ಕೊರೊನಾ ವೈರಸ್: ಚೇತೇಶ್ವರ್ ಪೂಜಾರಾ ಕೌಂಟಿ ಒಪ್ಪಂದ ರದ್ದು

ಕೊರೊನಾ ವೈರಸ್ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡಿದೆ. ಈ ಸಾಂಕ್ರಾಮಿಕ ರೋಗಕ್ಕೆ ತಡೆ ಹಾಕಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಿದೆ. ಪ್ರತಿಯೊಬ್ರಿಗೂ ಕೊರೊನಾ ವೈರಸ್ ನಾನಾ ರೀತಿಯ ಸಂಕಷ್ಟವನ್ನು ನೀಡುತ್ತಿರುವುದು ಮಾತ್ರ ಸುಳ್ಳಲ್ಲ. ಟೀಮ್ ಇಂಡಿಯಾದ ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರಾ ಮೇಲೂ ಕೊರೊನಾ ವೈರಸ್ ಪ್ರಭಾವ ಬೀರಿದೆ.
ಕೊರೊನಾ ನೇರವಾಗಿ ಪೂಜಾರಾಗೆ ಕಾಡದಿದ್ದರೂ ದೊಡ್ಡ ನಷ್ಟವನ್ನುಂಟು ಮಾಡಿರೋದಂತು ಸುಳ್ಳಲ್ಲ. ಪೂಜಾರಾ ಇಂಗ್ಲಿಷ್ ಕೌಂಟಿ ತಂಡ ಗ್ಲೌಸೆಸ್ಟರ್‌ಶೈರ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈ ಒಪ್ಪಂದವನ್ನು ರದ್ದುಪಡಿಸಲಾಗಿದೆ.
ಪೂಜಾರಾ ಈ ವರ್ಷ ಇಂಗ್ಲಿಷ್ ಕೌಂಟಿಯಲ್ಲಿ ಗ್ಲೌಸೆಸ್ಟರ್‌ಶೈರ್‌ನೊಂದಿಗೆ ಡಿವಿಷನ್ ಒನ್‌ಗಾಗಿ 6 ಪಂದ್ಯಗಳನ್ನು ಆಡುವ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈಗ ಈ ಒಪ್ಪಂದವನ್ನು ರದ್ದುಪಡಿಸಲಾಗಿದೆ. ಏಪ್ರಿಲ್ 12 ರಿಂದ ಮೇ 22 ರವರೆಗೆ ಕೌಂಟಿ ಚಾಂಪಿಯನ್‌ಶಿಪ್ ಅಡಿಯಲ್ಲಿ ಪೂಜಾರಾ ಗ್ಲೌಸೆಸ್ಟರ್‌ಶೈರ್ ಪರ 6 ಪಂದ್ಯಗಳನ್ನು ಆಡಬೇಕಿತ್ತು.
ಗ್ಲೋಸೆಸ್ಟರ್‌ಶೈರ್ ಈ ಬಗ್ಗೆ ಪ್ರಕಟಣೆ ನೀಡಿದ್ದು ಕರೋನಾದ ಕಾರಣದಿಂದಾಗಿ ಜಾಗತಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಒಪ್ಪಂದವನ್ನು ರದ್ದುಗೊಳಿಸಲಾಗುತ್ತಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಮೇ 28 ರವರೆಗೆ ಇಂಗ್ಲೆಂಡ್ನಲ್ಲಿ ಪ್ರಾಂತೀಯ ಕ್ರಿಕೆಟ್ ಅನ್ನು ನಿಷೇಧಿಸಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದಿದೆ.
ಪೂಜಾರಾ ಕೌಂಟಿಯಲ್ಲ ಕಣಕ್ಕಿಳಿಯುವುದು ಇದು ಮೊದಲೇನಲ್ಲ. ಈ ಹಿಂದೆ ಇಂಗ್ಲೆಂಡ್‌ನಲ್ಲಿ ಡರ್ಬಿಶೈರ್, ಯಾರ್ಕ್‌ಷೈರ್ ಮತ್ತು ನಾಟಿಂಗ್ಹ್ಯಾಮ್ಷರ್ ಪರ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications