ಕೌಂಟಿಯಲ್ಲಿ ಚೊಚ್ಚಲ ಶತಕ ಸಿಡಿಸಿದ ಚೇತೇಶ್ವರ್ ಪೂಜಾರಾ
ಲಂಡನ್, ಮೇ 27: ಇಂಗ್ಲೆಂಡ್ ಕೌಂಟಿ ಚಾಂಪಿಯನ್ ಶಿಪ್ ಡಿವಿಷನ್-2 ಕ್ರಿಕೆಟ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಭಾರತದ ಅಗ್ರಗಣ್ಯ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರಾ ಅವರು ಚೊಚ್ಚಲ (112 ರನ್) ಶತಕ ಬಾರಿಸಿದ್ದಾರೆ. ನಾಟಿಂಗ್‌ಹ್ಯಾಮ್ ಶೈರ್ ತಂಡದ ಪರವಾಗಿ ಶತಕ ಬಾರಿಸಿದ ಪೂಜಾರಾ ಅವರು 39ನೇ ಪ್ರಥಮದರ್ಜೆ ಶತಕ ಪೂರೈಸಿದರು.
ಭಾರತದ ಆಟಗಾರ ಪೂಜಾರ ಅವರು ಶುಕ್ರವಾರದಂದು ಗ್ಲೌಸೆಸ್ಟರ್‌ಶೈರ್ ವಿರುದ್ಧ ಗ್ಲೌಸೆಸ್ಟರ್ ಶೈರ್ ವಿರುದ್ಧ ನಾಟಿಂಗ್ ಹ್ಯಾಮ್ ಶೈರ್ ತಂಡದ ಪರವಾಗಿ ಶತಕ ಗಳಿಸಿದರು. 174 ಎಸೆತಗಳಲ್ಲಿ 100ರನ್ ಗಡಿ ದಾಟಿದ ಪೂಜಾರ ಅವರು ಒಟ್ಟು 13 ಬೌಂಡರಿಗಳನ್ನು ಬಾರಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಅವರ 39ನೇ ಶತಕವಾಗಿದೆ.

ಪಂದ್ಯದ 82ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ಕ್ರೇಗ್ ಮೈಲ್ಸ್ ಎಸೆತದಲ್ಲಿ ಅವರು ಔಟಾದ ಪೂಜಾರ ಅವರು 12 ಸಾವಿರ ರನ್‌ಗಳನ್ನು ಗಳಿಸಲು ಇನ್ನೂ ಕಾಯಬೇಕಿದೆ. ಪೂಜಾರ ಅವರು ಮೈಕೆಲ್ ಲಾಂಬ್ ಜತೆಗೂಡಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 185 ರನ್‌ಗಳ ಬಲದಿಂದ ನಾಟಿಂಗ್‌ಹ್ಯಾಮ್‌ಶೈರ್ ತಂಡವು ದಿನದಾಟದ ಅಂತ್ಯಕ್ಕೆ 307 ರನ್ ಗಳಿಸಿತ್ತು. ಪೂಜಾರ ಅವರು ಒಟ್ಟು 48 ಟೆಸ್ಟ್‌ಗಳನ್ನು ಆಡಿದ್ದು 11 ಶತಕ ಮತ್ತು 15 ಅರ್ಧಶತಕಗಳನ್ನು ಗಳಿಸಿದ್ದಾರೆ.(ಪಿಟಿಐ)
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications