For Quick Alerts
ALLOW NOTIFICATIONS  
For Daily Alerts
 

Cheteshwar Pujara: ಕ್ರಿಕೆಟ್‌ಗೆ ವಿದಾಯ ಹೇಳಿದ ಟೆಸ್ಟ್‌ ಸ್ಪೆಷಲಿಸ್ಟ್‌ ಬ್ಯಾಟರ್‌

ಟೀಮ್ ಇಂಡಿಯಾದಲ್ಲಿ ರಾಹುಲ್‌ ದ್ರಾವಿಡ್‌ ಅವರನ್ನು ಟೆಸ್ಟ್‌ ಸ್ಪೆಷಲಿಸ್ಟ್‌ ಬ್ಯಾಟರ್‌ ಎಂದು ಕರೆಯಲಾಗುತ್ತಿತ್ತು. ಅಲ್ಲದೆ ಇವರಿಗೆ ಅಭಿಮಾನಿಗಳು ದಿ ವಾಲ್‌ ಎಂದು ಸಹ ಕರೆಯುತ್ತಾರೆ. ಇವರು ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದಾಗ, ಇವರ ಸ್ಥಾನ ತುಂಬುವುದು ಯಾರು ಎಂಬ ಪ್ರಶ್ನೆಗಳು ಎದ್ದಿದ್ದವು. ಆಗ ಎಲ್ಲರ ಮುಖ ಆಗಿನ ಯುವ ಆಟಗಾರ ಚೇತೇಶ್ವರ್ ಪೂಜಾರ್ ಅವರತ್ತ ತಿರುಗುತ್ತಿತ್ತು. ಟೆಸ್ಟ್‌ ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಬ್ಯಾಟರ್‌ ಎಂದೇ ಖ್ಯಾತಿ ಪಡೆದಿರುವ ಸೌರಾಷ್ಟ್ರ ತಂಡದ ಸ್ಟಾರ್ ಪ್ಲೇಯರ್‌ ಚೇತೇಶ್ವರ್ ಪೂಜಾರ್ ಈಗ ಕ್ರಿಕೆಟ್‌ಗೆ ಗುಡ್ ಬಾಯ್ ಹೇಳಿದ್ದಾರೆ.

ಈ ಬಗ್ಗೆ ಪೂಜಾರ್ ತಮ್ಮ ಸಾಮಾಜಿಕ ತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ರಜ್‌ಕೋಟ್‌ನ ಚಿಕ್ಕ ಪಟ್ಟಣದಲ್ಲಿ ಬಾಲಕನಾಗಿದ್ದಾಗ, ಪಾಲಕರ ಜೊತೆ ದೊಡ್ಡ ಗುರಿಯನ್ನು ಇಟ್ಟುಕೊಂಡಿದೆ. ಟೀಮ್ ಇಂಡಿಯಾದ ಪರ ಆಡಬೇಕು ಎಂಬುದೇ ದೊಡ್ಡ ಕನಸಾಗಿತ್ತು. ಆಗ ಈ ಆಟ ತನ್ನ ವೃತ್ತಿ ಬದುಕಿಗೆ ಇಷ್ಟೊಂದು ಮಹತ್ವ ನೀಡುತ್ತದೆ ಎಂದು ನಾನು ತಿಳಿದಿರಲಿಲ್ಲ. ನನಗೆ ಈ ಆಟ ಹಲವು ಅವಕಾಶಗಳನ್ನಿಉ ನೀಡಿದೆ. ಈ ಆಟದ ಮೂಲಕವೇ ನಾನು ಅನುಭವ, ಪ್ರೀತಿ ಹಾಗೂ ಉದ್ದೇಶ ಕಲಿತೆ. ಅಲ್ಲದೆ ನನ್ನ ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದಿದ್ದೇನೆ ಎಂದು ಚೇತೇಶ್ವರ್ ಪೂಜಾರ ಭಾವುಕ ಪೋಸ್ಟ್ ಮಾಡಿದ್ದಾರೆ.

Cheteshwar Pujara Announces Retirement from All Forms of Cricket

ವೃತ್ತಿ ಜೀವನದಲ್ಲಿ ತನಗೆ ದೊರೆತ ಅವಕಾಶಕ್ಕಾಗಿ ಬಿಸಿಸಿಐ ಹಾಗೂ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ಗೆ ಧನ್ಯವಾದಗಳು. ನಾಣು ಇಷ್ಟ ವರ್ಷಗಳ ಕಾಲ ಪ್ರತಿನಿಧಿಸಿದ ಎಲ್ಲಾ ತಂಡಗಳು, ಫ್ರಾಂಚೈಸಿಗಳು, ಕೌಂಟಿ ತಂಡಗಳಿಗೆ ಕೃತಜ್ಞ ಎಂದಿದ್ದಾರೆ. ಅಲ್ಲದೆ ತಮಗೆ ತರಬೇತಿ ನೀಡಿದ ಪ್ರತಿ ತರಬೇತುದಾರರಿಗೂ ಪೂಜಾರ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಈ ಕ್ರೀಡೆಯಿಂದ ಪ್ರಪಂಚಾದಾದ್ಯಂತ ಪ್ರವಾಸ ಮಾಡುವ ಅವಕಾಶ ಲಭಿಸಿತು. ನಾನು ಎಲ್ಲಿ ಆಡಿದ್ದರೂ ನನಗೆ ಸಾಕಷ್ಟು ಬೆಂಬಲ ಸಿಕ್ಕಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಪೂಜಾರ ಕುಟುಂಬವನ್ನು ಸಹ ಉಲ್ಲೇಖಿಸಿದ್ದಾರೆ. ನನ್ನ ಕುಟುಂಬ, ಪಾಲಕರು, ಪತ್ನಿ, ಮಗಳು ನನ್ನ ಅತ್ತೆ ಮತ್ತು ನನ್ನ ಕುಟುಂಬದ ಉಳಿದವರ ತ್ಯಾಗ ಮತ್ತು ಬೆಂಬಲವೇ ನನ್ನ ಪ್ರಯಾಣವನ್ನು ಸಾರ್ಥಕಗೊಳಿಸಿದೆ ಎಂದು ಪೂಜಾರ ಬರೆದುಕೊಂಡಿದ್ದಾರೆ.

ಚೇತೇಶ್ವರ್ ಸಾಧನೆ

ಟೀಮ್ ಇಂಡಿಯಾದ ಟೆಸ್ಟ್‌ ಸ್ಪೆಷಲಿಸ್ಟ್ ಬ್ಯಾರ್‌ ಎಂದೇ ಖ್ಯಾತಿ ಪಡೆದಿದ್ದ ಪೂಜಾರ ತಮ್ಮ ಡಿಫೆನ್ಸಿವ್ ಆಟದಿಂದಲೇ ಹೆಸರುವಾಸಿ. ಇವರು ತಮ್ಮ 37ನೇ ವರ್ಷದಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇವರು ಆಸ್ಟ್ರೇಲಿಯಾ ವಿರುದ್ಧ ಓವಲ್‌ನಲ್ಲಿ 2023ರಲ್ಲಿ ಕೊನೆಯ ಬಾರಿಗೆ ಟೆಸ್ಟ್‌ ಕ್ರಿಕೆಟ್‌ ಆಡಿದ್ದರು. ಚೇತೇಶ್ವರ್ ಪೂಜಾರ ಒಟ್ಟು 103 ಪಂದ್ಯಗಳನ್ನು ಆಡಿದ್ದು, 19 ಶತಕ ಹಾಗೂ 35 ಅರ್ಧಶತಗಳನ್ನು ಬಾರಿಸಿದ್ದಾರೆ. ಇವರು 43ರ ಸರಾಸರಿಯಲ್ಲಿ 7195 ರನ್‌ ಸಿಡಿಸಿದ್ದಾರೆ.

Story first published: Sunday, August 24, 2025, 12:42 [IST]
Other articles published on Aug 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+