Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK vs PBKS IPL 2024: ರವೀಂದ್ರ ಜಡೇಜಾ ಸ್ಪಿನ್‌ ಮೋಡಿಗೆ ಥಂಡಾ ಹೊಡೆದ ಪಂಜಾಬ್‌; ಸಿಎಸ್‌ಕೆಗೆ ಗೆಲುವು

ಭಾನುವಾರ ಮೇ 3, ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 53ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್‌) ಎದರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಭರ್ಜರಿ ಜಯ ಕಂಡಿದೆ.

ಚೆನ್ನೈ ಪರ ಬೆಂಕಿ ಬೌಲಿಂಗ್‌ ಮಾಡಿದ ರವೀಂದ್ರ ಜಡೇಜಾ ಪಂಜಾಬ್‌ ಗೆಲುವಿಗೆ ತಣ್ಣೀರು ಎರಚಿದರು. ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 139 ರನ್‌ ಗಳಿಸಿತು. ಈ ಮೂಲಕ ಚೆನ್ನೈ 28 ರನ್‌ಗಳಿಂದ ಗೆಲುವು ಸಾಧಿಸಿತು.

Chennai Super Kings win against Punjab Kings IPL 2024 Match Report

ಚೆನ್ನೈ ನೀಡಿ 168 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್‌ ಆರಂಭಿದಲ್ಲೇ ಜಾನಿ ಬೈರ್‌ಸ್ಟೋವ್ (7) ಮತ್ತು ರಿಲೀ ರೊಸೊವ್ (೦) ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಈ ವೇಳೆ ಆರಂಭಿಕ ಪ್ರಭಾಸಿಮ್ರಾನ್ ಸಿಂಗ್ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬಂದ ಶಶಾಂಕ್ ಸಿಂಗ್ ನಿಧಾನವಾಗಿ ರನ್‌ ಕಲೆ ಹಾಕಿದರು.

ಉತ್ತಮವಾಗಿ ಆಡುತ್ತಿದ್ದ ಶಶಾಂಕ್‌ ಸಿಂಗ್‌ 27 ರನ್‌ಗಳಿಗೆ ಔಟ್‌ ಆದರು. ಬಳಿಕ ಪ್ರಭಾಸಿಮ್ರಾನ್ ಸಿಂಗ್ ಕೂಡ ವಿಕೆಟ್‌ ಕಳೆದುಕೊಂಡರು. ನಂತರ ಕ್ರೀಸ್‌ಗೆ ಬಂದ ಯಾವುದೇ ಪಂಜಾಬ್‌ ಆಟಗಾರರು ತಂಡಕ್ಕೆ ಆಸರೆಯಾಗಲಿಲ್ಲ.

ಸ್ಯಾಮ್ ಕರ್ರಾನ್(7), ಜಿತೇಶ್ ಶರ್ಮಾ(0), ಅಶುತೋಷ್ ಶರ್ಮಾ (3) ಹರ್ಷಲ್ ಪಟೇಲ್ (12) ರಾಹುಲ್ ಚಾಹರ್ (16) ಔಟ್‌ ಆಗುವ ಮೂಲಕ ಪೆವಿಲಿಯನ್‌ ಪರೇಡ್‌‌ ನಡೆಸಿದರು. ಕೊನೆಯಲ್ಲಿ ಪಂಜಾಬ್‌ ಗೆಲುವಿಗೆ ಹೋರಾಟ ನಡೆಸಿದ ಹರ್‌ಪ್ರೀತ್ ಬ್ರಾರ್ ಅಜೇಯ 16 ರನ್‌ ಗಳಿಸದರೆ, ಕಗಿಸೊ ರಬಾಡ 11 ರನ್‌ ಬಾರಿಸಿದರು. ಈ ಮೂಲಕ ಗುರಿ ತಲುವಲ್ಲಿ ಪಂಜಾಬ್‌ ವಿಫಲವಾಗಿ ಸೋಲಿಗೆ ಶರಣಾಯಿತು.

ಚೆನ್ನೈ ಬೌಲಿಂಗ್‌ ಪರಕ್ರಮ :

ಚೆನ್ನೈ ತಂಡದ ಪರ ಸಂಘಟಿತ ಬೌಲಿಂಗ್‌ ಪ್ರದರ್ಶನ ಕಂಡು ಬಂತು. ರವೀಂದ್ರ ಜಡೇಜಾ 3 ವಿಕೆಟ್‌ ಕಬಳಿಸಿದರೆ, ಸಿಮರ್ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ 2 ವಿಕೆಟ್‌ ಪಡೆದುಕೊಂಡರು. ಇನ್ನು ಮಿಚೆಲ್ ಸ್ಯಾಂಟ್ನರ್ ಹಾಗು ಶಾರ್ದೂಲ್ ಠಾಕೂರ್ 1 ವಿಕೆಟ್‌ ಪಡೆದು ಚೆನ್ನೈ ಗೆಲುವಿನಲ್ಲಿ ಶ್ರಮವಹಿಸಿದರು.

Story first published: Sunday, May 5, 2024, 19:12 [IST]
Other articles published on May 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+