ಪುತ್ರಿಯ ಜೊತೆ ಲೈವ್ ಬಂದು ಐಪಿಎಲ್ ಹರಾಜಿನ ಸಂತಸ ಹಂಚಿಕೊಂಡ ಪೂಜಾರ

ಟೀಮ್ ಇಂಡಿಯಾ ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಟೆಸ್ಟ್ ಸ್ಪೆಶಲಿಸ್ಟ್ ಖ್ಯಾತಿಯ ಚೇತೆಶ್ವರ್ ಪೂಜಾರ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿ ಮಾಡಿದೆ. ಈ ಮೂಲಕ 7 ವರ್ಷಗಳ ಅಂತರದ ಬಳಿಕ ಮತ್ತೆ ಚಿಟುಕು ಕ್ರಿಕೆಟ್ ಲೀಗ್‌ನಲ್ಲಿ ಪೂಜಾರ ಕಾಣಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಚೇತೇಶ್ವರ್ ಪೂಜಾರ ಸಂಸತವನ್ನು ವ್ಯಕ್ತಡಿಸಿದ್ದಾರೆ. ತಮ್ಮ ಪುತ್ರಿಯ ಜೊತೆಗೆ ಕಾಣಿಸಿಕೊಂಡು ವಿಡಿಯೋ ಸಂದೇಶವನ್ನು ಚೇತೇಶ್ವರ್ ಪೂಜಾರ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಚೇತೇಶ್ವರ್ ಪೂಜಾರ ಅವರ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
"ಐಪಿಎಲ್‌ಗೆ ಮರಳಲು ಸಂತಸವಾಗುತ್ತಿದೆ. ಹಳದಿ ಜರ್ಸಿಯಲ್ಲಿ ಆಡಲು ಎದುರುನೋಡುತ್ತಿದ್ದೇನೆ. ನಾನು ಮತ್ತೊಮ್ಮೆ ಧೋನಿ ಭಾಯ್ ಜೊತೆಗೆ ಆಡಲಿದ್ದೇನೆ. ನಾನು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಅವರು ನಾಯಕನಾಗಿದ್ದರು. ಹೀಗಾಗಿ ಮಾಹಿ ಭಾಯ್ ಜೊತೆಗೆ ಆಡುವಾಗಿನ ಸಾಕಷ್ಟು ನೆನಪುಗಳಿಗೆ. ಹಾಗಾಗಿ ಅವರೊಂದಿಗೆ ಆಡುವುದನ್ನು ಕಾತರದಿಂದ ಎದುರುನೋಡುತ್ತಿದ್ದೇನೆ" ಎಂದಿದ್ದಾರೆ ಚೇತೇಶ್ವರ್ ಪೂಜಾರ.
"ಐಪಿಎಲ್ ಬಗ್ಗೆ ಮಾತನಾಡಬೇಕಾದರೆ ಇದು ಮನಸ್ಥಿತಿಯನ್ನು ಟೆಸ್ಟ್ ಕ್ರಿಕೆಟ್‌ನಿಂದ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಎಷ್ಟು ಬೇಗ ಸಾಧ್ಯವಾಗುತ್ತದೋ ಅಷ್ಟು ಬೇಗ ಆಟಕ್ಕೆ ಬದಲಾಯಿಸಿಕೊಳ್ಳಬೇಕು. ಉತ್ತಮ ಪೂರ್ವತಯಾರಿಯೊಂದಿಗೆ ನಾನು ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ" ಎಂದು ಚೇತೇಶ್ವರ್ ಪೂಜಾರ ಹೇಳಿಕೊಂಡಿದ್ದಾರೆ.
ಚೇತೇಶ್ವರ್ ಪೂಜಾರ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 50 ಲಕ್ಷ ರೂಪಾಯಿಗೆ ಖರೀದಿಸಿದೆ. ಈ ಸಂದರ್ಭದಲ್ಲಿ ಆಕ್ಷನ್ ಹಾಲ್‌ನಲ್ಲಿದ್ದ ಎಲ್ಲಾ ಪ್ರತಿನಿಧಿಗಳುಕೂಡ ಚಪ್ಪಾಳೆ ತಟ್ಟಿ ಪ್ರಶಂಸಿಸಿದ್ದಾರೆ. ಸದ್ಯ ಪೂಜಾರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದು ಅಂತಿಮ ಎರಡು ಟೆಸ್ಟ್ ಪಂದ್ಯಗಳನ್ನಾಡಲು ಟೀಮ್ ಇಂಡಿಯಾ ಜೊತೆಗೆ ಅಹ್ಮದಾಬಾದ್‌ನಲ್ಲಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications