ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಬಹಳ ದಿನಗಳಿಂದ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ. ಅವರನ್ನು ತಂಡದಲ್ಲಿ ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಅವರ ಬದಲಾಗಿ ಯುವ ಆಟಗಾರರಿಗೆ ಅವಲಾಶ ನೀಡಲಾಗುತ್ತಿದೆ. ಚೇತೇಶ್ವರ ಪೂಜಾರ ಅವರನ್ನು ನಿರಂತರವಾಗಿ ಕಡೆಗಳಿಸಲಾಗುತ್ತಿರುವುದರಿಂದ, ಭಾರತ ತಂಡ ಅವರಿಂದ ದೂರ ಸರಿದಿದೆ. ಅವರಿಗೆ ಅವಕಾಶ ಸಿಗದಿರಬಹುದು ಎಂಬ ಊಹಾಪೋಗಳಿವೆ. ಆದರೆ, ಚೇತೇಶ್ವರ ಪೂಜಾರ ಇನ್ನೂ ತಂಡಕ್ಕೆ ಮರಳುವ ಭರವಸೆಯಲ್ಲಿದ್ದಾರೆ. ಅಲ್ಲದೆ, ತಂಡದಿಂದ ಕೈಬಿಟ್ಟ ಬಗ್ಗೆ ಅವರು ಮೌನ ಮುರಿದಿದ್ದಾರೆ.
ರಾಹುಲ್ ದ್ರಾವಿಡ್ ನಂತರ ಚೇತೇಶ್ವರ ಪೂಜಾರವನ್ನು ಟೀಮ್ ಇಂಡಿಯಾದ ಗೋಡೆ ಎಂದು ಕರೆಯಲಾಯಿತು. ಇದಕ್ಕೆ ತಕ್ಕಂತೆ ಅವರು ಟೀಮ್ ಇಂಡಿಯಾಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಈ ವರ್ಷ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 10 ವರ್ಷಗಳ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಸೋತಿತು. ಚೇತೇಶ್ವರ ಪೂಜಾರ ಅವರನ್ನು ತಂಡದಿಂದ ಕೈಬಿಟ್ಟಿದ್ದರಿಂದಲೇ ಭಾರತ ಸೋತಿತು ಎಂಬ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು.

ಚೇತೇಶ್ವರ ಪೂಜಾರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಜೂನ್ 2023 ರಲ್ಲಿ ಆಡಿದರು. ಅಂದಿನಿಂದ ಅವರು ಭಾರತ ತಂಡದಿಂದ ಹೊರಗುಳಿದಿದ್ದಾರೆ. ಆದರೆ, ಅವಕಾಶ ಸಿಗದ ಚೇತೇಶ್ವರ ಪೂಜಾರ ಕಂಗಾಲಾಗಲಿಲ್ಲ. ನಿರಂತರವಾಗಿ ಅವರು ಭಾರತ ತಂಡಕ್ಕೆ ಮರಳಲು ಅಭ್ಯಾಸ ನಡೆಸುತ್ತಿದ್ದಾರೆ. ಈ ಮೂಲಕ ಅವರು ತಂಡಕ್ಕೆ ಪುನರಾಗಮನ ಮಾಡುವ ಭರವಸೆಯಲ್ಲಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಚೇತೇಶ್ವರ ಪೂಜಾರ, ಯಾರಾದರೂ ಸಂಪೂರ್ಣವಾಗಿ ಯಶಸ್ವಿಯಾದಾಗ ಮತ್ತು 100 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ ಅವರಿಗೆ ಅವಕಾಶ ಸಿಗದಿದ್ದರೆ, ನೀವು ಆ ಕಠಿಣ ಪರಿಶ್ರಮವನ್ನು ಮುಂದುವರಿಸಬೇಕು. ಇದು ಯಶಸ್ಸಿಗೆ ಮೂಲ ಮಂತ್ರ. ತಂಡದಲ್ಲಿ ಅವಕಾಶ ಸಿಗದಿರುವುದು ತುಂಬಾ ನಿರಾಶಾದಾಯಕವಾಗಿತ್ತು. ಆದರೆ ಆಟದ ಮೇಲಿನ ನನ್ನ ಪ್ರೀತಿಯಿಂದಾಗಿ, ನಾನು ನನ್ನನ್ನು ಸಿದ್ಧಪಡಿಸಿಕೊಂಡು ಪ್ರೇರೇಪಿಸುತ್ತಿದ್ದೆ. ಆಟದ ಮೇಲಿನ ನನ್ನ ಪ್ರೀತಿಯಿಂದಾಗಿ, ನಾನು ಆಟಕ್ಕೆ ತುಂಬಾ ಹತ್ತಿರವಾಗಿರುತ್ತೇನೆ ಎಂದು ಹೇಳಿದ್ದಾರೆ.
ಚೇತೇಶ್ವರ ಪೂಜಾರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಉತ್ತಮವಾಗಿರಲಿಲ್ಲ. ಭಾರತ ತಂಡ ನಿರಂತರ ಟೆಸ್ಟ್ ಸರಣಿಗಳಲ್ಲಿ ಸೋಲುಗಳನ್ನು ಎದುರಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲಾಗುವುದು. ಪೂಜಾರ ಮತ್ತೆ ತಂಡಕ್ಕೆ ಮರಳಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ.
ಚೇತೇಶ್ವರ ಪೂಜಾರ ಇದುವರೆಗೆ 103 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 176 ಇನ್ನಿಂಗ್ಸ್‌ಗಳಲ್ಲಿ 7195 ರನ್ ಗಳಿಸಿದ್ದು, 19 ಶತಕಗಳು ಮತ್ತು 35 ಅರ್ಧಶತಕಗಳನ್ನು ಹೊಂದಿದ್ದಾರೆ. ಇದಲ್ಲದೆ, ಅವರ ತಮ್ಮ ವೃತ್ತಿಜೀವನದಲ್ಲಿ ಮೂರು ದ್ವಿಶತಕಗಳನ್ನು ಸಿಡಿಸಿದ್ದಾರೆ.