'ನಾನಾಗ ಅಚ್ಚರಿಗೊಂಡಿದ್ದೆ': ಐಪಿಎಲ್ ವೇಳೆಯ ಕ್ಷಣ ನೆನೆದ ಸಕಾರಿಯಾ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಹೊಸ ಯುವ ಪ್ರತಿಭೆಗಳು ಮಿನುಗೋದು ನೋಡುತ್ತಲೇ ಇರುತ್ತೇವೆ. ಈ ಐಪಿಎಲ್ ಸೀಸನ್‌ನಲ್ಲೂ ರಾಜಸ್ಥಾನ್ ರಾಯಲ್ಸ್ ಚೇತನ್ ಸಕಾರಿಯಾ ಗಮನ ಸೆಳೆದಿದ್ದರು. ಆರ್‌ಆರ್ ಬೌಲಿಂಗ್ ವಿಭಾಗದಲ್ಲಿ ಸಕಾರಿಯ ಮಿಂಚಿದ್ದರು.
ಈಗ 2021 ಐಪಿಎಲ್ ಅಮಾನತಾಗಿದೆ. ಬಯೋಬಬಲ್ ಒಳಗೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಾ ಸಾಗಿದ್ದರಿಂದ ಅಂತಿಮವಾಗಿ ನಗದು ಶ್ರೀಮಂತ ಟಿ20 ಟೂರ್ನಿಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಂದಿತ್ತು.
ಇನ್ನು 2021ರ ಸೀಸನ್ ನಡೆಯುತ್ತೋ ಇಲ್ಲವೋ ಅನ್ನೋದಕ್ಕೆ ಖಾತರಿಯಿಲ್ಲ. ಆದರೆ ನಡೆದ 29 ಪಂದ್ಯಗಳ ಕ್ಷಣಗಳನ್ನು ನಾವು ಮೆಲುಕು ಹಾಕೋದಕ್ಕೆ ಅಡ್ಡಿಯಿಲ್ಲ. ರಾಜಸ್ಥಾನ್ ರಾಯಲ್ಸ್‌ನ ಚೇತನ್ ಸಕಾರಿಯಾ ಐಪಿಎಲ್ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ. ತಾನು ಪಡೆದ ವಿಕೆಟ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಯ ವಿಕೆಟ್ ತನಗೆ ಫೇವರಿಟ್ ವಿಕೆಟ್ ಎಂದು ಸಕಾರಿಯಾ ಹೇಳಿದ್ದಾರೆ.
'ಮಾಹಿ ಭಾಯಿಯ ವಿಕೆಟ್ ನನ್ನ ಪಾಲಿಗೆ ಫೇವರಿಟ್ ವಿಕೆಟ್. ಧೋನಿ ವಿಕೆಟ್ ಸಿಕ್ಕಾಗ ನಾನು ಅಚ್ಚರಿ ಮತ್ತು ಹರ್ಷಗೊಂಡಿದ್ದೆ. ಆ ಕ್ಷಣಕ್ಕೆ ಅದು ನನ್ನ ಪಾಲಿಗೆ ವಾಸ್ತವ ಅನ್ನಿಸಿರಲಿಲ್ಲ. ನೀವು ಆ ವಿಡಿಯೋ ಗಮನಿಸಿದರೆ ನನ್ನ ಶಾಕ್ ಭಾವವನ್ನು ನೀವು ಗಮನಿಸಬಹುದು,' ಎಂದು ಸಕಾರಿಯಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications