ಶತಕ ಗಳಿಸಲು ಮತ್ತೆ ಪೂಜಾರ ವಿಫಲ: ಚೇತೇಶ್ವರ್ ಕೊನೆಯ ಬಾರಿ ಶತಕ ಸಿಡಿಸಿದ್ದು ಯಾವಾಗ ಗೊತ್ತಾ?

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಚಿತ್ತಗಾಂಗ್‌ಲ್ಲಿ ಆರಂಭವಾಗಿದೆ. ಮೊದಲ ದಿನ ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಸಮಬಲದ ಪ್ರದರ್ಶನ ನೀಡಿದ್ದು ಪೈಪೋಟಿಯ ಪ್ರದರ್ಶನ ಕಂಡು ಬಂದಿದೆ. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೌರವಯುತ ಮೊತ್ತದತ್ತ ಸಾಗಲು ಕಾರಣವಾಗಿದ್ದು ಚೇತೇಶ್ವರ್ ಪೂಜಾರ ಹಾಗೂ ಶ್ರೇಯಸ್ ಐಯ್ಯರ್ ಅವರ ಜೊತೆಯಾಟ. ಈ ಪೈಕಿ ಅನುಭವಿ ಆಟಗಾರ ಪೂಜಾರ 90 ರನ್‌ಗಳಿಸಿ ಔಟಾಗುವ ಮೂಲಕ ಶತಕ ವಂಚಿತವಾಗಿದ್ದಾರೆ.
ಈ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಕುಸಿಯುತ್ತಿದ್ದ ಟೀಮ್ ಇಂಡಿಯಾಗೆ ಆಸರೆಯಾದರು. ಶ್ರೇಯಸ್ ಐಯ್ಯರ್ ಜೊತೆ ಸೇರಿಕೊಂಡು ಐದನೇ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದರು. 19ನೇ ಶತಕ ಸಿಡಿಸುವ ಹೊಸ್ತಿಲಲ್ಲಿದ್ದಾಗ ಎಡವಿದ ಪೂಜಾರ ನಿರಾಸೆ ಅನುಭವಿಸಿದ್ದಾರೆ. ಈ ಮೂಲಕ ಮತ್ತೆ ಶತಕದ ಗಳಿಸುವ ಅವಕಾಶ ಕಳೆದುಕೊಂಡಿದ್ದಾರೆ.

ಪೂಜಾರ ಶತಕ ಗಳಿಸದೆ 4 ವರ್ಷ
ಟೀಮ್ ಇಂಡಿಯಾ ಟೆಸ್ಟ್ ತಂಡದ ಪ್ರಮುಖ ಆಟಗಾರ ಚೇತೇಶ್ವರ್ ಪೂಜಾರ ಮೂರಂಕಿ ದಾಟದೆ ಬರೊಬ್ಬರಿ 4 ವರ್ಷಗಳಾಗಿದೆ. 2018-19ರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಪೂಜಾರ ಕೊನೆಯ ಶತಕ ಸಿಡಿಸಿದ್ದಾರೆ. 2019ರ ಜನವರಿ ತಿಂಗಳಿನಲ್ಲಿ ನಡೆದ ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 193 ರನ್‌ಗಳನ್ನು ಸಿಡಿಸಿದ್ದರು. ಆ ಸರಣಿಯಲ್ಲಿ ತಮ್ಮ ಅದ್ಭುತ ಪ್ರದರ್ಶನ ನೀಡಿದ ಪೂಜಾರ ಒಟ್ಟು ಮೂರು ಶತಕ ಬಾರಿಸಿದ್ದು 74.42ರ ಸರಾಸರಿಯಲ್ಲಿ ಪೂಜಾರ 521 ರನ್‌ಗಳಿಸಿದ್ದರು.

ಟೀಮ್ ಇಂಡಿಯಾ ಅಗ್ರ ಕ್ರಮಾಂಕದಿಂದ ನಿರಾಸೆ
ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕ ನಿರಾಸೆ ಮೂಡಿಸಿದೆ. ಆರಂಭಿಕ ಜೋಡಿಯಾದ ಕೆಎಲ್ ರಾಹುಲ್ ಹಾಗೂ ಶುಬ್ಮನ್ ಗಿಲ್ ಅವರನ್ನು ಬೇರ್ಪಡಿಸುವ ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ ಟೀಮ್ ಇಂಡಿಯಾಗೆ ಆಘಾತ ನಿಡಿದರು. 20 ರನ್‌ಗಳಿಸಿದ ಶುಬ್ಮನ್ ಗಿಲ್ ತೈಜುಲ್ ಇಸ್ಲಾಮ್‌ಗೆ ಬಲಿಯಾದರು. ಬಳಿಕ ವಿರಾಟ್ ಕೊಹ್ಲಿ ಕೂಡ ತೈಜುಲ್ ಎಸೆತದಲ್ಲಿ ಕೇವಲ 1 ರನ್‌ಗಳಿಸಿದ್ದಾಗ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಭರವಸೆ ಮುಡಿಸಿದ ರಿಷಬ್ ಪಂತ್ ಮೆಹದಿ ಹಸನ್‌ಗೆ ವಿಕೆಟ್ ಒಪ್ಪಿಸಿದರು.

ಭಾರತಕ್ಕೆ ಆಸರೆಯಾದ ಪೂಜಾರ- ಶ್ರೇಯಸ್
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದು ಚೇತೇಶ್ವರ್ ಪೂಜಾರ ಹಾಗೂ ಶ್ರೇಯಸ್ ಐಯ್ಯರ್ ಜೋಡಿ. ಭರ್ಜರಿ ಶತಕದ ಜೊತೆಯಾಟ ನೀಡಿದ ಆ ಆಟಗಾರರು ತಂಡವನ್ನು ಕುಸಿತದಿಂದ ಪಾರು ಮಾಡಿದ್ದಾರೆ. ಆದರೆ ಪೂಜಾರ ಶತಕಗಳಿಸುವ ಅವಕಾಶವನ್ನು ಕಳೆದುಕೊಂಡರೆ ಶ್ರೇಯಸ್ ಐಯ್ಯರ್ 82 ರನ್‌ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಅಕ್ಷರ್ ಪಟೇಲ್ ದಿನದಾಟದ ಅಂತಿಮ ಎಸೆತದಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆಗೆ ಕಾರಣವಾದರು

ಇತ್ತಂಡಗಳ ಆಡುವ ಬಳಗ
ಬಾಂಗ್ಲಾದೇಶ ಆಡುವ ಬಳಗ: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಎಬಾಡೋತ್ ಹೊಸೈನ್
ಬೆಂಚ್: ಮಹಮ್ಮದುಲ್ ಹಸನ್ ಜಾಯ್, ಮೊಮಿನುಲ್ ಹಕ್, ಶೋರಿಫುಲ್ ಇಸ್ಲಾಂ, ಅನಾಮುಲ್ ಹಕ್, ರೆಜೌರ್ ರೆಹಮಾನ್ ರಾಜ
ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ಕೆಎಲ್ ರಾಹುಲ್ (ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್,
ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಶ್ರೀಕರ್ ಭರತ್, ನವದೀಪ್ ಸೈನಿ, ಅಭಿಮನ್ಯು ಈಶ್ವರನ್, ಸೌರಭ್ ಕುಮಾರ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications