ಯುಎಇಯಲ್ಲಿ ಭಾರತ ತಂಡ ಸೇರಿಕೊಳ್ಳಲು ಪೂಜಾರ, ವಿಹಾರಿ ಸಜ್ಜು

ದುಬೈ: ಭಾರತ ತಂಡದ ಬೆಂಬಲ ಸಿಬ್ಬಂದಿ ಜೊತೆಗೆ ಭಾರತದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಮತ್ತು ಹನುಮ ವಿಹಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಹಾರಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಸರಣಿಯ ಸಲುವಾಗಿ ಭಾರತೀಯ ಸಂಪೂರ್ಣ ತಂಡ ಯುಎಇಯಲ್ಲಿ ಜೊತೆ ಸೇರುವ ನಿರೀಕ್ಷೆಯಿದೆ.
ಚೇತೇಶ್ವರ ಪೂಜಾರ ಮತ್ತು ಹನುಮ ವಿಹಾರಿ ಮತ್ತು ಭಾರತದ ಬೆಂಬಲ ಸಿಬ್ಬಂದಿ ಮುಂದಿನ ಭಾನುವಾರ (ನವೆಂಬರ್ 1) ಭಾರತ ಬಿಟ್ಟು ಯುಎಇಗೆ ಹೋಗಲಿದ್ದಾರೆ. ಅಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ತಂಡವನ್ನು ಇಬ್ಬರೂ ಸೇರಿಕೊಳ್ಳಲಿದ್ದಾರೆ.
ಮುಂದಿನ ಸೋಮವಾರ (ನವೆಂಬರ್ 2) ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಇಎಸ್‌ಪಿನ್ ಕ್ರಿಕ್ ಇನ್ಫೋ ವರದಿ ಹೇಳಿದೆ. ಪೂಜಾರ, ವಿಹಾರಿ ಅಲ್ಲದೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಕೂಡ ಯುಎಇಗೆ ಪ್ರಯಾಣಿಸಲಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸ ಸರಣಿಯು ಮೂರು ಏಕದಿನ ಪಂದ್ಯಗಳು, ಮೂರು ಟಿ20ಐ ಪಂದ್ಯಗಳು ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ಪ್ರವಾಸಿ ಭಾರತ ಕ್ವಾರಂಟೈನ್ ಅವಧಿಯಲ್ಲಿ ಅಭ್ಯಾಸ ನಡೆಸಲು ನ್ಯೂ ಸೌತ್‌ವೇಲ್ಸ್ ಸರ್ಕಾರ ಅನುಮತಿ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications