Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೃತ್ತಿ ಜೀವನದ ಚೊಚ್ಚಲ ಟಿ20 ಶತಕ ಚಚ್ಚಿದ ಟೆಸ್ಟ್ ಸ್ಟಾರ್ ಪೂಜಾರ!

Cheteshwar Pujara slams maiden T20 hundred off 61 balls

ಇಂದೋರ್, ಫೆಬ್ರವರಿ 21: ಟೆಸ್ಟ್ ಕ್ರಿಕೆಟ್‌ನ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಈ ಹಿಂದೆ ಟಿ20ಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದಿಲ್ಲ. ಆದರೆ ಗುರುವಾರ (ಫೆಬ್ರವರಿ 21) ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 1ನೇ ಸುತ್ತಿನ ಗ್ರೂಪ್ ಸಿ ಪಂದ್ಯದಲ್ಲಿ ಪೂಜಾರ ಶತಕ ಬಾರಿಸಿದ್ದಾರೆ.

ರೈಲ್ವೇಸ್ ಮತ್ತು ಸೌರಾಷ್ಟ್ರ ತಂಡಗಳ ನಡುವಿನ ಟಿ20 ಪಂದ್ಯದಲ್ಲಿ ಸೌರಾಷ್ಟ್ರ ಪ್ರತಿನಿಧಿಸಿದ್ದ ಚೇತೇಶ್ವರ 61 ಎಸೆತಗಳಿಗೆ ಭರ್ತಿ 100 ರನ್ ಗಳಿಸಿದರು. ಇದು ಪೂಜಾರ ಅವರಿಂದಾಗ ಚೊಚ್ಚಲ ಟಿ20 ಶತಕ. ಆದರೆ ಈ ಪಂದ್ಯವನ್ನು ರೈಲ್ವೇಸ್ ತಂಡ 5 ವಿಕೆಟ್ ಗಳಿಂದ ಗೆದ್ದುಕೊಂಡಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸೌರಾಷ್ಟ್ರ, ಹಾರ್ವಿಕ್ ದೇಸಾಯ್ 34, ಪೂಜಾರ 100, ಕನ್ನಡಿಗ ರಾಬಿನ್ ಉತ್ತಪ್ಪ 46 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 188 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ರೈಲ್ವೇಸ್, ಮೃಣಾಲ್ ದೇವಧಾರ್ 49, ಪ್ರಥಮ್ ಸಿಂಗ್ 40, ಅಭಿನವ್ ದೀಕ್ಷಿತ್ 37 ರನ್ ಬೆಂಬಲದೊಂದಿಗೆ 19.4 ಓವರ್‌ಗೆ 5 ವಿಕೆಟ್ ಕಳೆದು 190 ರನ್ ಬಾರಿಸಿತು.

114 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಪೂಜಾರ 51.19ರ ಸರಾಸರಿಯಲ್ಲಿ 5,426 ರನ್ ಕಲೆ ಹಾಕಿದ್ದಾರೆ. 206 ವೈಯಕ್ತಿಯ ಅಧಿಕ ರನ್ ಬಾರಿಸಿದ್ದಾರೆ. ಆದರೆ 22 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 390 ಒಟ್ಟು ರನ್ ಮತ್ತು 51 ವೈಯಕ್ತಿಕ ಅತ್ಯಧಿಕ ರನ್ ಬಾರಿಸಿದ್ದರು. ಪೂಜಾರ ಪಾಲಿಗೆ ಈ ಟಿ20 ಶತಕ ವೃತ್ತಿ ಜೀವನದ ಶ್ರೇಷ್ಠ ಟಿ20 ಸಾಧನೆಯಾಗಿದೆ.

Story first published: Thursday, February 21, 2019, 15:23 [IST]
Other articles published on Feb 21, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+