ಕೋವಿಡ್-19 ವ್ಯಾಕ್ಸಿನ್ ಪಡೆದ ಚೇತೇಶ್ವರ್ ಪೂಜಾರ, ಇಶಾಂತ್ ಶರ್ಮಾ

ನವದೆಹಲಿ: ಭಾರತದ ಟೆಸ್ಟ್ ಕ್ರಿಕೆಟ್ ಸ್ಪೆಷಾಲಿಸ್ಟ್ ಚೇತೇಶ್ವರ್ ಪೂಜಾರ, ವೇಗಿ ಇಶಾಂತ್ ಶರ್ಮಾ ಕೋವಿಡ್-19 ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಮುಂದಿನ ತಿಂಗಳು ಭಾರತದ ಇಂಗ್ಲೆಂಡ್ ಪ್ರವಾಸ ಸರಣಿಗೆ ಆಯ್ಕೆಯಾಗಿರುವ ಇಬ್ಬರೂ ಆಟಗಾರರು ಸೋಮವಾರ (ಮೇ 10) ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
'ನಾನು ಮತ್ತು ಪೂಜಾ ಕೋವಿಡ್-19 ಮೊದಲ ಡೋಸ್ ಪಡೆದುಕೊಂಡಿದ್ದೇವೆ. ನೀವು ಅರ್ಹರಿರುವುದಾದರೆ ದಯವಿಟ್ಟು ಎಲ್ಲರೂ ವ್ಯಾಕ್ಸಿನ್ ಪಡೆದುಕೊಳ್ಳಲು ಪ್ರಯತ್ನಿಸಿ ಎಂದು ಕೋರಿಕೊಳ್ಳುತ್ತೇನೆ' ಎಂದು ಚೇತೇಶ್ವರ್ ಪೂಜಾರ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ವೇಗಿ ಇಶಾಂತ್ ಶರ್ಮಾ ಕೂಡ ಮೊದಲ ಕೋವಿಡ್-19 ವ್ಯಾಕ್ಸಿನ್ ಪಡೆದುಕೊಂಡಿರುವುದಾಗಿ ಟ್ವೀಟ್ ಮಾಡಿದ್ದಾರೆ. 'ವ್ಯಾಕ್ಸಿನೇಶನ್ ಆಯ್ತು. ಇದಕ್ಕೆ ಅಗತ್ಯ ಕಾರ್ಯಕರ್ತರಿಗೆ ಧನ್ಯವಾದಗಳು ಮತ್ತು ಗೌರವಗಳು. ಸೌಲಭ್ಯಗಳ ಸುಲಭ ನಿರ್ವಹಣೆಗೆ ಖುಷಿಯಾಗಿದೆ' ಎಂದು ಇಶಾಂತ್ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕೂಡ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಭಾರತದ ಆಟಗಾರರಾದ ಶಿಖರ್ ಧವನ್, ಆರ್ ಅಶ್ವಿನ್, ಅಜಿಂಕ್ಯ ರಹಾನೆ ಕೂಡ ಈಗಾಗಲೇ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications