Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅರುಣಾಂಚಲ ವಿರುದ್ಧ 10ಕ್ಕೆ 10 ವಿಕೆಟ್‌ ಉರುಳಿಸಿದ ಚಂಡೀಗಢ ಆಟಗಾರ್ತಿ

Chandigarhs Kashvee Gautam takes all 10 wickets against Arunachal Pradesh

ಆಂಧ್ರಪ್ರದೇಶ, ಫೆಬ್ರವರಿ 26: ಆಂಧ್ರಪ್ರದೇಶದ ಕಡಪಾದಲ್ಲಿ ನಡೆಯುತ್ತಿರುವ ಮಹಿಳಾ ಅಂಡರ್ 19 ಒನ್ ಡೇ ಟ್ರೋಫಿ ಟೂರ್ನಿಯಲ್ಲಿ ಚಂಡೀಗಢದ ಆಟಗಾರ್ತಿ ಕೇಶವೀ ಗೌತಮ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅರುಣಾಂಚಲ ವಿರುದ್ಧದ ಪಂದ್ಯದಲ್ಲಿ ಕೇಶವೀ ಎದುರಾಳಿ ತಂಡದ ಹತ್ತೂ ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದಾರೆ.

ಮಂಗಳವಾರ (ಫೆಬ್ರವರಿ 25) ನಡೆದ ಪಂದ್ಯದಲ್ಲಿ ಅರುಣಾಂಚಲ ಮತ್ತು ಚಂಡೀಗಢ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಮಧ್ಯಮ ವೇಗಿ ಕೇಶವೀ, ಅರುಣಾಂಚಲದ ಎಲ್ಲಾ ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ. ಇದಕ್ಕೂ ಹಿಂದಿನ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧವೂ ಕೇಶವೀ 7 ವಿಕೆಟ್‌ ಮುರಿದು ಹುಬ್ಬೇರಿಸುವಂತೆ ಮಾಡಿದ್ದರು.

ಈಗಿನ್ನೂ 16ರ ಹರೆಯದವರಾಗಿರುವ ಕೇಶವೀ, ಚಂಡೀಗಢ 26ರ ವಲಯದಲ್ಲಿರುವ ಗೌರ್ನಮೆಂಟ್ ಸೀನಿಯರ್ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿನಿ. ಈಕೆಗೆ ತನ್ನ ಮಹಿಳಾ ಸಹ ಆಟಗಾರ್ತಿಯರಿಗೆ ಚೆಂಡೆಸೆಯೋದು ಅಷ್ಟು ಖುಷಿಕೊಡೋಲ್ಲವಂತೆ. ಆದರೆ ಹುಡುಗರಿಗೆ ಬೌಲಿಂಗ್‌ ಮಾಡಿ ವಿಕೆಟ್ ಪಡೆದಾಗ ಈಕೆಗೆ ಹೆಚ್ಚು ಖುಷಿಯಂತೆ.

ಅಂದ್ಹಾಗೆ ಇದೇ ಪಂದ್ಯದಲ್ಲಿ ಕೇಶವೀ ಗೌತಮ್ ಹ್ಯಾಟ್ರಿಕ್ ವಿಕೆಟ್‌ ಸಾಧನೆ ಕೂಡ ಮೆರೆದಿದ್ದಾರೆ. ಫೆಬ್ರವರಿ 25ರಂದು ಮೊದಲು ಬ್ಯಾಟಿಂಗ್ ಮಾಡಿದ್ದ ಚಂಡೀಗಢ ತಂಡ 186 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಅರುಣಾಂಚಲ ಪ್ರದೇಶ ತಂಡ, ಕೇವಲ 25 ರನ್ನಿಗೆ ಸರ್ವಪತನ ಕಂಡು 161 ರನ್‌ನಿಂದ ಸೋತಿತು.

Story first published: Wednesday, February 26, 2020, 11:06 [IST]
Other articles published on Feb 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+