For Quick Alerts
ALLOW NOTIFICATIONS  
For Daily Alerts
 

Cheteshwar Pujara : ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ದ್ವಿಶತಕ ಗಳಿಸಿದ ಚೇತೇಶ್ವರ ಪೂಜಾರ

Cheteshwar pujara makes India Feel proud:Hits Double Ton On Sussex Debut

ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಫಾರ್ಮ್‌ಗೆ ಮರಳಿದ್ದಾರೆ. 2022 ರ ಕೌಂಟಿ ಚಾಂಪಿಯನ್‌ಶಿಪ್‌ನ (ಏಪ್ರಿಲ್ 17) ಸಸೆಕ್ಸ್‌ಗಾಗಿ ದ್ವಿಶತಕ ಸಿಡಿಸುವ ಮೂಲಕ ಭಾರತದ ಬ್ಯಾಟರ್ ಚೇತೇಶ್ವರ ಪೂಜಾರ ಟೀಕಾಕಾರರಿಗೆ ರನ್್ಗಳಿಸುವ ಮೂಲಕ ಸಂದೇಶವನ್ನು ತಲುಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೂಜಾರ ಅವರಿಗೆ ಭಾರತ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಅಭಿನಂದಿಸಿದ್ದಾರೆ.

ಸಸೆಕ್ಸ್ ಮತ್ತು ಡರ್ಬಿಶೈರ್ ನಡುವಿನ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡನೇ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ ಶತಕ ಬಾರಿಸಿದ್ದಾರೆ. ಇದು ಎರಡು ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೊದಲನೆಯ ಶತಕವಾಗಿದೆ. ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ, ಭಾರತೀಯ ಕ್ರಿಕೆಟಿಗ ಪೂಜಾರ ಸಸೆಕ್ಸ್‌ಗೆ ತನ್ನ ಚೊಚ್ಚಲ ಶತಕವನ್ನು ಗಳಿಸಿದರು, ನಂತರದಲ್ಲಿ ಅದನ್ನು ದ್ವಿಶತಕ ಆಗಿ ಪರಿವರ್ತಿಸಿದರು.

ಡರ್ಬಿಶೈರ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 133 ಓವರ್‌ಗಳಲ್ಲಿ 505/8 ಕ್ಕೆ ಡಿಕ್ಲೇರ್ ಮಾಡಿಕೊಂಡರು. ಶಾನ್ ಮಸೂದ್ ಅವರ ದ್ವಿಶತಕ ಮತ್ತು ವೇಯ್ನ್ ಮ್ಯಾಡ್‌ಸೆನ್ ಅವರ ಶತಕಗಳ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು. ಆದ್ರೆ ಇದಕ್ಕೆ ಉತ್ತರವಾಗಿ ಸಸೆಕ್ಸ್ ಆಟಗಾರರು 56.3 ಓವರ್‌ಗಳಲ್ಲಿ 174 ರನ್‌ಗಳಿಗೆ ಆಲೌಟ್ ಆದ್ರು.

ಡರ್ಬಿಶೈರ್ ಫಾಲೋ-ಆನ್ ಜಾರಿಗೊಳಿಸಿತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ತಿರುಗೇಟು ನೀಡಿದ ಸಸೆಕ್ಸ್‌ ಕೇವಲ ಮೂರು ವಿಕೆಟ್‌ಗಳ ನಷ್ಟದಲ್ಲಿ 513 ರನ್‌ಗಳೊಂದಿಗೆ ಅಂತಿಮ ದಿನದ ಅಂತ್ಯಕ್ಕೆ ಪುಟಿದೇಳಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಪೂಜಾರ ಅವರ ಅಜೇಯ 201*(387) ರನ್‌ಗಳು ಅವರ ತಂಡಕ್ಕೆ ನಿರ್ಣಾಯಕವಾಗಿತ್ತು. 491 ಎಸೆತಗಳಲ್ಲಿ 243 ರನ್ ಗಳಿಸಿ ದ್ವಿಶತಕ ಗಳಿಸಿದ ನಾಯಕ ಟಾಮ್ ಹೈನ್ಸ್ ಅವರಿಗೆ ಉತ್ತಮ ಬೆಂಬಲ ನೀಡಿದರು.

ಪೂಜಾರ ಮತ್ತು ಹೈನ್ಸ್ 351 ರನ್‌ಗಳ ಜೊತೆಯಾಟವನ್ನಾಡಿದರು. ಇದು ಅವರ ತಂಡವನ್ನ ಸೋಲಿನಿಂದ ಕಾಪಾಡಿತು. ಕಳೆದ ಎರಡು ವರ್ಷಗಳಲ್ಲಿ ಕಳಪೆ ಪ್ರದರ್ಶನದ ಮೂಲಕ ತಂಡದಿಂದ ಹೊರಬಿದ್ದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ನಂತರ ಪೂಜಾರ ಅವರನ್ನು ಭಾರತ ತಂಡದಿಂದ ಕೈಬಿಡಲಾಯಿತು. ಜೊತೆಗೆ ಶ್ರೀಲಂಕಾದ ಸರಣಿಗಾಗಿ ಸಹ ತಂಡದಿಂದ ಹೊರಗಿಡಲಾಯಿತು. 95 ಪಂದ್ಯಗಳಲ್ಲಿ, ಪೂಜಾರ 6713 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 206 ಆಗಿದೆ.

ಚೇತೇಶ್ವರ ಪೂಜಾರ ಅವರು ಕೌಂಟಿ ಕ್ರಿಕೆಟ್‌ಗೆ ಸೇರುವ ಮೊದಲು ಭಾರತ ತಂಡದಿಂದ ಕೈಬಿಡಲಾಗಿತ್ತು. 2020 ರ ಜನವರಿಯಲ್ಲಿ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಕೊನೆಯ ಬಾರಿ ಪೂಜಾರ ಶತಕ ಬಾರಿಸಿದ್ದರು. 2019 ರಲ್ಲಿ ಸಿಡ್ನಿಯಲ್ಲಿ ಭಾರತವು ಮತ್ತು ಆಸ್ಟ್ರೇಲಿಯಾ ತಂಡದೊಂದಿಗೆ ಜರುಗಿದ ಪಂದ್ಯಾವಳಿಯಲ್ಲಿ ಪೂಜಾರ ಕೊನೆಯ ಟೆಸ್ಟ್ ಶತಕವು ದಾಖಲಿಸಿದ್ದರು.

95 ಟೆಸ್ಟ್ ಪಂದ್ಯಗಳಲ್ಲಿ, ಪೂಜಾರ 6,713 ರನ್ ಗಳಿಸಿದ್ದಾರೆ, ಅವರ ಗರಿಷ್ಠ ಸ್ಕೋರ್ 206* ಆಗಿದೆ. ಪೂಜಾರ 18 ಶತಕಗಳು, ಮೂರು ದ್ವಿಶತಕಗಳು ಮತ್ತು 32 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

Story first published: Monday, April 18, 2022, 17:27 [IST]
Other articles published on Apr 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+