For Quick Alerts
ALLOW NOTIFICATIONS  
For Daily Alerts
 

"ನನ್ನ ಕೆಲಸವನ್ನು ಸುಲಭಗೊಳಿಸಿದಕ್ಕೆ ಧನ್ಯವಾದ"

ಟೀಮ್ ಇಂಡಿಯಾದ ಟೆಸ್ಟ್‌ ಸ್ಪೇಷಲಿಸ್ಟ್‌ ಆಟಗಾರ ಚೇತೇಶ್ವರ್ ಪೂಜಾರ ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದಿಂದ ಟೆಸ್ಟ್‌ ನುರಿತ ಮತ್ತೊಬ್ಬ ಬ್ಯಾಟರ್‌ ವಿದಾಯ ಹೇಳಿದಂತೆ ಆಗಿದೆ. ಮೂರನೇ ಸ್ಥಾನದ ಅಧಿಪತಿ ಎಂದೇ ಖ್ಯಾತಿ ಪಡೆದಿದ್ದ ಚೇತೇಶ್ವರ್ ಪೂಜಾರ್ ಆಗಸ್ಟ್‌ 24 ರಂದು ಕ್ರಿಕೆಟ್‌ನಿಂದ ಹಿಂದೆ ಸರೆದಿದ್ದಾರೆ.

ಟೀಮ್ ಇಂಡಿಯಾದ ಪರ ಚೇತೇಶ್ವರ್ ಪೂಜಾರ 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ವಿಶೇಷ ಎಂದರೆ ಇವರು ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನು ಕಾಂಗರೂಗಳ ವಿರುದ್ಧವೇ 2023ರಂದು ಆಡಿದರು. ಟೆಸ್ಟ್‌ ಸ್ಪೆಷಲಿಸ್ಟ್‌ ಬ್ಯಾಟರ್‌ ಚೇತೇಶ್ವರ್ ಪೂಜರ ಅವರ ನಿವೃತ್ತಿಯ ಬಗ್ಗೆ ಹಾಗೂ ಅವರ ಆಟದ ಬಗ್ಗೆ ಹಲವು ಆಟಗಾರರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈಗ ಈ ಸಾಲಿಗೆ ಟೀಮ್ ಇಂಡಿಯಾದ ಸೂಪರ್ ಸ್ಪೇಷಲಿಸ್ಟ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಸಹ ಸೇರಿದ್ದಾರೆ.

Cheteshwar Pujara retires from international cricket Virat Kohli pays tribute

ಟೀಮ್ ಇಂಡಿಯಾದ ಸೂಪರ್‌ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹ ಚೇತೇಶ್ವರ್ ಪೂಜಾರ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಪೂಜಾರ ಅವರ ಕೊಡುಗೆಯನ್ನು ಕೊಹ್ಲಿ ನೆನಪಿಸಿಕೊಂಡರು ಮತ್ತು ಅವರು ಭಾರತೀಯ ಬ್ಯಾಟಿಂಗ್ ಕ್ರಮಾಂಕದಲ್ಲಿ ತಮ್ಮ ಕೆಲಸವನ್ನು ಸುಲಭಗೊಳಿಸಿದ್ದಾರೆ ಎಂದು ಹೇಳಿದರು. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿರುವ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ನನ್ನ ಕೆಲಸವನ್ನು ಸುಲಭಗೊಳಿಸಿದಕ್ಕೆ ಪೂಜಾರ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಪೂಜಾರ ಅವರ ಭವಿಷ್ಯಕ್ಕಾಗಿ ವಿರಾಟಟ್‌ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಟೀಮ್ ಇಂಡಿಯಾಕ್ಕೆ ವಿರಾಟ್‌ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಜೋಡಿ ಹಲವು ಟೆಸ್ಟ್‌ ಪಂದ್ಯಗಳ ಕಷ್ಟದ ಸನ್ನಿವೇಶಗಳಲ್ಲಿ ತಂಡಕ್ಕೆ ಆಧಾರವಾಗಿದ್ದಾರೆ. ಈ ಜೋಡಿ ಭಾರತದ ಪರ 83 ಟೆಸ್ಟ್‌ ಪಂದ್ಯಗಳ 43.37 ಇನಿಂಗ್ಸ್‌ಗಳಲ್ಲಿ 3513 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಈ ಜೋಡಿ 7 ಶತಕ ಹಾಗೂ 18 ಅರ್ಧಶತಕಗಳನ್ನು ಬಾರಿಸಿದ್ದಾರೆ.

Cheteshwar Pujara retires from international cricket Virat Kohli pays tribute

ಪೂಜಾರ ಸಾಧನೆ

ಟೆಸ್ಟ್‌ ಸ್ಪೆಷಲಿಸ್ಟ್‌ ಬ್ಯಾಟರ್‌ ರಾಹುಲ್‌ ದ್ರಾವಿಡ್‌ ಅವರಿಂದ ತೆರವಾದ ಸ್ಥಾನಕ್ಕೆ ಸೂಕ್ತ ನ್ಯಾಯ ಒದಗಿಸಿದ ಆಟಗಾರ ಚೇತೇಶ್ವರ್ ಪೂಜಾರ. ಇವರು ಟೀಮ್ ಇಂಡಿಯಾದ ಪರ ಹಲವು ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಆದರೆ ಇವರು ಮೂರನೇ ಕ್ರಮಾಂಕದಲ್ಲಿ ಆಡಿದ ಧಾಟಿ ಹಲವು ವರ್ಷಗಳ ಕಾಲ ಮನಸ್ಸಿನಲ್ಲಿ ಉಳಿಯಲಿದೆ. ಪೂಜಾರ ಭಾರತದ ಪರ 103 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 7195 ರನ್‌ ಸಿಡಿಸಿದ್ದಾರೆ. ಈ ವೇಳೆ 19 ಶತಕ ಹಾಗೂ 34 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇನ್ನು 278 ಪ್ರಥಮ ದರ್ಜೆ ಪಂದ್ಯಗಳಲ್ಲಿ 21301 ರನ್‌ ಸಿಡಿಸಿದ್ದಾರೆ. ಇದರಲ್ಲಿ 66 ಶತಕಗಳು ಮತ್ತು 81 ಅರ್ಧಶತಕಗಳು ಸೇರಿವೆ.

Story first published: Wednesday, August 27, 2025, 9:54 [IST]
Other articles published on Aug 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+