
ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಕಡಿಮೆ ಸ್ಟ್ರೈಕ್‌ರೇಟ್ ಹೊಂದಿದ್ದರೂ ವಿಶ್ವ ಕ್ರಿಕೆಟ್‌ನಲ್ಲಿ ಎದುರಾಳಿ ತಂಡಕ್ಕೆ ದೊಡ್ಡ ಏಟನ್ನು ನೀಡಬಲ್ಲ ಅಪರೂಪದ ಆಟಗಾರ ಚೇತೇಶ್ವರ್ ಪೂಜಾರ ಎಂದು ಹೇಡನ್ ಹೇಳಿದ್ದಾರೆ.
ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲಲು ಪೂಜಾರ ಪ್ರಮುಖ ಕಾರಣರಾಗಿದ್ದರು. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಪೂಜಾರ 1258 ಎಸೆತಗಳನ್ನು ಎದುರಿಸಿ 521 ರನ್ ಬಾರಿಸಿದ್ದರು. ಈ ಮೂಲಕ ಸರಣಿಯ ಅಂತ್ಯದ ವೇಲೆಗೆ ಎಲ್ಲತ ಚಿತ್ತ ತನ್ನತ್ತ ಬೀಳುವಂತೆ ಪೂಜಾರ ಮಾಡಿದ್ದರು.
"ಈಗ ನಾವು ವೇಗವಾಗಿ ರನ್ ಬಾರಿಸುವ ಕಾಲಘಟ್ಟದಲ್ಲಿದ್ದೇವೆ. ಸ್ಟ್ರೈಕ್‌ರೇಟ್‌ನ ಕಾರಣಕ್ಕೆ ನಾವು ಆಟಗಾರರನ್ನು ಪ್ರಶಂಸಿಸುತ್ತೇವೆ. ಆದರೆ ಪೂಜಾರ ಮಾತ್ರ 45ರ ಆಸುಪಾಸಿನಲ್ಲಿ ಸ್ಟ್ರೈಕ್‌ರೇಟ್ ಹೊಂದಿದ್ದರೂ ನಿಮ್ಮನ್ನೂ ಸಾಕಷ್ಟು ಘಾಸಿಗೊಳಿಸಬಲ್ಲ ಆಟಗಾರ ಆಗಿದ್ದಾರೆ" ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಭಾರತದ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಕೂಡ ಪೂಜಾರ ಆಟದ ಬಗಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಚೇತೇಶ್ವರ್ ಪೂಜಾರ ಆಟವನ್ನು ನೀಡಲು ಎದುರು ನೋಡುತ್ತಿರುವುದಾಗಿ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 17ರಿಂದ ಮೊದಲ ಟೆಸ್ಟ್ ಪಂದ್ಯ ಅಡಿಲೇಡ್‌ನಲ್ಲಿ ಹಗಲು ರಾತ್ರಿ ನಡೆಯಲಿದೆ. ಭಾರತ ಸುದೀರ್ಘ ಕಾಲದ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಈ ಹಿಂದಿನ ಪ್ರವಾಸದಲ್ಲಿ ಭಾರತ ಸರಣಿ ಗೆದ್ದಿರುವುದು ಈ ಬಾರಿಯ ಟೂರ್ನಿಯ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚುವಂತೆ ಮಾಡಿದೆ.