For Quick Alerts
ALLOW NOTIFICATIONS  
For Daily Alerts
 

ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾಗೆ ಮತ್ತೊಂದು ಆಘಾತ

Channel 7 Threatens To Terminate Contract With Cricket Australia

ಕೊರೊನಾ ವೈರಸ್‌ನ ಕಾರಣದಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಅತಿ ಹೆಚ್ಚಿನ ಆರ್ಥಿಕ ಸಮಸ್ಯೆಗೆ ಒಳಗಾಗಿತ್ತು. ಈ ಸ್ಥಿತಿಯಿಂದ ಹೊರ ಬರುವ ಮುನ್ನವೇ ಕ್ರಿಕೆಟ್ ಆಸ್ಟ್ರೇಲಿಯಾಗೆ ಮತ್ತೊಂದು ಆಘಾತದ ಸುದ್ದಿಯೊಂದು ಬಂದಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಸಾರದ ಹಕ್ಕನ್ನು ಪಡೆದುಕೊಂಡಿರುವ ಚಾನೆಲ್ 7 ವಾಹಿನಿ ತನ್ನ ಒಪ್ಪಂದವನ್ನು ಅಂತ್ಯಗೊಳಿಸುವ ಬೆದರಿಕೆಯೊಡ್ಡಿದೆ.

ದೇಶಿಯ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್‌ಅನ್ನು ಕ್ರಿಕೆಟ್ ಆಸ್ಟ್ರೇಲಿಯಾ ತೀರಾ ಕಳಪೆಯಾಗಿ ನಿರ್ವಹಿಸುತ್ತಿದೆ ಎಂದು ಚಾನೆಲ್ 7 ಆರೋಪವನ್ನು ಮಾಡಿದೆ. ಇದೇ ಕಾರಣವನ್ನು ಮುಂದಿಟ್ಟು 450 ಮಿಲಿಯನ್ ಅಮೆರಿಕನ್ ಡಾಲರ್‌ಗಳ ಒಪ್ಪಂದನ್ನು ರದ್ದುಗೊಳಿಸುವ ಬೆದರಿಕೆಯನ್ನು ಹಾಕಿದೆ.

2018ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆಗೆ 450 ಮಿಲಿಯನ್ ಅಮೆರಿಕನ್ ಡಾಲರ್‌ಗಳ ಒಪ್ಪಂದವನ್ನು ಆರು ವರ್ಷಗಳ ಅವಧಿಗೆ ಚಾನೆಲ್ 7 ಮಾಡಿಕೊಂಡಿತ್ತು. ಆದರೆ ಕೊರೊನಾ ವೈರಸ್ ಕ್ರಿಕೆಟ್ ವೇಳಾಪಟ್ಟಿಯನ್ನು ನುಂಗಿ ಹಾಕಿದೆ. ಇದರ ಹೊರತಾಗಿಯೂ ಮುಂಬರುವ ಟೂರ್ನಿಗಳ ಗುಣಮಟ್ಟದ ಬಗ್ಗೆ ಚಾನೆಲ್ 7 ಆತಂಕವನ್ನು ವ್ಯಕ್ತಪಡಿಸಿದೆ. ಪ್ರಮುಖವಾಗಿ ಗ್ಲ್ಯಾಮರ್ ಟೂರ್ನಿ ಎನಿಸಿರುವ ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಪ್ರಯಾಣದ ಮಿತಿಗಳಿರುವ ಕಾರಣ ಅಂತಾರಾಷ್ಟ್ರೀಯ ಆಟಗಾರರ ಅಲಭ್ಯರಾಗುವ ಸಾಧ್ಯತೆಯಿಂದಾಗಿ ವಾಹಿನಿ ತಲೆ ಕೆಡಿಸಿಕೊಂಡಿದೆ.

ಈ ವರ್ಷಾಂತ್ಯಕ್ಕೆ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಭಾರತದ ಜೊತೆಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ, ಅಪ್ಫಾನಿಸ್ತಾನದ ಜೊತೆಗೆ ಒಂದು ಟೆಸ್ಟ್ ಪಂದ್ಯ ಪುರುಷರ ಹಾಗೂ ಮಹಿಳೆಯರ ಬಿಗ್‌ಬ್ಯಾಷ್ ಟೂರ್ನಿಯನ್ನು ನಿರ್ಧಾರ ಮಾಡಿಕೊಂಡಿದೆ. ಆದರೆ ಈಗಿನ ನಿರ್ಭಂದಗಳು ತೆರವಾಗದಿದ್ದರೆ ಈ ಯೋಜನೆಗಳು ತಲೆಕೆಳಗಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Story first published: Friday, August 28, 2020, 21:30 [IST]
Other articles published on Aug 28, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+