ವಿಚಿತ್ರ ರೀತಿಯಲ್ಲಿ ರನ್‌ಔಟ್ ಆದ ಚೇತೇಶ್ವರ್ ಪೂಜಾರ: ವಿಡಿಯೋ

ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ವಿಚಿತ್ರವಾಗಿ ರನ್‌ಔಟ್ ಆಗಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಆರಂಭದ ಓವರ್‌ನಲ್ಲಿಯೇ ಚೇತೇಶ್ವರ್ ಪೂಜಾರ ವಿಕೆಟ್ ಕಳೆದುಕೊಂಡರು.
ಆಲ್‌ರೌಂಡರ್ ಮೊಯೀನ್ ಅಲಿ ಮೂರನೇ ದಿನದಾಟದ ಮೊದಲ ಓವರ್ ಎಸೆದರು. ಈ ಓವರ್‌ನ ಎಸೆತವೊಂದನ್ನು ಚೇತೇಶ್ವರ್ ಪೂಜಾರ ಮುನ್ನುಗ್ಗಿ ರಕ್ಷಣಾತ್ಮಕವಾಗಿ ಆಡಿದರು. ಆ ಚೆಂಡು ಶಾರ್ಟ್ ಲೆಗ್‌ನಲ್ಲಿದ್ದ ಫೀಲ್ಡರ್‌ನ ಕೈಸೇರುತ್ತಿದ್ದಂತೆಯೇ ವಿಕೆಟ್ ಕೀಪರ್ ಕೈಗಿತ್ತರು.
ಕೈ ಜಾರಿದ ಬ್ಯಾಟ್
ಈ ವೇಳೆ ಚೇತೇಶ್ವರ್ ಪೂಜಾರ ತಮ್ಮ ಬ್ಯಾಟ್‌ಅನ್ನು ಕ್ರೀಸ್‌ಗೆ ಇಟ್ಟರು. ಆದರೆ ದುರಾದೃಷ್ಟವಾಶತ್ ಚೇತೇಶ್ವರ್ ಪೂಜಾರ ಅವರ ಕೈನಿಂದ ಬ್ಯಾಟ್ ನೆಲಕ್ಕುರುಳಿತ್ತು. ಆದರೆ ಅಷ್ಟರಲ್ಲಿ ವಿಕೆಟ್ ಕೀಪರ್ ಫೋಕ್ಸ್ ಮಿಂಚಿನಂತೆ ಚೆಂಡನ್ನು ಹಿಡಿದು ವಿಕೆಟ್‌ಗೆ ಎಗರಿಸಿದರು. ಆದರೆ ಬ್ಯಾಟ್ ಕೈಯಿಂದ ಜಾರಿದ್ದ ಪೂಜಾರ ಇನ್ನೂ ಕ್ರೀಸ್ ತಲುಪಿರಲಿಲ್ಲ. ಈ ಮೂಲಕ ಕ್ರಿಕೆಟ್‌ನಲ್ಲಿ ಬಹಳ ಅಪರೂಪದ ರೀತಿಯಲ್ಲಿ ಚೇತೇಶ್ವರ್ ಪೂಜಾರ ತಮ್ಮ ವಿಕೆಟ್ ಕಳೆದುಕೊಂಡರು.

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಫೆವಿಲಿಯನ್ ಪೆರೇಡ್
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದೆ. ಆದರೆ ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲರಾಗಿದ್ದಾರೆ.

ಕೊಹ್ಲಿ-ಅಶ್ವಿನ್ ಅದ್ಭುತ ಪ್ರದರ್ಶನ
ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಆರ್ ಅಶ್ವಿನ್ 7ನೇ ವಿಕೆಟ್‌ಗೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆರ್ ಅಶ್ವಿನ್ ಹಾಗೂ ವಿರಾಟ್ ಕೊಹ್ಲಿ 96 ರನ್‌ಗಳ ಜೊತೆಯಾಟವನ್ನು ನೀಡಿದರು. ನಾಯಕ ವಿರಾಟ್ ಕೊಹ್ಲಿ 62 ರನ್‌ಗಳಿಸಿ ಔಟ್ ಆದರೆ ಆರ್ ಅಶ್ವಿನ್ ಅಮೋಘ ಆಟ ಪ್ರದರ್ಶಿಸಿ ಶತಕ ಸಿಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications