂಲಕ ಎಬಿಡಿ ಅವರ ದಾಖಲೆ ಮುರಿಯಬಹುದಾಗಿದೆ.

Chance for Virat Kohli to break AB de Villiers' record in Australia

166 ಇನ್ನಿಂಗ್ಸ್ ನಲ್ಲಿ ಡಿ ವಿಲಿಯರ್ಸ್ ಅವರು 7,000ರನ್ ಗಳಿಸಿದ್ದಾರೆ. ಕೊಹ್ಲಿ ಅವರು 158 ಇನ್ನಿಂಗ್ಸ್ (166 ಪಂದ್ಯಗಳು)ನಲ್ಲಿ 6,831 ರನ್ ಗಳಿಸಿದ್ದಾರೆ. ವಿಶೇಷವೆಂದರೆ ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟ್ಸ್ ಮನ್ ಎಬಿಡಿ ಅವರು ಕೂಡಾ ಪರ್ತ್ ನಲ್ಲೇ ಈ ದಾಖಲೆಯನ್ನು ಆಸ್ಟ್ರೇಲಿಯಾ ವಿರುದ್ಧ 2014 ರ ನವೆಂಬರ್ ನಲ್ಲಿ ಸಾಧಿಸಿದ್ದರು.

27 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರು 169ರನ್ ಗಳನ್ನು ಗಳಿಸಿದರೆ 7,000ರನ್ ತ್ವರಿತವಾಗಿ ಗಳಿಸಿದ ಸಾದಹ್ನೆ ಮಾಡಬಹುದಾಗಿದೆ. ಇದಕ್ಕಾಗಿ ಅವರಿಗೆ 5 ಏಕದಿನ ಪಂದ್ಯಗಳಿವೆ.

ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಇಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಪರ ಆಡುತ್ತಾರೆ. ಈಗ ಎಬಿಡಿಯಂತೆ ಕೊಹ್ಲಿ ಕೂಡಾ ಆಸ್ಟ್ರೇಲಿಯಾ ನೆಲದಲ್ಲೇ ಈ ದಾಖಲೆ ಮುರಿಯುವ ಸಂಭವವೂ ಇದೆ.

ಟಾಪ್ 5 ಆಟಗಾರರು
* ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ) - 166 ಇನ್ನಿಂಗ್ಸ್ (172 ಪಂದ್ಯಗಳು)
* ಸೌರವ್ ಗಂಗೂಲಿ (ಭಾರತ) - 174 (160)
* ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)- 183 (187)
* ಡೆಸ್ಮಂಡ್ ಹೇಯ್ನ್ಸ್ (ವೆಸ್ಟ್ ಇಂಡೀಸ್) - 187 (188)
* ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) - 188 (197)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+