Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ ಜೀವನ ಸಾಧನೆಯ ಪುಸ್ತಕ ಲೋಕಾರ್ಪಣೆ

ದೇಶೀಯ ಕ್ರಿಕೆಟ್‌ ಸಂಬಂಧಿತ ಯಾವುದೇ ಅಂಕಿ ಅಂಶಗಳು ಬೇಕಾದಲ್ಲಿ, ಥಟನ್ನೆ ನೆನಪಾಗುವ ಹೆಸರು ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ. ಇವರನ್ನು ಸಂಪರ್ಕಿಸಿದರೆ ಆ ಆಟಗಾರ ಸಂಪೂರ್ಣ ದೇಶೀಯ ಜಾಲವನ್ನೇ ನಿಮ್ಮ ಕೈಗೆ ನೀಡುವಷ್ಟು ಅಪಾರ ಅಂಕಿ ಅಂಶಗಳ ಸಂಪತ್ತು ಇವರ ಬಳಿ ಇದೆ. ಚನ್ನಗಿರಿ ಕೇಶವಮೂರ್ತಿ ವೃತ್ತಿಯ ಜೊತೆ ಜೊತೆಗೆ ಬೆಳಸಿಕೊಂಡಿರುವ ಕ್ರಿಕೆಟ್ ಹವ್ಯಾಸ ನಿಜಕ್ಕೂ ಆದರ್ಶನೀಯ. ಚನ್ನಗಿರಿ ಕೇಶವಮೂರ್ತಿ ತಮ್ಮ ಸಾಹಿತ್ಯದಿಂದಲೂ ಹೆಸರುವಾಸಿ. ಈಗಚನ್ನಗಿರಿ ಕೇಶವಮೂರ್ತಿ ಅವರ ಜೀವನ ಸಾಧನೆಯ 'ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು' ಯಶೋಗಾಥೆ ಪುಸ್ತಕ ಲೋಕಾರ್ಪಣೆಗೊಂಡಿದೆ.

ದಿಗ್ಗಜ ಸ್ಪಿನ್ ಮಾಂತ್ರಿಕ ಬಿ.ಎಸ್. ಚಂದ್ರಶೇಖರ್ ಅವರ ಸ್ವಗೃಹದಲ್ಲಿ ಭಾನುವಾರ ಪುಸ್ತಕ ಬಿಡುಗಡೆ ಮಾಡಲಾಗಿದೆ. 85ರ ಇಳಿವಯಸ್ಸಿನಲ್ಲೂ ಚನ್ನಗಿರಿ ಕೇಶವಮೂರ್ತಿ ಅವರು ಇವತ್ತಿಗೂ ಕ್ರಿಕೆಟ್ ಅಂಕಿ ಅಂಶ ದಾಖಲು ಮಾಡುತ್ತಿರುವುದು ಅಪರೂಪ ಎಂದು ಚಂದ್ರಶೇಖರ್ ದಂಪತಿಗಳು ಶುಭ ಹಾರೈಸಿದರು.

Channagiri Kesavamurthy s Success Story Book Launched at B S Chandrasekhar s Residence

ಈ ವೇಳೆ ಮಾತನಾಡಿದ ಚಂದ್ರಶೇಖರ್‌ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಚನ್ನಗಿರಿ ಕೇಶವಮೂರ್ತಿ ಅವರ ಸಾಹಿತ್ಯ ಮತ್ತು ಕ್ರಿಕೆಟ್ ಸೇವೆ ಮಾದರಿ, ಅವರೊಬ್ಬ ಶ್ರೇಷ್ಠ ಕ್ರಿಕೆಟ್ ಅಂಕಿ ಅಂಶ ತಜ್ಞರಾಗಿರುವುದು ನಮ್ಮ ಕರ್ನಾಟಕದ ಹೆಮ್ಮೆ. 'ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು' ಪುಸ್ತಕ ಸಾಹಿತ್ಯ ಹಾಗೂ ಕ್ರಿಕೆಟ್ ಆಸಕ್ತರಿಗೆ ಮಾರ್ಗದರ್ಶಿಯಾಗಿದೆ ಎಂದು ಅವರು ತಿಳಿಸಿದರು.

ಪತ್ತೇದಾರಿ ಕಾದಂಬರಿಗಳನ್ನೂ ಬರೆದಿರುವ ಕೇಶವಮೂರ್ತಿ ಅವರು ಕ್ರಿಕೆಟ್ ಕುರಿತು ಪುಸ್ತಕಗಳ ರಚನೆ ಮಾಡಿರುವುದು ಕ್ರೀಡಾ ಸಾಹಿತ್ಯಕ್ಕೆ ಅನನ್ಯ ಕೊಡುಗೆಗಳಾಗಿವೆ ಎಂದು ಸಂಧ್ಯಾ ಚಂದ್ರಶೇಖರ್ ಹೇಳಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಸಂಪಾದಕ ಕಗ್ಗೆರೆ ಪ್ರಕಾಶ್, ಸಿಕೆಎಂ ಮಗ ಸಂಜಯ್ ಚನ್ನಗಿರಿ, ಮಗಳು ಸವಿತಾ ಉಪಸ್ಥಿತರಿದ್ದರು.

Story first published: Monday, February 3, 2025, 13:14 [IST]
Other articles published on Feb 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+