IPL Auction: RCB ಕೈ ಬಿಟ್ಟ ಆಟಗಾರರಿಗೆ ಗಾಳ ಹಾಕಲು CSK ಪ್ಲ್ಯಾನ್
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ 2025ಕ್ಕೆ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೆ ಎಲ್ಲ ತಂಡಗಳು ಈಗಾಗಲೇ ಭರದ ತಯಾರಿ ನಡೆಸಿವೆ. ತಂಡಗಳು ಹರಾಜಿನಲ್ಲಿ ಯಾವ ಪ್ಲೇಯರ್ ಟಾರ್ಗೆಟ್ ಮಾಡಬೇಕು ಎಂಬ ರಣ ತಂತ್ರವನ್ನು ರೂಪಿಸಿಕೊಳ್ಳುತ್ತಿವೆ. ಬಲಾಢ್ಯ ತಂಡವನ್ನು ಕಟ್ಟಲು ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳು ಯೋಜನೆಯನ್ನು ಮಾಲೀಕರು ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಐದು ಬಾರಿ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಿಂದೆ ಬಿದ್ದಿಲ್ಲ. ಈ ಬಾರಿ ಚೆನ್ನೈ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಹರಾಜು ಅಂಗಳ ಪ್ರವೇಶಿಸಲಿದೆ.
ಈಗಾಗಲೇ ಎಲ್ಲ ತಂಡಗಳು ರಿಟೇನ್ಷನ್ ಲೀಸ್ಟ್ ಬಿಡುಗಡೆ ಮಾಡಿದ್ದು, ರಣ ತಂತ್ರವನ್ನು ಸಿದ್ಧಪಡಿಸಿಕೊಳ್ಳುತ್ತಿವೆ. ಇನ್ನು ಹಲವು ತಂಡಗಳು ಅಣಕು ಹರಾಜು ಪ್ರಕ್ರಿಯೆ ಆರಂಭಿಸಿವೆ. ಈ ಬಾರಿಯ ಹರಾಜಿನಲ್ಲಿ ಚೆನ್ನೈ, ಆರ್‌ಸಿಬಿ ಕೈ ಬಿಟ್ಟ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಹಾಗಿದ್ದರೆ ಆಟ ಆಟಗಾರರು ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.

ಆಲ್‌ರೌಂಡರ್ ಮ್ಯಾಕ್ಸ್‌ವೆಲ್
ಆರ್‌ಸಿಬಿ ತಂಡದಿಂದ ಕೈ ಬಿಡಲಾಗಿರುವ ಗ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಟಾರ್ಗೆಟ್ ಮಾಡಲಿದೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಕಳೆದ ಆವೃತ್ತಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಆಸೀಸ್ ಆಲ್‌ರೌಂಡರ್‌ನ್ನು ಆರ್‌ಸಿಬಿ ಹರಾಜು ಅಂಗಳಕ್ಕೆ ಬಿಟ್ಟಿದೆ. ಚುಟುಕು ಕ್ರಿಕೆಟ್‌ನ ಸ್ಫೋಟಕ ಆಟಗಾರರಲ್ಲಿ ಇವರಿಗೂ ಸ್ಥಾನ.
ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಪಂದ್ಯದ ಗತಿಯನ್ನೇ ಚೇಂಜ್ ಮಾಡಬಲ್ಲ ಪ್ಲೇಯರ್. ಇವರ ಆಕ್ರಮಣಕಾರಿ ಮನೋಭಾವ ಇವರತ್ತ ಮಾಲೀಕರು ನೋಡುವಂತೆ ಮಾಡುತ್ತಿದೆ. ಇವರ ಕ್ಷಮತೆಯನ್ನು ಗುರುತಿಸಿ ಚೆನ್ನೈ ಇವರಿಗೆ ಬಾಜಿ ಕಟ್ಟುವ ಸಾಧ್ಯತೆ ದಟ್ಟವಾಗಿದೆ. ಗ್ಲೇನ್ ಮಿಡ್ಲ್ ಆರ್ಡರ್ ಬ್ಯಾಟರ್ ಅಲ್ಲದೆ, ಮಿಡ್ಲ್ ಓವರ್‌ಗಳಲ್ಲಿ ಬೌಲ್ ಮಾಡಬಲ್ಲ ಪ್ಲೇಯರ್.

ವೇಗದ ಬೌಲಿಂಗ್ ವಿಭಾಗಕ್ಕೆ ಬಲ
ಟೀಮ್ ಇಂಡಿಯಾದ ಫಾಸ್ಟ್ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಆರ್‌ಸಿಬಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವರು ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು ಆರ್‌ಸಿಬಿ ಪರ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಮೊನಚಾದ ದಾಳಿ ಸಂಘಟಿಸಿದ್ದಾರೆ. ಇವರ ಸ್ವಿಂಗ್ ಹಾಗೂ ಪೇಸ್ ಸಿರಾಜ್ ಅವರತ್ತ ಮಾಲೀಕರು ನೋಡುವಂತೆ ಮಾಡಿದೆ. ಸಿರಾಜ್ ಸಿಎಸ್‌ಕೆ ತಂಡಕ್ಕೆ ಹೇಳಿ ಮಾಡಿಸಿದ ಆಟಗಾರ. ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಆಡುವ ಕಲೆಯನ್ನು ಇವರು ಹೊಂದಿದ್ದಾರೆ. ಚೆನ್ನೈ ಒಬ್ಬ ನುರಿತ ವೇಗದ ಬೌಲರ್ ನೋಡುತ್ತಿದ್ದು, ಈ ವೇಳೆ ಸಿರಾಜ್ ಬೆಸ್ಟ್ ಚಾಯ್ಸ್.
ಸ್ಟಾರ್ ಆರಂಭಿಕ ಆಟಗಾರ
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೇಸಿಸ್ ಅವರನ್ನು ಕೈ ಬಿಡಲಾಗಿದೆ. ಇವರು ಪವರ್ ಪ್ಲೇನಲ್ಲಿ ಪವರ್ ಫುಲ್ ಸ್ಟಾರ್ಟ್ ನೀಡುವಲ್ಲಿ ಹೆಸರು ವಾಸಿ. ಐಪಿಎಲ್‌ನ ಬೆಸ್ಟ್ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರು. ಈಗಾಗಲೇ ಚೆನ್ನೈ ತಂಡದ ಪರ ಆಡಿರುವ ಅನುಭವ ಹೊಂದಿರುವ ಫಾಫ್, ನಾಯಕತ್ವ ಗುಣಗಳನ್ನು ಹೊಂದಿದ್ದು, ಇವರ ಹೆಸರು ಹರಾಜು ಅಂಗಳದಲ್ಲಿ ಕೇಳಿಸುತ್ತಿದ್ದಂತೆ ಚೆನ್ನೈ ಬಾಜಿ ಕಟ್ಟಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications