ಈ ಬಾರಿ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ, ವಿಜಯ್ ಹಝಾರೆ ನಡೆಯಲ್ಲ

ನವದೆಹಲಿ, ಆಗಸ್ಟ್ 9: ಈ ಸೀಸನ್‌ನಲ್ಲಿ ಬರೀ ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಮಾತ್ರ ಕಾಣ ಸಿಗಲಿದೆ. ಹಿರಿಯ ಆಟಗಾರರ ಮಟ್ಟದಲ್ಲಿ ನಡೆಯುವ ದೇಸಿ ಟೂರ್ನಿಗಳಲ್ಲಿ ಕೇವಲ ಇವೆರಡಷ್ಟೇ ನಡೆಯಲಿದೆ. ಕೊರೊನಾವೈರಸ್ ಕಾರಣ ಉಳಿದ ಪ್ರಮುಖ ದೇಸಿ ಟೂರ್ನಿಗಳು ನಡೆಯುತ್ತಿಲ್ಲ ಎನ್ನಲಾಗುತ್ತಿದೆ.
ಸಾಮಾನ್ಯವಾಗಿ ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ದೇಸೀ ಕ್ರಿಕೆಟ್ ಟೂರ್ನಿಗಳು ಆರಂಭವಾಗುತ್ತವೆ. ಆದರೆ ಈ ಬಾರಿ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾವೈರಸ್‌ನಿಂದಾಗಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ. ಹೀಗಾಗಿ ದೇಸೀ ಕ್ರಿಕೆಟ್ ಟೂರ್ನಿಗಳನ್ನು ನಡೆಸಲು ತೊಂದರೆಯಾಗಿದೆ.
ಎಂದಿನಂತೆ ಸೆಪ್ಟೆಂಬರ್‌ನಲ್ಲಿ ದೇಸೀ ಕ್ರಿಕೆಟ್ ಟೂರ್ನಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ, ಈ ಸೀಸನ್‌ನಲ್ಲಿ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳನ್ನು ಕೈ ಬಿಡಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ತಿಳಿದು ಬಂದಿರುವ ಮಾಹಿತಿಯ ಪ್ರಕಾರ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ, ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ರೂಪಿಸಿರುವಂತೆ, ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ ಅಂದರೆ ನವೆಂಬರ್ 19ರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಆರಂಭವಾಗಲಿದೆ. ಮುಷ್ತಾಕ್ ಅಲಿ ಟ್ರೋಫಿ ಡಿಸೆಂಬರ್ 7ರಂದು ಕೊನೆಗೊಂಡರೆ ಡಿಸೆಂಬರ್ 13ರಿಂದ ರಣಜಿ ಟ್ರೋಫಿ ಶುರುವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications