For Quick Alerts
ALLOW NOTIFICATIONS  
For Daily Alerts
 

ಸೌರಾಷ್ಟ್ರ ಸ್ಟಾರ್‌ಗೆ ಟಿ20 ಕ್ರಿಕೆಟ್‌ನಲ್ಲಿ ಭಾರಿ ಡಿಮಾಂಡ್‌!

T20 ಟೂರ್ನಿಯಲ್ಲಿ ಮಿಂಚಲಿದ್ದಾರೆ ಪೂಜಾರ..!? | Oneindia Kannada
Cheteshwar Pujara on demand in Saurashtra Premier League

ಸೌರಾಷ್ಟ್ರ, ಮೇ 08: ಭಾರತ ಟೆಸ್ಟ್‌ ತಂಡದ ಮಿಸ್ಟರ್‌ ಡಿಪೆಂಡಬಲ್‌ ಬ್ಯಾಟ್ಸ್‌ಮನ್‌ ಚೇತೇಶ್ವರ್ ಪೂಜಾರಾಗೆ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಭಾರಿ ಬೇಡಿಕೆ ದೊರೆತಿದ್ದು, ಮುಂಬರುವ ಚೊಚ್ಚಲ ಆವೃತ್ತಿಯ ಸೌರಾಷ್ಟ್ರ ಪ್ರೀಮಿಯರ್‌ ಲೀಗ್‌ (ಎಸ್‌ಪಿಎಲ್‌) ಟಿ20 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಮೇ 14ರಿಂದ ಆರಂಭವಾಗಲಿರುವ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಮಹತ್ವಾಕಾಂಕ್ಷೀಯ ಟಿ20 ಕ್ರಿಕೆಟ್‌ ಟೂರ್ನಿಯ ಮೊದಲ ಆವೃತ್ತಿಯಲ್ಲಿ ಒಟ್ಟು ಐದು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ ಈ ಟೂರ್ನಿಯಲ್ಲಿ ಆಡಲು ಲಭ್ಯರಾಗಿರುವುದಾಗಿ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಬುಧವಾರ ತಿಳಿಸಿದೆ.

ಇದರೊಂದಿಗೆ ವಿವಿಧ ಫ್ರಾಂಚೈಸಿ ತಂಡಗಳಲ್ಲಿ ಸೌರಾಷ್ಟ್ರದ ಸ್ಟಾರ್‌ ಆಟಗಾರರನ್ನು ಖರೀದಿಸಲು ಪೈಪೋಟಿ ಏರ್ಪಟ್ಟಿದೆ.

ಕಳೆದ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಾಲು ಸಾಲು ಶತಕಗಳ ಮೂಲಕ ಮಿಂಚಿದ್ದ ಚೇತೇಶ್ವರ್‌ ಪೂಜಾರ, ಈ ವರ್ಷ ನಡೆದ ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿಸೌರಾಷ್ಟ್ರ ಪರ ತಮ್ಮ ವೃತ್ತಿ ಜೀವನದ ಚೊಚ್ಚಲ ಟಿ20 ಶತಕ ಸಿಡಿಸಿ ಅಬ್ಬರಿಸಿದ್ದರು. ಆದರೂ, ಎಂದಿನಂತೆ ಈ ಸಲವೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20ಯಲ್ಲಿ ಯಾವ ಫ್ರಾಂಚೈಸಿಗಳೂ ಪೂಜಾರ ಅವರನ್ನು ಖರೀದಿಸಲು ಒಲವು ತೋರಲಿಲ್ಲ.

"ಚೊಚ್ಚಲ ಆವೃತ್ತಿಯ ಸೌರಾಷ್ಟ್ರ ಪ್ರೀಮಿಯರ್‌ ಲೀಗ್‌ನಲ್ಲಿ ಐದು ಫ್ರಾಂಚೈಸಿ ತಂಡಗಳು ಪಾಲ್ಗೊಳ್ಳುತ್ತಿದ್ದು, ಚೇತೇಶ್ವರ್‌ ಪೂಜಾರ ಅವರನ್ನು ಯಾವುದೇ ತಂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸೌರಾಷ್ಟ್ರ ಪ್ರೀಮಿಯರ್‌ ಲೀಗ್‌ನಲ್ಲಿ ಪೂಜಾರ ಯಾವ ತಂಡದ ಪರ ಆಡುತ್ತಾರೆ ಎಂಬುದು ಗುರುವಾರ ಅಂತ್ಯಗೊಳ್ಳಲಿದೆ. ಸದ್ಯ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ ಆಡುತ್ತಿರುವ ಪೂಜಾರ ವಿರಾಮ ತೆಗೆದುಕೊಂಡು ಎಸ್‌ಪಿಎಲ್‌ನಲ್ಲಿ ಪಾಲ್ಗೊಳ್ಳಲು ಒಲವು ವ್ಯಕ್ತಪಡಿಸಿದ್ದಾರೆ,'' ಎಂದು ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. "ಎಸ್‌ಪಿಎಲ್‌ನಲ್ಲಿ ಇರುವ ಎಲ್ಲಾ ತಂಡಗಳಿಗೂ ಚೇತೇಶ್ವರ್‌ ಪೂಜಾರ ಅವರ ಆಗಮನ ಸಂತಸ ತಂದಿದೆ,'' ಎಂದು ಹೇಳಿದೆ.

ಭಾರತ ಟೆಸ್ಟ್‌ ತಂಡದ ಸ್ಟಾರ್‌ ಆಟಗಾರನಾಗಿರುವ ಪೂಜಾರ, ಆಡಿರುವ 68 ಪಂದ್ಯಗಳಿಂದ ಒಟ್ಟಾರೆ 5,426 ರನ್‌ಗಳನ್ನು ಗಳಿಸಿದ್ದಾರೆ. 206 ರನ್‌ ಇನಿಂಗ್ಸ್‌ ಒಂದರಲ್ಲಿ ಅವರು ಗಳಿಸಿರುವ ಗರಿಷ್ಠ ಮೊತ್ತ. ಟಿ20 ಕ್ರಿಕೆಟ್‌ನಲ್ಲೂ ಒಟ್ಟು 64 ಪಂದ್ಯಗಳನ್ನು ಆಡಿರುವ 31 ವರ್ಷದ ಅನುಭವಿ ಬ್ಯಾಟ್ಸ್‌ಮನ್‌, 29.47ರ ಸರಾಸರಿಯಲ್ಲಿ 1,356 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 7 ಅರ್ಧಶತಕಗಳು ಸೇರಿವೆ.

Story first published: Wednesday, May 8, 2019, 17:28 [IST]
Other articles published on May 8, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+