ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮೆಲ್ಬರ್ನ್‌ನಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಟೀಮ್ ಇಂಡಿಯಾ ಸಹ ಈ ಸರಣಿಯಲ್ಲಿ ಮುನ್ನಡೆ ಸಾಧಿಸಲು ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ. ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಬೇಕಾದಲ್ಲಿ, ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಫಾರ್ಮ್‌ಗೆ ಮರಳುವುದು ಇಂಪಾರ್ಟೆಂಟ್.
ಟೀಮ್ ಇಂಡಿಯಾ ಪರ ಪ್ರಸಕ್ತ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್, ಆಸ್ಟ್ರೇಲಿಯಾದಲ್ಲಿ ಆಶಾ ಕಿರಣ ಮೂಡಿಸಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದರು. ಆದರೆ ಉಳಿದ ಎರಡು ಟೆಸ್ಟ್‌ಗಳಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಈಗ ಇವರ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗರ ಚೇತನ್ ಶರ್ಮಾ ಭವಿಷ್ಯ ನುಡಿದಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಫಾರ್ಮ್ ನಿರಾಶಾದಾಯಕವಾಗಿದೆ. ಇವರು ಈ ಸರಣಿಯಲ್ಲಿ ಆಡಿದ 5 ಇನಿಂಗ್ಸ್‌ಗಳಲ್ಲಿ 126 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕವೂ ಸೇರಿದೆ. ಇವರ ಫಾರ್ಮ್ ಸಾಮಾಜಿಕ ತಾಣದಲ್ಲಿ ದೊಡ್ಡ ಸುದ್ದಿಯಾಗಿದೆ. ಇವರ ಆಟದ ಬಗ್ಗೆ ಟೀಮ್ ಇಂಡಿಯಾ ಮಾಜಿ ಆಟಗಾರ ಚೇತನ್ ಶರ್ಮಾ ಭವಿಷ್ಯ ನುಡಿದಿದ್ದಾರೆ. ಸರಣಿಯ ಉಳಿದ ಎರಡೂ ಪಂದ್ಯಗಳಲ್ಲಿ ಇವರು ಶತಕ ಬಾರಿಸಲಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯವನ್ನು ಮೆಲ್ಬರ್ನ್‌ನಲ್ಲಿ, ಐದನೇ ಟೆಸ್ಟ್ ಪಂದ್ಯವನ್ನು ಸಿಡ್ನಿಯಲ್ಲಿ ಆಡಲಿದೆ.
ವಿರಾಟ್ ಕೊಹ್ಲಿ ಅವರ ವೀಕ್ನೆಸ್ ಎದುರಾಳಿಗಳು ಗುರುತು ಹಿಡಿದುಕೊಂಡಿದ್ದಾರೆ ಎಂಬಂತೆ ಆಗಿದೆ. ಇವರು ನಾಲ್ಕು ಹಾಗೂ ಐದನೇ ಸ್ಟಂಪ್ ಮೇಲಿರುವ ಚೆಂಡನ್ನು ಕೆಣಕುವುದು ವಿಕೆಟ್ ಕೀಪರ್ ಇಲ್ಲವೇ ಸ್ಲಿಪ್‌ನಲ್ಲಿ ಕ್ಯಾಚ್ ನೀಡುವುದು ಸಾಮಾನ್ಯ. ಇದೇ ದೃಷ್ಯಗಳು ಈ ಸರಣಿಯಲ್ಲೂ ಮುಂದುವರೆದಿವೆ. ಆದರೆ ಚೇತನ್ ಶರ್ಮಾ ಅವರು ಮುಂದಿನ ಎರಡೂ ಟೆಸ್ಟ್‌ಗಳಲ್ಲಿ ವಿರಾಟ್ ಅಬ್ಬರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಚೇತನ್ ಶರ್ಮಾ, ವಿರಾಟ್ ಭಾರತದ ಪರ ದೊಡ್ಡ ಸಾಧನೆ ಮಾಡಿದ ಆಟಗಾರ. ಹೀಗಾಗಿಯೇ ಇವರ ಮೇಲೆ ನಿರೀಕ್ಷೆಗಳ ಹೆಮ್ಮರವಿದೆ. ಇವರು ಮುಂದಿನ ಎರಡೂ ಪಂದ್ಯಗಳಲ್ಲಿ ಶತಕ ಬಾರಿಸುತ್ತಾರೆ ಎಂಬ ಭರವಸೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೂ ಮೊದಲು ಸರಣಿಯ ಆರಂಭಕ್ಕೂ ಮುನ್ನವೇ ಚೇತನ್ ಶರ್ಮಾ, ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮೂರು ಶತಕ ಬಾರಿಸಬಹುದು ಎಂದು ತಿಳಿಸಿದ್ದರು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೆ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ.