ಐರ್ಲೆಂಡ್ ಸರಣಿ ಮೇಲೆ ಬಿಸಿಸಿಐ ಆಯ್ಕೆಗಾರರ ಕಣ್ಣು; ಈ ಆಟಗಾರರಲ್ಲಿ ಯಾರಿಗೆ ಸಿಗಲಿದೆ ಟಿ20 ವಿಶ್ವಕಪ್ ಟಿಕೆಟ್?

ಸದ್ಯ ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸುತ್ತಿರುವ ಟೀಮ್ ಇಂಡಿಯಾದ ಕೆಲ ಆಟಗಾರರು ಈ ಸರಣಿ ಮುಕ್ತಾಯವಾದ ಬೆನ್ನಲ್ಲೇ ಜುಲೈ ತಿಂಗಳಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಿಗಾಗಿ ಇಂಗ್ಲೆಂಡ್‌ಗೆ ಹಾರಲಿದ್ದಾರೆ ಹಾಗೂ ಇದೇ ತಂಡದ ಇನ್ನುಳಿದ ಕೆಲ ಆಟಗಾರರು ತಿಂಗಳ ಅಂತ್ಯದಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸಲು ಐರ್ಲೆಂಡ್ ಪ್ರಯಾಣ ಬೆಳೆಸಲಿದ್ದಾರೆ.
ಹೌದು, ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವಿನ 2 ಪಂದ್ಯಗಳ ಟಿ ಟ್ವೆಂಟಿ ಸರಣಿ ಐರ್ಲೆಂಡ್‌ನ ಡಬ್ಲಿನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಸರಣಿಗಾಗಿ ಇತ್ತಂಡಗಳ ಸ್ಕ್ವಾಡ್ ಈಗಾಗಲೇ ಘೋಷಣೆಯಾಗಿದೆ. ಟೀಮ್ ಇಂಡಿಯಾ 17 ಆಟಗಾರರ ಭಾರತ ತಂಡವನ್ನು ಪ್ರಕಟಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ನೀಡಿದ್ದು, ಐರ್ಲೆಂಡ್ 14 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ.
ಇನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಮ್ ಇಂಡಿಯಾಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ತರಬೇತಿಯನ್ನು ನೀಡಿಲಿದ್ದರೆ, ಇವರ ಜತೆಗೆ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾದ ಚೇತನ್ ಶರ್ಮಾ ಸಹ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಈ ಮೂಲಕ ಐರ್ಲೆಂಡ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರತ್ತ ಚೇತನ್ ಶರ್ಮಾ ಕಣ್ಣಿಡಲಿದ್ದು, ಇದರಲ್ಲಿ ಅದ್ಭುತ ಪ್ರದರ್ಶನ ತೋರುವ ಆಟಗಾರರಿಗೆ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸುವುದು ಖಚಿತ.

ಐರ್ಲೆಂಡ್ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್.

ಈ ಆಟಗಾರರಿಗೆ ಆಯ್ಕೆಗಾರರ ಮನ ಗೆಲ್ಲಲು ಇದು ಸುವರ್ಣಾವಕಾಶ, ಯಾರಿಗೆ ಸಿಗಬಹುದು ಟಿಕೆಟ್?
ಇನ್ನು ಅನುಭವಿ ಆಟಗಾರರು ಇಂಗ್ಲೆಂಡ್ ಪ್ರವಾಸದಲ್ಲಿ ನಿರತರಾಗಿರುವ ಕಾರಣ ಯುವ ಆಟಗಾರರಿಗೆ ಮತ್ತು ಫಾರ್ಮ್ ಕಳೆದುಕೊಂಡಿರುವ ಕೆಲ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ಲಭಿಸಿದೆ. ಅದರಲ್ಲಿಯೂ ಪ್ರಮುಖವಾಗಿ ವಿಶ್ವಕಪ್ ತಂಡವನ್ನು ಪ್ರತಿನಿಧಿಸಬೇಕು ಎಂಬ ಛಲ ಹೊಂದಿರುವ ದಿನೇಶ್ ಕಾರ್ತಿಕ್, ಕಮ್ ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ, ಚಹಾಲ್ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ಇದು ಸುವರ್ಣಾವಕಾಶವಾಗಿದ್ದು, ಯುವ ಆಟಗಾರರಿಗೂ ಆಯ್ಕೆಗಾರರ ಮನ ಗೆಲ್ಲಲು ಇದು ಒಳ್ಳೆಯ ಅವಕಾಶ ಎನ್ನಬಹುದು. ಇನ್ನು ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ ಟ್ವೆಂಟಿ ವಿಶ್ವಕಪ್ ನಡೆಯುವುದರಿಂದ ಅಲ್ಲಿನ ನೆಲದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುವ ಸಾಮರ್ಥ್ಯವಿರುವ ಸಂಜು ಸ್ಯಾಮ್ಸನ್ ಮೇಲೂ ಕೂಡ ಚೇತನ್ ಶರ್ಮಾ ಕಣ್ಣಿಡಲಿದ್ದು, ಸಂಜು ಸ್ಯಾಮ್ಸನ್ ಆಯ್ಕೆಗಾರರ ಮನ ಗೆಲ್ಲಬೇಕಿದೆ. ಹೀಗೆ ಈ ತಂಡದಲ್ಲಿರುವ ಬಹುತೇಕರು ಸರಣಿಯಲ್ಲಿ ಮಿಂಚಿ ಆಯ್ಕೆಗಾರರ ಮನ ಗೆಲ್ಲಲು ಪ್ರಯತ್ನಿಸಲಿದ್ದು, ಯಾವ ಆಟಗಾರರಿಗೆ ಟಿ ಟ್ವೆಂಟಿ ವಿಶ್ವಕಪ್ ತಂಡ ಪ್ರತಿನಿಧಿಸುವ ಅವಕಾಶ ಲಭಿಸಲಿದೆಯೋ ಕಾದು ನೋಡಬೇಕಿದೆ.

ಐರ್ಲೆಂಡ್ ತಂಡ
ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಗರೆಥ್ ಡೆಲಾನಿ, ಪಾಲ್ ಸ್ಟಿರ್ಲಿಂಗ್, ಕರ್ಟಿಸ್ ಕ್ಯಾಂಫರ್, ಸ್ಟೀಫನ್ ಡೊಹೆನಿ, ಲೋರ್ಕನ್ ಟಕರ್, ಮಾರ್ಕ್ ಅಡೇರ್, ಜಾರ್ಜ್ ಡಾಕ್ರೆಲ್, ಜೋಶುವಾ ಲಿಟಲ್, ಆಂಡಿ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಕ್ರೇಗ್ ಯಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications