For Quick Alerts
ALLOW NOTIFICATIONS  
For Daily Alerts
 

ಬಹುಅಂಗಾಂಗ ವೈಫಲ್ಯದಿಂದ ಭಾರತದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ವಿಧಿವಶ

Chetan Chauhan, Former India Opener Passes Away At 73

ಭಾರತದ ಮಾಜಿ ಆಟಗಾರ ಚೇತನ್ ಚೌಹಾಣ್ ವಿಧಿವಶರಾಗಿದ್ದಾರೆ. ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದ ಚೌಹಾಣ್ ಅವರು ಬಹು ಅಂಗಾಂಗ ವೈಫಲ್ಯಕ್ಕೆ ಈಡಾಗಿದ್ದರು. ನಿನ್ನೆ ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಉಂಟಾಗಿತ್ತು. ಗುರುಗ್ರಾಮದ ವೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

ಕಳೆದ ಜುಲೈ ತಿಂಗಳ 12ರಂದು ಚೇತನ್ ಚೌಹಾಣ್‌ಗೆ ಕೋವಿಡ್-19 ತಗುಲಿತ್ತು. ಅವರನ್ನು ಲಕ್ನೋದಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಾಣದಿದ್ದ ಕಾರಣ ಚೌಹಾಣ್ ಅವರನ್ನು ವೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಕೊರೊನಾ ಸೋಂಕಿನಿಂದ ಚೌಹಾಣ್ ಸುಧಾರಿಸುವುದರಲ್ಲಿದ್ದಾಗಲೇ ಅವರಿಗೆ ಕಿಡ್ನಿ ವೈಫಲ್ಯ ಉಂಟಾಗಿತ್ತು. ಜೊತೆ ಜೊತೆಗೆ ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದರು ಚೇತನ್ ಚೌಹಾಣ್. ಹೀಗಾಗಿ ಅವರಿಗೆ ವೆಂಟಿಲೇಟರ್‌ ಸಹಾಯದ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು.

72ರ ಹರೆಯದ ಚೌಹಾಣ್ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಎರಡು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಉತ್ತರ ಪ್ರದೇಶ ಸರ್ಕಾರದಲ್ಲಿ ಮಂತ್ರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಕ್ರಿಕೆಟ್‌ನಲ್ಲಿ ಆಟಗಾರ ಮಾತ್ರವಲ್ಲದೆ ತಂಡದ ಮ್ಯಾನೇಜರ್ ಆಗಿಯೂ ಚೌಹಾಣ್ ಕರ್ತವ್ಯ ನಿರ್ವಹಿಸಿದ್ದರು.

ಭಾರತದ ಪರವಾಗಿ 1969ರಿಂದ 1978ರ ವರೆಗೆ ಆಡಿದ್ದ ಚೌಹಾಣ್, 40 ಟೆಸ್ಟ್ ಪಂದ್ಯಗಳಲ್ಲಿ 31.57ರ ಸರಾಸರಿಯಂತೆ 2084 ರನ್ ಗಳಿಸಿದ್ದಾರೆ. 7 ಏಕದಿನ ಪಂದ್ಯಗಳನ್ನೂ ಆಡಿರುವ ಚೌಹಾಣ್ 153 ರನ್ ಗಳಿಸಿದ್ದಾರೆ. ಸುನಿಲ್ ಗವಾಸ್ಕರ್ ಜೊತೆಗೆ ಸುದೀರ್ಘ ಕಾಲ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು ಚೇತನ್ ಚೌಹಾಣ್

Story first published: Monday, August 17, 2020, 9:56 [IST]
Other articles published on Aug 17, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+