Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ರಿಯನ್ ಲಾರಾ ದಾಖಲೆ ಅಳಿಸಿದ ಪೂಜಾರ: ಬಿಸಿಸಿಐ ಆಯ್ಕೆ ಸಮಿತಿ ಚಿತ್ತ ಕದಿಯುತ್ತಾರಾ ಚೇತೇಶ್ವರ್?

ಟೀಮ್ ಇಂಡಿಯಾದ ಟೆಸ್ಟ್‌ ಸ್ಪೇಷಲಿಸ್ಟ್‌ ಬ್ಯಾಟರ್‌ ಚೇತೇಶ್ವರ್ ಪೂಜಾರ ಸದ್ಯ ಭಾರತ ಟೆಸ್ಟ್ ತಂಡದಿಂದ ಹೊರಗಿದ್ದಾರೆ. ಇವರು ಟೆಸ್ಟ್‌ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಇವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ಬಾರ್ಡರ್ ಗವಾಸ್ಕರ್‌ ಸರಣಿಗೂ ಮುನ್ನ ತಮ್ಮನ್ನು ತಂಡಕ್ಕೆ ಆಯ್ಕೆ ಮಾಡುವಂತೆ ಚೇತೇಶ್ವರ್ ಪೂಜಾರ ದೇಶೀಯ ಟೂರ್ನಿಯಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.

ಪ್ರಸ್ತುತ, 2024 ರ ರಣಜಿ ಟ್ರೋಫಿಯಲ್ಲಿ ಛತ್ತೀಸ್‌ಗಢ ಮತ್ತು ಸೌರಾಷ್ಟ್ರ ನಡುವಿನ ಪಂದ್ಯದಲ್ಲಿ ಪೂಜಾರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಪೂಜಾರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಛತ್ತೀಸ್‌ಗಢ ವಿರುದ್ಧ ಅಬ್ಬರದ ಪ್ರದರ್ಶನ ನೀಡಿರುವ ಚೇತೇಶ್ವರ್‌ ದ್ವಿಶತಕ ಬಾರಿಸಿ ಅಬ್ಬರಿಸಿದ್ದಾರೆ. ರಣಜಿ ಟ್ರೋಫಿ ಪಂದ್ಯದಲ್ಲಿ ಪೂಜಾರ 383 ಎಸೆತಗಳಲ್ಲಿ 25 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 234 ರನ್‌ ಸಿಡಿಸಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

Cheteshwar Pujara Scores Century in Ranji Trophy Overtakes Brian Lara in First-Class Centuries

ಲಾರಾ ದಾಖಲೆ ಅಳಿಸಿದ ಚೇತೇಶ್ವರ್

ಇದು ಪೂಜಾರ ಅವರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 66ನೇ ಶತಕವಾಗಿದೆ. ಇದರೊಂದಿಗೆ ಪೂಜಾರ ಕ್ರಿಕೆಟ್‌ ದಿಗ್ಗಜ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಲಾರಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 65 ಶತಕಗಳನ್ನು ಸಿಡಿಸಿದ್ದರು. ಇವರ ದಾಖಲೆಯನ್ನು ಪೂಜಾರ ಮೀರಿ ನಿಂತಿದ್ದಾರೆ. ಭಾರತ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ 81 ಶತಕಗಳನ್ನು ಬಾರಿಸಿದ್ದಾರೆ.

ರನ್‌ ಗಳಿಕೆಯಲ್ಲೂ ದಾಖಲೆ

ಚೇತೇಶ್ವರ್ ಪೂಜಾರ ಬರೀ ಶತಕಗಳ ಲೆಕ್ಕಾಚಾರದಲ್ಲಿ ಅಷ್ಟೇ ದಾಖಲೆಯನ್ನು ನಿರ್ಮಿಸಿಲ್ಲ. ಬದಲಿಗೆ ರನ್‌ ಕಲೆ ಹಾಕುವ ವಿಚಾರದಲ್ಲೂ ದಾಖಲೆ ಬರೆದಿದ್ದಾರೆ. ಇವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 21000 ರನ್ ಪೂರೈಸಿದ್ದಾರೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ನಾಲ್ಕನೇ ಭಾರತೀಯ ಬ್ಯಾಟರ್‌ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರಿಗಿಂತ ಹೆಚ್ಚು ಸುನಿಲ್ ಗವಾಸ್ಕರ್‌, ಸಚಿನ್ ತೆಂಡೂಲ್ಕರ್, ರಾಹುಲ್‌ ದ್ರಾವಿಡ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಬಾರಿಸಿದ್ದಾರೆ.

Cheteshwar Pujara Scores Century in Ranji Trophy Overtakes Brian Lara in First-Class Centuries

ಪೂಜಾರ ಸಾಧನೆ

ಚೇತೇಶ್ವರ್‌ ಪೂಜಾರ ಟೆಸ್ಟ್‌ ಸ್ಪೇಷಲಿಸ್ಟ್‌ ಬ್ಯಾಟರ್‌ ಇವರು ಒಂದೊಮ್ಮೆ ಕ್ರೀಸ್‌ನಲ್ಲಿ ನಿಂತಲ್ಲಿ ಔಟ್ ಮಾಡುವುದು ಕಷ್ಟ. ಇವರು ಭಾರತದ ಪರ 2010ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಇವರು ಟೀಮ್ ಇಂಡಿಯಾ ಪರ 103 ಟೆಸ್ಟ್ ಪಂದ್ಯಗಳಲ್ಲಿ 7195 ರನ್ ಗಳಿಸಿದ್ದು, ಇದರಲ್ಲಿ 19 ಶತಕಗಳು ಮತ್ತು 35 ಅರ್ಧ ಶತಕಗಳು ಸೇರಿವೆ.

ಪ್ರಸಕ್ತ ವರ್ಷ ಆಸ್ಟ್ರೇಲಿಯಾ ಪ್ರವಾಸವನ್ನು ಟೀಮ್ ಇಂಡಿಯಾ ಬೆಳೆಸಲಿದೆ. ಈ ವೇಳೆ ಟೀಮ್ ಇಂಡಿಯಾ ತಂಡಕ್ಕೆ ತಮ್ಮನ್ನು ಪರಿಗಣಿಸುವಂತೆ ಚೇತೇಶ್ವರ್ ಪೂಜಾರ ಆಯ್ಕೆ ಸಮಿತಿಯ ಗಮನ ಸೆಳೆಯುತ್ತಿದ್ದಾರೆ. ಬಾರ್ಡರ್‌ ಗವಾಸ್ಕರ್ ಸರಣಿಯಲ್ಲಿ ಪೂಜಾರಾ ಆಡುತ್ತಾರಾ ಎಂಬ ಕುತೂಹಲ ಮನೆ ಮಾಡಿದೆ.

Story first published: Monday, October 21, 2024, 18:46 [IST]
Other articles published on Oct 21, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+