Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿ, ರಾಯುಡು ಆಟಕ್ಕೆ ತಲೆಬಾಗಿದ ಆರ್‌ಸಿಬಿ, ಚೆನ್ನೈಗೆ ಭರ್ಜರಿ ಜಯ

chennai-super-kings-won-against-rcb

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗುತ್ತಿದ್ದ ಗೆಲುವನ್ನು ಮಹೇಂದ್ರ ಸಿಂಗ್ ಧೋನಿ ವಾಪಾಸ್ ಎಳೆದು ತಂದರು. ಅವರಿಗೆ ಅಂಬಾಟಿ ರಾಯುಡು ಅತ್ಯುತ್ತಮ ಸಾಥ್ ನೀಡಿದರು.

ಗೆಲ್ಲಲು 206 ರನ್‌ಗಳ ಭಾರಿ ಮೊತ್ತದ ಗುರಿ ನೀಡಿದ್ದ ಆರ್‌ಸಿಬಿ ಆರಂಭದಲ್ಲಿ ಚೆನ್ನೈ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಎಲ್ಲಾ ಲಕ್ಷಣಗಳನ್ನೂ ತೋರಿತ್ತು. ಆದರೆ ಅಂಬಾಟಿ ರಾಯುಡು ಮತ್ತು ಮಹೇಂದ್ರ ಸಿಂಗ್ ಧೋನಿ ಆರ್‌ಸಿಬಿಯ ಎಲ್ಲ ಲೆಕ್ಕಾಚಾರವನ್ನೂ ತಲೆಕೆಳಗು ಮಾಡಿದರು.

ಒಂದು ಹಂತದಲ್ಲಿ 74 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈ ಪಂದ್ಯಕ್ಕೆ ಮರಳಿ ಬಂದ ರೀತಿ ಚೇತೋಹಾರಿಯಾಗಿತ್ತು. ಅಂಬಾಟಿ ರಾಯುಡು ಮತ್ತು ಕೆಳ ಮಧ್ಯಮದಲ್ಲಿ ಬ್ಯಾಟಿಂಗ್ ಮಾಡಿದ ಧೋನಿ ಮತ್ತು ಬ್ರಾವೊ ಚೆನ್ನೈ ಅನ್ನು ಗೆಲುವಿನ ದಡ ತಲುಪಿಸಿದರು.

ಒತ್ತಡದಲ್ಲಿಯೂ ಅತ್ಯದ್ಭುತ ಬ್ಯಾಟಿಂಗ್ ನಡೆಸಿದ 53 ಎಸೆತಕ್ಕೆ 82 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್‌ಗಳಿದ್ದವು. ಗೆಲುವಿನ ಹತ್ತರಿಕ್ಕೆ ಬಂದಿದ್ದಾಗ ರನ್‌ಔಟ್ ಆಗಿ ನಿರಾಶೆ ಹೊಂದಿದರು. ಆದರೆ ಮತ್ತೊಂದು ತುದಿಯಲ್ಲಿದ್ದ ಮಿಸ್ಟರ್ ಕೂಲ್ ಧೋನಿ ತಾವೇಕೆ ವಿಶ್ವದ ಅತ್ಯುತ್ತಮ ಗೇಮ್ ಫಿನಿಶರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಏಳು ಚೆಂಡಿಗೆ 21 ರನ್ ಬೇಕಿದ್ದ ಪಂದ್ಯವನ್ನು ಇನ್ನೂ ಎರಡು ಚೆಂಡು ಉಳಿಸಿ ಗೆದ್ದರು ಚೆನ್ನೈ. ಧೋನಿ 34 ಎಸೆತಕ್ಕೆ 74 ರನ್ ಭಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಇದ್ದಿದ್ದು 7 ಸಿಕ್ಸರ್‌.

ಪಂದ್ಯದ ಸ್ಕೋರ್ ಕಾರ್ಡ್

ಆರ್‌ಸಿಬಿ ಪರ ಡಿವಿಲಿಯರ್ಸ್‌ 68 ರನ್ ಗಳಿಸಿ ಮಿಂಚಿದರು. ಬೌಲಿಂಗ್‌ನಲ್ಲಿ ಉಮೇಶ್ ಯಾದವ್ ಮತ್ತು ಚಾಹಲ್ ಅತ್ಯುತ್ತಮ ಬೌಲಿಂಗ್ ಮಾಡಿದರು ಆದರೆ ಎಲ್ಲಾ ಶ್ರೇಯ ಸೇರಬೇಕಾದದ್ದು ಅಂಬಾಟಿ ರಾಯುಡು ಮತ್ತು ಮಹೇಂದ್ರ ಸಿಂಗ್ ಧೋನಿಗೆ.

Story first published: Thursday, April 26, 2018, 0:10 [IST]
Other articles published on Apr 26, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+